More

    ಚಂಪಕಧಾಮಸ್ವಾಮಿ ರಥೋತ್ಸವ ಸಂಪನ್ನ, ನಿಷೇಧದ ನಡುವೆಯೂ ಜಾತ್ರೆ, ಸಾವಿರಾರು ಜನ ಭಾಗಿ

    ಆನೇಕಲ್: ಬನ್ನೇರುಘಟ್ಟದ ಚಂಪಕಧಾಮಸ್ವಾಮಿ ಬ್ರಹ್ಮರಥೋತ್ಸವ ಭಾನುವಾರ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.

    ಕರೊನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾತ್ರೆ, ರಥೋತ್ಸವ ನಿಷೇಧಿಸಿತ್ತು. ಆದರೂ ಭಕ್ತರು ತಲತಲಾಂತರಗಳಿಂದ ನಡೆಸಿಕೊಂಡು ಬಂದಿರುವ ರಥೋತ್ಸವವನ್ನು ಮೊಟಕುಗೊಳಿಸಬಾರದು ಎಂದು ಸ್ವಯಂ ಪ್ರೇರಿತರಾಗಿ ಆಗಮಿಸಿ ಯಶಸ್ವಿಗೊಳಿಸಿದರು.

    ಜಾತ್ರೆ ನಡೆಸುವಂತಿಲ್ಲ, ಯಾವುದೇ ಅಂಗಡಿ ತೆರೆಯುವಂತಿಲ್ಲ ಎಂದು ದೇವಾಲಯ ಆಡಳಿತ ಮಂಡಳಿ ಪ್ರಚಾರ ಮಾಡಿ ಬಹುತೇಕ ಅಂಗಡಿ ತೆರವುಗೊಳಿಸಿತ್ತು. ಇದರಿಂದ ಭಕ್ತರಿಗೆ ನಿರಾಸೆಯಾಗಿತ್ತು. ಇಂದು ಜಾತ್ರೆ ನಡೆಸುವ ಸುದ್ದಿ ತಿಳಿದು ಅಪಾರ ಭಕ್ತ ಸಮೂಹ ರಥೋತ್ಸವದಲ್ಲಿ ಭಾಗಿಯಾದರು.

    ಜಾತ್ರೆ ನಿಷೇಧಿಸಿದ್ದಾರೆ ಎಂಬ ಮಾಹಿತಿ ನಡುವೆಯೂ ಹರೆಕೆ ಹೊತ್ತಿದ್ದವರು ರಾತ್ರಿಯೇ ಬನ್ನೇರುಘಟ್ಟ ಹೊರವಲಯಕ್ಕೆ ಬಂದು ಅಲ್ಲಲ್ಲಿ ಬಿಡಾರ ಹಾಕಿಕೊಂಡು ಕರಗದ ರೀತಿಯಲ್ಲಿ ಮಲ್ಲಿಗೆ ಹೂವು ಹೊತ್ತು ವಾದ್ಯಗಳೊಂದಿಗೆ ಚಂಪಕಧಾಮಸ್ವಾಮಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಮೂರು ಕಿಮೀ ದೂರದ ಬೇಗಳಮ್ಮ ದೇವಾಲಯದವರೆಗೂ ನಡೆದು ಹರಕೆ ತಿರಿಸಿದರು.

    ಪ್ರತಿ ವರ್ಷ ತಮಿಳುನಾಡು ಬೆಂಗಳೂರಿನ ವಿವಿಧ ಭಾಗಗಳಿಂದ ಜನ ಬಂದು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಈ ವರ್ಷ ಕರೊನಾ ಭೀತಿ ಜತೆಗೆ ಜಾತ್ರೆ ನಿಷೇಧ ಮಾಡಲಾಗಿದೆ ಎಂಬ ಮಾಹಿತಿಯಿಂದ ಹೆಚ್ಚಿನ ಜನರು ಆಗಮಿಸಿರಲಿಲ್ಲ.

    ಬ್ರಹ್ಮರಥೋತ್ಸವಕ್ಕೂ ಮೊದಲೇ ಬೆಂಗಳೂರು ದಕ್ಷಿಣ ಶಾಸಕ ಎಂ.ಕೃಷ್ಣಪ್ಪ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬನ್ನೇರುಘಟ್ಟ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಗೋವಿಂದ್ ಭದ್ರತೆ ನಿಯೋಜಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts