ಚಂದ್ರಬಾಬು ನಾಯ್ಡು ಬಂಧನ; ಉದ್ದೇಶಪೂರ್ವಕವಾಗಿ ಜೈಲಿಗೆ ಕಳುಹಿಸಲಾಗಿದೆ ಎಂದು ಗುಡುಗಿದ ಪುತ್ರ ನಾರಾ ಲೋಕೇಶ್​

Nara-Lokesh
Published on

ಅಮರಾವತಿ: ಕೌಶಲ್ಯಭಿವೃದ್ದಿ ನಿಗಮದಲ್ಲಿನ ಬಹುಕೋಟಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಐಡಿ ವಶದಲ್ಲಿರುವ ಆಂಧ್ರಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನವನ್ನು ಖಂಡಿಸಿರುವ ಪುತ್ರ ನಾರಾ ಲೋಕೇಶ್​ ಮುಖ್ಯಮಂತ್ರಿ ಜಗನ್​ಮೋಹನ್​ ರೆಡ್ಡಿ ವಿರುದ್ಧ ಹರಿಹಾಯ್ದಿದ್ದಾರೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್​ಮೊಹನ್​ ರೆಡ್ಡಿ ಒಬ್ಬ ಸೈಕೋ ಎಂದು ಕರೆದಿರುವ ನಾರಾ ಲೋಕೇಶ್ ನಮ್ಮ ಕುಟುಂಬದ ವಿರುದ್ಧ​ ಅವರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ.

ಭ್ರಷ್ಟಾಚಾರ ಚಂದ್ರಬಾಬು ನಾಯ್ಡು ಅವರ ರಕ್ತದಲ್ಲಿಲ್ಲ, ಅವರು ದೇಶದ ಪ್ರತಿಷ್ಠಿತ ರಾಜಕೀಯ ನಾಯಕರಲ್ಲಿ ಒಬ್ಬರು. ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿ ಉದ್ದೇಶಪೂರ್ವಕವಾಗಿ ನಮ್ಮ ತಂದೆಯವರನ್ನು ಜೈಲಿಗೆ ಹಾಕಿಸಿದ್ದಾರೆ. ಬೇರೆ ಬೇರೆ ರಾಜಕೀಯ ಪಕ್ಷದ ನಾಯಕರು ನನಗೆ ಕರೆ ಮಾಡಿ ಧೈರ್ಯ ತುಂಬಿದ್ದಾರೆ. ಇದರಲ್ಲೇ ಗೊತ್ತಾಗುತ್ತದೆ ಅವರು ಮಹಾನ್​ ವ್ಯಕ್ತಿತ್ವವುಳ್ಳವರು ಎಂದು.

ಜಗನ್​ ಮೋಹನ್​ ರೆಡ್ಡಿಯವರೇ ನಿಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗ್ಗೆ ನಾನು ಜನರಿಗೆ ಹೇಳಬಹುದೇ. ವಿವೇಕಾನಂದ ಹತ್ಯೆ ಪ್ರಕರಣದಲ್ಲಿ ಕಡಪ ಸಂಸದ ಅವಿನಾಶ್​ ರೆಡ್ಡಿ ನಿಮ್ಮನ್ನು ರಕ್ಷಿಸಿದ್ದುಕ ಸುಳ್ಳಾ. ಜಗನ್​ ಮೋಹನ್​ ರೆಡ್ಡಿ ನಮ್ಮ ಕುಟುಂಬದ ವಿರುದ್ಧ​ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ನಾರಾ ಲೋಕೇಶ್​ ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net