More

    ಅಕ್ರಮ ಸಾಲ ಪ್ರಕರಣ: ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಪತಿ ದೀಪಕ್​ ಕೊಚ್ಚಾರ್​ ಬಂಧನ

    ನವದೆಹಲಿ: ವಿಡಿಯೋಕಾನ್​-ಐಸಿಐಸಿಐ ಬ್ಯಾಂಕ್​ ಅಕ್ರಮ ಸಾಲ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬ್ಯಾಂಕ್​ನ ಮಾಜಿ ಸಿಇಒ ಚಂದಾ ಕೊಚ್ಚಾರ್​ ಅವರ ಪತಿ ದೀಪಕ್​ ಕೊಚ್ಚಾರ್​ರನ್ನು ಇಂದು ಜಾರಿ ನಿರ್ದೇಶನಾಲಯ ಬಂಧಿಸಿದೆ.
    ಅಕ್ರಮ ಸಾಲ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೀಪಕ್​ ವಿರುದ್ಧ ದೃಢವಾದ ಸಾಕ್ಷಿಗಳು ಸಿಕ್ಕ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿತ್ತು. ವಿಚಾರಣೆಯ ವೇಳೆ ದೀಪಕ್ ಕೊಚ್ಚಾರ್​​ಗೆ ಹಲವು ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ. ಕೆಲವು ವಹಿವಾಟುಗಳ ಬಗ್ಗೆ ಕೇಳಿದಾಗ ಅವರಿಗೆ ಸಮರ್ಥವಾಗಿ ವಿವರಣೆ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಇದನ್ನೂ ಓದಿ: VIDEO: ‘ರೇಪ್ ಕೇಸ್​​’ ಬೆದರಿಕೆ ಒಡ್ಡಿದ್ದ ಸಂಗೀತಾಗೆ ಡ್ರಗ್​ ಪೆಡ್ಲರ್​ ರಾಹುಲ್​ ಸಖತ್ ಕ್ಲೋಸ್​!; ಫೋಟೋಗಳು ವೈರಲ್

    ಚಂದಾ ಕೊಚ್ಚರ್​ ಐಸಿಐಸಿಐ ಬ್ಯಾಂಕ್​​ನ ಸಿಇಒ ಆಗಿದ್ದಾಗ 2009-2011ರ ಅವಧಿಯಲ್ಲಿ ವಿಡಿಯೋಕಾನ್​ಗೆ ಸುಮಾರು 3,250 ಕೋಟಿ ರೂ. ಅಕ್ರಮ ಸಾಲ ನೀಡಿದ್ದರು. ಈ ಸಾಲದ ಮೊತ್ತವನ್ನು ಚಂದಾ ಅವರು ಐಸಿಐಸಿಐ ವಾರ್ಷಿಕ ಲೆಕ್ಕಾಚಾರದಿಂದ ಗೌಪ್ಯವಾಗಿರಿಸಿಟ್ಟಿದ್ದರು. ಅದಾದ ಬಳಿಕ ವಿಡಿಯೋಕಾನ್​ ದೀಪಕ್​ ಕೊಚ್ಚಾರ್​ ಅವರ ಸಂಸ್ಥೆಯಲ್ಲಿ ಸುಮಾರು 64 ಕೋಟಿ ರೂ.ಹೂಡಿಕೆ ಮಾಡಿತ್ತು. ಹಾಗೇ ಮ್ಯಾಟಿಕ್ಸ್​ ಫರ್ಟಿಲೈಸರ್​ ಕೂಡ 325 ಕೋಟಿ ರೂ. ಹೂಡಿಕೆ ಮಾಡಿತ್ತು.

    ಈಗಾಗಲೇ ಇಡಿ ಚಂದಾ ಕೊಚ್ಚಾರ್​ ಮತ್ತು ವಿಡಿಯೋಕಾನ್​ ವಿಡಿಯೋಕಾನ್ ವ್ಯವಸ್ಥಾಪಕ ನಿರ್ದೇಶಕ ವೇಣುಗೋಪಾಲ್​ ಧೂತ್ ಅವರ ಮನೆ, ನಿವಾಸದ ಮೇಲೆಯೂ ದಾಳಿ ನಡೆಸಿ, ವಿಚಾರಣೆ ನಡೆಸುತ್ತಿದೆ. (ಏಜೆನ್ಸೀಸ್)

    ಪ್ರತಿಯೊಬ್ಬರ ಜಾತಕ ಕಳ್ಳರ ಈ ಬರಹದಲ್ಲಿದೆ! ನಿಮ್ಮ ಮನೆಯಲ್ಲೂ ಕಂಡರೆ ಇರಲಿ ಎಚ್ಚರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts