More

    ಶ್ರೀ ದೇವಲ ಮಹರ್ಷಿ ಜಯಂತ್ಯುತ್ಸವ

    ಕೊಳ್ಳೇಗಾಲ: ಪಟ್ಟಣದಲ್ಲಿ ಶ್ರೀ ದೇವಲ ಮಹರ್ಷಿ ಜಯಂತಿಯನ್ನು ದೇವಾಂಗ ಸಮುದಾಯದ ಮುಖಂಡರು ಗುರುವಾರ ವಿಜೃಂಭಣೆಯಿಂದ ಆಚರಿಸಿದರು.

    ಅಚ್ಗಾಳ್ ಯಾತ್ರಿ ನಿವಾಸ್ ವೃತ್ತದ ಸಮೀಪವಿರುವ ಶ್ರೀ ದೇವಲ ಮಹರ್ಷಿ ಹೆಬ್ಬಾಗಿಲಿನ ಬಳಿಯಿರುವ ಶ್ರೀ ದೇವರ ದಾಸಿಮಯ್ಯ ಅವರ ಪುತ್ಥಳಿಗೆ ದೇವಾಂಗಪೇಟೆಯ ಯಜಮಾನರು ಹಾಗೂ ಮುಖಂಡರು ಮಾಲಾರ್ಪಣೆ ಮಾಡಿದರು.
    ಶ್ರೀ ದೇವಲ ಮಹರ್ಷಿ ಜಯಂತಿ ಹಿನ್ನ್ನೆಲೆ, ದೇವಾಂಗ ಪೇಟೆಯಲ್ಲಿರುವ ಶ್ರೀ ಚೌಡೇಶ್ವರಿ ದೇವಾಲಯಲದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ ನಡೆಯಿತು. ದೇವರಿಗೆ ವಿಶೇಷ ಅಲಂಕಾರ, ರುದ್ರಾಭಿಷೇಕ, ಮಹಾಮಂಗಳಾರತಿ ಮಾಡಿದ ನಂತರ ದೇವಸ್ಥಾನದ ಆವರಣದಲ್ಲಿ ಶಕ್ತಿ ದೇವತೆಗಳ ಮೆರವಣಿಗೆ ನಡೆಸಿದರು.

    ಆ ನಂತರ, ಶ್ರೀ ಚೌಡೇಶ್ವರಿ ಕಲ್ಯಾಣ ಮಂಟಪ ಹಾಗೂ ಶ್ರೀ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕರಿಗೆ ಉಪಹಾರ ವ್ಯವಸ್ಥೆ ಮಾಡಲಾಯಿತು. ಸಂಜೆ ವೇಳೆ ದೇವಾಂಗ ಪೇಟೆಯ ಪ್ರಮುಖ ಬೀದಿಗಳಲ್ಲಿ ಶ್ರೀ ಚೌಡೇಶ್ವರಿ ಉತ್ಸವ ಮೂರ್ತಿಯ ಪಲ್ಲಕ್ಕಿ ಉತ್ಸವ ನಡೆಸಲಾಯಿತು. ಈ ವೇಳೆ ನೂರಾರು ಮಂದಿ ಪಾಲ್ಗೊಂಡಿದ್ದರು.

    ದೇವಾಂಗಪೇಟೆಯ ಯಜಮಾನರಾದ ಚಿಂತು ಪರಮೇಶ್, ಕೆ.ಎನ್.ಸುರೇಶ್, ಪಿ.ಎನ್.ಶಿವಕುಮಾರ್, ಲಕ್ಷ್ಮಣ್, ನಾಗರಾಜು, ನಾರಾಯಣಸ್ವಾಮಿ, ಮಹದೇವ, ಡಿ.ಜಿ.ಸುರೇಶ್, ಶಾಂತಮೂರ್ತಿ ಮುಖಂಡರಾದ ಶ್ರೀನಿವಾಸ್, ಮಂಜುನಾಥ್, ನಿರಂಜನ್ ರವಿ, ಎನ್.ಗಿರೀಶ್ ಬಾಬು, ಕಿರಣ್, ರೋಹಿತ್, ನಾಗೇಂದ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts