More

    ಶಿವರಾತ್ರಿ ಅಂಗವಾಗಿ ವಿರಕ್ತಮಠದಲ್ಲಿ ಲಿಂಗಧಾರಣೆ

    ಚಾಮರಾಜನಗರ: ಮಹಾಶಿವರಾತ್ರಿ ಅಂಗವಾಗಿ ನಗರದ ವಿರಕ್ತ ಮಠದಲ್ಲಿ ಇಷ್ಟಲಿಂಗಪೂಜೆ ಹಾಗೂ ಲಿಂಗಧಾರಣೆ ಕಾರ್ಯಕ್ರಮ ಬಹಳ ಶ್ರದ್ಧಾಭಕ್ತಿಯಿಂದ ನಡೆಯಿತು.

    ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ವಿರಕ್ತಮಠದ ಪೀಠಾಧ್ಯಕ್ಷ ಶ್ರೀಚನ್ನಬಸವೇಶ್ವರಸ್ವಾಮಿ ನೇತೃತ್ವದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿವರಾತ್ರಿ ಜಾಗರಣೆ, ಲಿಂಗೂಜೆ ಹಾಗೂ ಇಷ್ಟಲಿಂಗಧಾರಣೆ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗವಹಿಸಿ ಲಿಂಗಧಾರಣೆ ಮಾಡಿಸಿಕೊಂಡರು. ಬಳಿಕ ಶ್ರದ್ಧೆಯಿಂದ ಪೂಜೆಸಲ್ಲಿಸಿದ ನಾರಾರು ಜನರು ಭಕ್ತಭಾವ ಮೆರೆದರು. ನಗರ ಪ್ರದೇಶವಲ್ಲದೇ ಸುತ್ತಮುತ್ತಲಿನ ಗ್ರಾಮಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

    ಕಾರ್ಯಕ್ರಮಕ್ಕೂ ಮುನ್ನಾ ತಮಟೆ, ನಗಾರಿ, ವೀರಗಾಸೆ ಹಾಗೂ ಇನ್ನಿತರೆ ಜಾನಪದ ಕಲಾತಂಡಗಳು ನಡೆಸಿಕೊಟ್ಟ ಕಾರ್ಯಕ್ರಮ ಹಾಗೂ ಭಜನೆ ಮೇಳ ಭಕ್ತಾಧಿಗಳ ಗಮನಸೆಳೆಯಿತು. ಇಷ್ಟಲಿಂಗಧಾರಣೆ ಕಾರ್ಯಕ್ರಮದ ನಂತರ ಬದನವಾಳು ಭರತ್‌ಶಾಸೀ ಅವರ ತಂಡದಿಂದ ಶಿವ ಕಥೆಯನ್ನು ಆಯೋಜನೆಮಾಡಲಾಗಿತ್ತು. ಭಕ್ತಾಧಿಗಳು ಶಿವಕಥೆಯಲ್ಲಿ ತಲ್ಲೀನರಾಗಿ ಶಿವ ಆರಾಧನೆಯ ಜತೆಗೆ ಜಾಗರಣೆಯಲ್ಲಿ ಭಾಗಿಯಾದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ನಿರಂತರವಾಗಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

    ಹಲೋಗ್ರಾಂ ಲಿಂಗದರ್ಶನ:
    ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಮಹಾಶಿವರಾತ್ರಿಯ ಆಯೋಜಿಸಿದ್ದ ಹಲೋಗ್ರಾಂ ಲಿಂಗದರ್ಶನ ಶುಕ್ರವಾರವೂ ಮುಂದುವರಿಯಿತು. ಸಾವಿರಾರು ಜನರು ಭೇಟಿ ನೀಡಿ ಹಲೋಗ್ರಾಂ ಲಿಂಗದ ಜತಗೆ ಹಲವಾರು ಪುಣ್ಯ ಕ್ಷೇತ್ರಗಳ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನವನ್ನು ಸಾರ್ವಜನಿಕರು ಪಡೆದುಕೊಂಡು ಸಂತಸ ವ್ಯಕ್ತಪಡಿಸಿದರು. ಅದಲ್ಲದೇ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲೂ ಶಿವರಾತ್ರಿ ಅಂಗವಾಗಿ ಜಾಗರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ದರ್ಶನ ಪಡೆಯುವುದರ ಜತೆಗೆ ಶಿವಜಾಗರಣೆಯಲ್ಲಿ ಪಾಲ್ಗೊಂಡು ಪುನೀತರಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts