More

    ವಿಶ್ವ ಅಂಗವಿಕಲರ ದಿನಾಚರಣೆ

    ಚಾಮರಾಜನಗರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಶನಿವಾರ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಶ್ರೀಧರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಎಲ್ಲ ಅಂಗವಿಕಲರು ವಿಕಲತೆ ಬಗ್ಗೆ ಮಾನಸಿಕ ಮನಸ್ಥಿತಿಗೆ ಒಳಗಾಗದೆ ಸಮಾಜದಲ್ಲಿರುವ ಎಲ್ಲರಂತೆ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

    ಕಾನೂನಿಗೆ ಸಂಬಂಧಿಸಿದಂತೆ ಅಂಗವಿಕಲರಿಗೆ ತೊಂದರೆಯಾದಲ್ಲಿ ಪ್ರಾಧಿಕಾರವನ್ನು ಸಂಪರ್ಕಿಸಿ ನೆರವನ್ನು ಪಡೆದುಕೊಳ್ಳಬಹುದು. ನವದೆಹಲಿಯ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಅಂಗವಿಕಲರಿಗಾಗಿಯೇ ಮಾನಸಿಕ ಅಸ್ವಸ್ಥರ ಹಾಗೂ ಅಂಗವಿಕಲರ ಅಧಿನಿಯಮ ಯೋಜನೆಯಡಿ ವಿಶೇಷವಾಗಿ ಕಾನೂನಿನ ನೆರವು ಪಡೆದುಕೊಳ್ಳಬಹುದು ಎಂದು ತಿಳಿಸಿದರು.

    ಕೆಎಸ್‌ಎಪಿಎಸ್‌ನ ಸಹ ನಿರ್ದೇಶಕ ಶ್ರೀನಿವಾಸ್, ನಿವೃತ್ತ ಎ.ಆರ್.ಟಿ. ಅಧಿಕಾರಿ ಡಾ. ಜಯಪಾಲ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ರವಿಕುಮಾರ್, ಚೈತನ್ಯ ನೆಟ್‌ವರ್ಕ್‌ನ ಅಧ್ಯಕ್ಷೆ ಭಾಗ್ಯಮ್ಮ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts