More

    ಪ್ರಕೃತಿ ರಕ್ಷಣೆ ಚಿಂತನೆಯ ಸಾರ ಮಕರ ಸಂಕ್ರಾಂತಿ

    ಚಾಮರಾಜನಗರ: ಪ್ರಕೃತಿ ಮತ್ತು ಮಾನವನಿಗೆ ಒಳಿತು ಬಯಸುವುದು ಮಕರ ಸಂಕ್ರಾಂತಿ ಹಬ್ಬದ ತತ್ವವಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಋಗ್ವೇದಿ ತಿಳಿಸಿದರು.


    ತಾಲೂಕಿನ ಅಮಚವಾಡಿ ಗ್ರಾಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಭಾನುವಾರ ಆಯೋಜಿಸಿದ್ದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉತ್ತರಾಯಣ ಪುಣ್ಯಕಾಲ ಹಾಗೂ ಮಕರ ಸಂಕ್ರಾಂತಿ ಸಂದರ್ಭದಲ್ಲಿ ಜಾನುವಾರುಗಳನ್ನು ಪೂಜಿಸಿ, ಪ್ರಕೃತಿಯನ್ನು ರಕ್ಷಿಸಿಕೊಳ್ಳುವ ಚಿಂತನೆಯ ಸಾರವೇ ಮಕರ ಸಂಕ್ರಾಂತಿ ಎಂದರು. ಅಮಚವಾಡಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಿವನಂಜಪ್ಪ, ಕಸಾಪ ನಿರ್ದೇಶಕ ಆರ್. ಮೂರ್ತಿ ಬಿಸಲವಾಡಿ, ಸದಸ್ಯರಾದ ಶಿವಸ್ವಾಮಿ, ಮಹೇಶ್ವರಿ , ಶೃತಿ, ಶ್ರೀಕಂಠ ನಾಯಕ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts