More

    ಚಾಂಪಿಯನ್ ಪಟ್ಟಕ್ಕೇರಿದ ಎಸಿಸಿ ತಂಡ

    ಜಗಳೂರು: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕಳೆದ ಆರು ದಿನಗಳಿಂದ ನಡೆದ ಜೆಪಿಎಲ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್‌ಗೆ ಶುಕ್ರವಾರ ತೆರೆ ಬಿದ್ದಿದ್ದು, ಅಂತಿಮ ಫೈನಲ್ ಪಂದ್ಯದಲ್ಲಿ ಎಸಿಸಿ ತಂಡ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಪಟ್ಟ ಅಲಂಕರಿಸಿತು. ಡಾನ್ ವಾರಿಯರ್ಸ್‌ ತಂಡ ದ್ವಿತೀಯ ಸ್ಥಾನ ಪಡೆಯುವ ಮೂಲಕ 50 ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿ ತನ್ನದಾಗಿಸಿಕೊಂಡಿತು.

    ಟಾಸ್ ಸೋತು ಮೊದಲ ಬ್ಯಾಟಿಂಗ್‌ಗೆ ಇಳಿದ ಎಸಿಸಿ ತಂಡ 6 ಓವರ್‌ಗೆ 4 ವಿಕೆಟ್ ಕಳೆದುಕೊಂಡು 54 ರನ್‌ಗಳ ಗುರಿ ನೀಡಿತು. ನಂತರ ಬ್ಯಾಟಿಂಗ್‌ಗೆ ಇಳಿದ ಡಾನ್ ವಾರಿಯರ್ಸ್‌ ತಂಡ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು 22 ರನ್‌ಗಳಿಗೆ ಆಲೌಟ್ ಆಯಿತು. ಇದರ ಮೂಲಕ ಎಸಿಸಿ 32 ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಿತು. ಪ್ರಥಮ ಸ್ಥಾನ ಪಡೆದ ಎಸಿಸಿಗೆ 1 ಲಕ್ಷ ರೂ. ನಗದು ವಿತರಣೆ ಮಾಡಲಾಯಿತು.

    ಬೆಸ್ಕಾಂ ತಂಡದ ರೋಷನ್ ಮ್ಯಾನ್ ಆಫ್ ದ ಮ್ಯಾಚ್ ಪಡೆದರು. ಉತ್ತಮ ಬ್ಯಾಟರ್ ಆಗಿ ವಾಲ್ಮೀಕಿ ತಂಡದ ರಮೇಶ್, ಬೆಸ್ಟ್ ಬೋಲರ್ ಎಸಿಸಿ ವಾರಿಯರ್ಸ್‌ ತಂಡದ ಅಭಿ, ಉತ್ತಮ ವಿಕೇಟ್ ಕೀಪರ್ ಆಗಿ ನಾಗರಾಜ್ ಹೊರಹೊಮ್ಮಿದರು.

    ಸಮಾರೋಪ ಸಮಾರಂಭ:
    ಮುಂದಿನ ವರ್ಷದ ಕ್ರಿಕೆಟ್ ಟೂರ್ನಮೆಂಟ್‌ಗೆ ತಾಲೂಕು ಕ್ರೀಡಾಂಗಣ ಅಭಿವೃದ್ದಿಪಡಿಸಿ ಕ್ರೀಡಾಕೂಟಕ್ಕೆ ಪ್ರೋತ್ಸ್ಸಾಹಿಸಲಾಗುವುದು ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.
    ಕ್ರೀಡಾಕೂಟ ಸಮಾರೋಪದಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು.

    ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಜೆ.ಬಿ. ವಿನಯ್‌ಕುಮಾರ್ ಮಾತನಾಡಿ, ಕ್ರೀಡೆಗಳಿಗೆ ಉತ್ತೇಜನ ನೀಡುವ ಸಂಕಲ್ಪದೊಂದಿಗೆ 1 ಲಕ್ಷ ರೂ. ನೀಡುವ ಮೂಲಕ ಕ್ರೀಡೆಗೆ ಪ್ರೋತ್ಸ್ಸಾಹ ನೀಡಿದ್ದೇನೆ ಎಂದರು.

    ಬಂಗ್ಲೆ ಫರವೇಜ್ ಅವರು ದ್ವಿತೀಯ ಸ್ಥಾನ ಪಡೆದ ಡಾನ್‌ವಾರಿಯರ್ಸ್‌ ತಂಡಕ್ಕೆ 50 ಸಾವಿರ ರೂ. ಹಾಗೂ ಆಕರ್ಷಕ ಟ್ರೋಫಿ ವಿತರಿಸಿದರು.

    ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ. ಮಹೇಶ್ವರಪ್ಪ, ಕಾಂಗ್ರೆಸ್ ಮುಖಂಡರಾದ ಕೀರ್ತಿಕುಮಾರ, ಅನೂಪ್‌ರೆಡ್ಡಿ, ಬರ್ಕತ್‌ಅಲಿ, ಬಿಸ್ತುವಳ್ಳಿ ಬಾಬು, ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್. ಚಿದಾನಂದ, ಕೆಚ್ಚೇನಹಳ್ಳಿ ಹರೀಶ್, ಮಧುಸೂದನ್, ಶೇಖರಪ್ಪ, ಪಪಂ ಮಾಜಿ ಅಧ್ಯಕ್ಷ ಮಂಜುನಾಥ್, ದೊಣ್ಣೆಹಳ್ಳಿ ಮುಸ್ಟೂರಪ್ಪ, ಜೆಪಿಎಲ್‌ನ ಆಯೋಜಕರಾದ ನಾಗರಾಜು, ರೋಷನ್, ಎನ್.ಎಚ್. ಕುಮಾರ್, ರೋಷನ್, ಶಾರುಕ್, ಕೆಚ್ಚೇನಹಳ್ಳಿ ಹರೀಶ್, ಚಂದ್ರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts