More

    ಸಚಿವ ಎಚ್.ಸಿ.ಮಹದೇವಪ್ಪ ಹೇಳಿಕೆ ಸರಿಯಲ್ಲ

    ಕೊಳ್ಳೇಗಾಲ: ಚಾಮರಾಜನಗರದಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಹನೂರು ಶಾಸಕ ಎಂ.ಆರ್.ಮಂಜುನಾಥ್ ಮುಂದೆ ಸಹಾಯ ಮಾಡುತ್ತಾರೆ ಎಂದು ಸಚಿವ ಎಚ್.ಸಿ.ಮಹದೇವಪ್ಪ ಹೇಳಿಕೆ ನೀಡಿರುವುದು ಸರಿಯಲ್ಲ. ಇದು ಹನೂರು ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಿಗೆ ಬೇಸರ ಉಂಟು ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ಪಾಳ್ಯ ಕೃಷ್ಣ ಹೇಳಿದರು.

    ಹನೂರು ಕ್ಷೇತ್ರಕ್ಕೆ ಮಾಜಿ ಸಚಿವ ದಿ.ರಾಜುಗೌಡ ಹಾಗೂ ಅವರ ಪುತ್ರ ಮಾಜಿ ಶಾಸಕ ಆರ್.ನರೇಂದ್ರ ರಾಜುಗೌಡರ ಕೊಡುಗೆ ಅಪಾರವಾಗಿದೆ. ಇವರ ಕುಟುಂಬ ಕ್ಷೇತ್ರಾದ್ಯಂತ ನೂರಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. 2023ರ ಚುನಾವಣೆಯಲ್ಲಿ ಆರ್.ನರೇಂದ್ರ ಪರಾಭವಗೊಂಡಿದ್ದರು ಕೂಡ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ. ಹೀಗಿರುವಾಗ ಸಚಿವ ಎಚ್.ಸಿ ಮಹದೇವಪ್ಪ ಅವರು ಜಿಲ್ಲೆಯಲ್ಲಿ ನಡೆದ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ 3 ಶಾಸಕರಿದ್ದಾರೆ. ಸಾಕಷ್ಟು ಕೆಲಸ ಮಾಡಿದ್ದರೂ ಆರ್.ನರೇಂದ್ರ ಅವರು ಹನೂರಿನಲ್ಲಿ ಸೋತರು. ಆದರೂ, ಹನೂರು ಶಾಸಕ ಎಂ.ಆರ್.ಮಂಜುನಾಥ್ ಸಹ ನಮಗೆ ಮುಂದೆ ಸಹಾಯ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ. ಈ ಮಾತು ಕಾಂಗ್ರೆಸ್ ಕಾರ್ಯಕರ್ತರಿಗೆ ನೋವು ತಂದಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಬೇಸರಿಸಿದರು.

    ಕಾಂಗ್ರೆಸ್ ಮುಖಂಡ ಮತೀನ್ ಮಾತನಾಡಿ, ಎಚ್.ಸಿ ಮಹದೇವಪ್ಪ ಅವರ ಹೇಳಿಕೆ ಖಂಡನೀಯ. ಹನೂರು ಕ್ಷೇತ್ರದಲ್ಲಿ ಎಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷದಿಂದ ಉತ್ತಮ ಮತ ದೊರೆತಿದೆ. ಈಗ ಚುನಾವಣೆ ನಡೆದರೂ 70 ಸಾವಿರ ಮತಗಳು ಕಾಂಗ್ರೆಸ್‌ಗೆ ಬರಲಿವೆ. ಮುಂಬರುವ ಲೋಕಸಭಾ ಚುನಾವಣೆಯ ನೇತೃತ್ವವನ್ನು ಆರ್.ನರೇಂದ್ರ ಅವರಿಗೆ ನೀಡಬೇಕೆಂದು ಆಗ್ರಹಿಸಿದರು.

    ಟಿಎಪಿಎಂಎಸ್ ಅಧ್ಯಕ ಚಿಕ್ಕಮಾದನಾಯಕ, ನಿರ್ದೇಶಕ ಜಗದೀಶ್ ನಾಯಕ, ಮುಖಂಡ ಯಡಕೂರಿಯ ಮಹದೇವ, ರಾಚಪ್ಪ, ಶಿವಶಂಕರ್ ಸತ್ತೇಗಾಲ, ಕೆಂಚಣ್ಣ, ತಮ್ಮಯ್ಯ, ಸತ್ತೇಗಾಲ ಗ್ರಾ.ಪಂ ಸದಸ್ಯ ಮಲ್ಲೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts