More

    ವಿಶ್ವದ ಜ್ವಲಂತ ಸಮಸ್ಯೆಗಳಿಗೆ ಗೌತಮನೇ ವೈದ್ಯ

    ಚಾಮರಾಜನಗರ:ವಿಶ್ವದ ಜ್ವಲಂತ ಸಮಸ್ಯೆಗಳಿಗೆ ಗೌತಮ ಬುದ್ಧನೇ ವೈದ್ಯನಾಗಿದ್ದು, ಇಡೀ ವಿಶ್ವವೇ ಬುದ್ಧನತ್ತ ಮುಖ ಮಾಡಿದೆ ಎಂದು ಕೊಳ್ಳೇಗಾಲ ಜೇತವನ ಬೌದ್ಧ ವಿಹಾರದ ಭಿಕ್ಕು ಮನೋರಖ್ಖಿತ ಬಂತೇಜಿ ಹೇಳಿದರು.

    ನಗರದ ಸಾರನಾಥ ಬೌದ್ಧ ವಿಹಾರದಲ್ಲಿ ಭಾರತೀಯ ಬೌದ್ಧ ಮಹಾಸಭಾ ತಾಲೂಕು ವಿಭಾಗ ಅಯೋಜಿಸಿದ್ದ ವೈಶಾಖ ಬುದ್ಧ ಪೂರ್ಣಿಮೆ 2568ನೇ ಪವಿತ್ರ ಬುದ್ಧ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
    ವೈಶಾಖ ಬುದ್ಧ ಪೂರ್ಣಿಮೆಯನ್ನು ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತದೆ. ಏಷ್ಯಾ ಖಂಡದ ಬೌದ್ಧ ರಾಷ್ಟ್ರಗಳು, ಯುರೋಪ್, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ 2568ನೇ ವೈಶಾಖ ಬುದ್ಧ ಪೂರ್ಣಿಮೆಯನ್ನು ಸಡಗರ, ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ ಎಂದರು.

    ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಬೌದ್ಧ ಧಮ್ಮಾ ಸ್ವೀಕರಿಸಿದ ಮೇಲೆ ಭಾರತದಲ್ಲಿ ಬೌದ್ಧ ಧಮ್ಮಾ ಕ್ರಾಂತಿ ಉಂಟು ಮಾಡಿದೆ. ರಾಜ್ಯದ 127 ಬೌದ್ಧ ವಿಹಾರಗಳು ಹಾಗೂ ಅನೇಕ ಸಂಘಟನೆಗಳು ಬುದ್ಧ ಜಯಂತಿ ಆಚರಿಸುತ್ತಾರೆ. ವಿಶ್ವದ ಬೆಳಕು ಗೌತಮ ಬುದ್ಧರು ಪ್ರೀತಿ, ಕರುಣೆ, ಮೈತ್ರಿ ಬೋಧಿಸಿ ವಿಶ್ವಕ್ಕೆ ಮಾದರಿ ಆಗಿದ್ದಾರೆ. ದೇಶದ ಶೋಷಿತ ಸಮುದಾಯಗಳ ಮಾಸಿನಕ ವಿಮೋಚನೆಗೆ ಧಮ್ಮಾ ಮಾರ್ಗವಾಗಿದೆ ಎಂದರು.

    ಭಾರತೀಯ ಬೌದ್ಧ ಮಹಾಸಭಾದ ತಾಲೂಕು ಅಧ್ಯಕ್ಷ ಎಂ.ಸಿದ್ದರಾಜು ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ ಪ್ರಸನ್ನ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಖಜಾಂಚಿ ಡಿ.ಸೋಮಣ್ಣ ಪ್ರಾಸ್ತಾವಿಕ ಭಾಷಣ ಮಾಡಿದರು.

    ಮಹಾಸಭಾದ ಜಿಲ್ಲಾಧ್ಯಕ್ಷ ಆರ್.ಬಸವರಾಜು, ಸಂಸ್ಕಾರ ವಿಭಾಗದ ಉಪಾಧ್ಯಕ್ಷ ಪುಟ್ಟಸ್ವಾಮಿ, ಪ್ರವಾಸ ಮತ್ತು ಪ್ರಚಾರ ಸಮಿತಿ ಉಪಾಧ್ಯಕ್ಷ ಉಮೇಶ್‌ಕುದರ್, ಮಹಿಳಾ ವಿಭಾಗದ ಉಪಾಧ್ಯಕ್ಷೆ ನಾಗಶಿಲ್ಪ, ಎಸ್‌ಸ್ಸಿ,/ಎಸ್ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಎ.ಶಿವಣ್ಣ, ಪರಿಶಿಷ್ಟ ಜಾತಿ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ದರಾಜು, ರಮಾಬಾಯಿ ಸಂಘದ ಅಧ್ಯಕ್ಷ ಪುಷ್ಪ ಮರಿಸ್ವಾಮಿ, ಬುದ್ಧನಗರ ನಾಗರೀಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮಹದೇವಯ್ಯ, ಕೆಇಬಿ ಸಹಾಯಕ ಇಂಜಿನಿಯರ್ ಸಿದ್ದರಾಜಪ್ಪ, ವಕೀಲರಾದ ನಾಗರಾಜು, ನಾಗಣ್ಣ, ಯಜಮಾನ ಬಸವಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts