More

    ಚಾಮರಾಜಪೇಟೆ ಪಿಎಸ್ಐ ಅಮಾನತು- ಬ್ಲ್ಯಾಕ್​ಮೇಲ್​ ದೂರು, ಅತ್ಯಾಚಾರದ ಪ್ರತಿದೂರು ದಾಖಲು

    ಬೆಂಗಳೂರು: ಅತ್ಯಾಚಾರ ದೂರಿನ ಕಾರಣ ಚಾಮರಾಜಪೇಟೆ ಪೊಲೀಸ್ ಠಾಣೆ ಪಿಎಸ್​ಐ ವಿಶ್ವನಾಥ್ ಬಿರಾದರ್ ಅಮಾನತುಗೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಎಸ್​ಪಿ ನೀಡಿದ ವರದಿ ಮೇರೆಗೆ ಪೊಲೀಸ್ ಇಲಾಖೆ ಈ ಕ್ರಮ ತೆಗೆದುಕೊಂಡಿದೆ.

    ಪ್ರೇಮ ಪ್ರಕರಣ?

    ಲ್ಯಾಪ್​ಟಾಪ್ ಕಳುವಾಗಿದೆ. ಪತ್ತೆ ಹಚ್ಚಿ ಕೊಡಿ ಎಂದು ದೂರು ನೀಡುವುದಕ್ಕಾಗಿ ಚಾಮರಾಜಪೇಟೆ ಪೊಲೀಸ್ ಠಾಣೆಗೆ ಬಂದಿದ್ದಳು ಯುವತಿ. ಅಲ್ಲಿ ಪಿಎಸ್​ಐ ವಿಶ್ವನಾಥ ಬಿರಾದಾರ್ ಪರಿಚಯವಾಗಿದೆ. 

    ಧರ್ಮಸ್ಥಳ ಪೊಲೀಸ್​ ಠಾಣೆಯಲ್ಲಿ ನವೆಂಬರ್ 11ರಂದು ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಯುವತಿ ಮತ್ತು ಬಿರಾದಾರ್ ಪರಸ್ಪರ ದೂರು ದಾಖಲಿಸಿಕೊಂಡಿದ್ದಾರೆ. ಯುವತಿಯ ದೂರಿನ ಪ್ರಕಾರ, ನವೆಂಬರ್ 9ರಂದು ಯುವತಿಯನ್ನು ಬಿರಾದಾರ್ ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿ ಲಾಡ್ಜ್​ನಲ್ಲಿ ಉಳಿದುಕೊಂಡಿದ್ದರು. ಮದುವೆಯಾಗುವುದಾಗಿ ನಂಬಿಸಿ ಕರೆದೊಯ್ಯಲಾಗಿತ್ತು. ಲಾಡ್ಜ್​ನಲ್ಲಿ ತಂಗಿದ್ದ ವೇಳೆ ಅತ್ಯಾಚಾರವೆಸಗಿ ಮದುವೆ ಆಗದೇ ಅಲ್ಲಿಂದ ವಾಪಸಾಗಿದ್ದಾರೆ ಎಂಬ ಆರೋಪವಿದೆ.

    ಇದನ್ನೂ ಓದಿ: ಈಗ ತಾನೇ ಬಿಜೆಪಿಗೆ ಎಂಟ್ರಿ ಕೊಟ್ಟಿದ್ದೇವೆ… ಅದೆಲ್ಲಾ ಎಲ್ಲಿ ನಮಗೆ ಹೇಳ್ತಾರೆ ! : ಸಹಕಾರಿ ಸಚಿವ ಸೋಮಶೇಖರ್

    ಬಿರಾದಾರ್ ದೂರಿನ ಪ್ರಕಾರ, ಯುವತಿ ಮದುವೆಯಾಗುವಂತೆ ಒತ್ತಾಯಿಸಿದ್ದಳು. ಮದುವೆಗೆ ಒಪ್ಪದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಬೆದರಿಕೆ ಒಡ್ಡಿದ್ದಲ್ಲದೆ, ಹತ್ತು ಲಕ್ಷ ರೂಪಾಯಿ ಕೊಡಬೇಕೆಂಬ ಬೇಡಿಕೆಯನ್ನೂ ಇಟ್ಟಿದ್ದಳು. ಒಂದೊಮ್ಮೆ ಹಣ ನೀಡದೇ ಹೋದರೆ ರೇಪ್ ಕೇಸ್ ಹಾಕುವುದಾಗಿ ಬೆದರಿಸಿದ್ದಾಗಿ ಆರೋಪವಿದೆ. (ದಿಗ್ವಿಜಯ ನ್ಯೂಸ್)

    ದಾಂಪತ್ಯ ಕಲಹ- ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಸೆಕ್ಯೂರಿಟಿ ಗಾರ್ಡ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts