More

    ನೈತಿಕ ಮೌಲ್ಯ ಹೆಚ್ಚಿಸಲಿರುವ ಬೇಸಿಗೆ ಶಿಬಿರ

    ಚಾಮರಾಜನಗರ: ಬೇಸಿಗೆ ರಜೆಯಲ್ಲಿ ಮಕ್ಕಳು ಶಿಬಿರದಲ್ಲಿ ಭಾಗವಹಿಸುವುದರಿಂದ ನೈತಿಕ ಮೌಲ್ಯ ಹೆಚ್ಚಾಗುತ್ತದೆ ಎಂದು ಗ್ರೇಡ್ 2 ತಹಸೀಲ್ದಾರ್ ಗಿರಿಜಾ ಅಭಿಪ್ರಾಯಪಟ್ಟರು.

    ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಮಕ್ಕಳಿಗಾಗಿ ಏರ್ಪಡಿಸಿದ್ದ ಚಿಣ್ಣರ ಬೇಸಿಗೆ ಶಿಬಿರಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಇಲ್ಲಿ ಕಲಿಸುವ ರಾಜಯೋಗ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿ. ಸಂಸ್ಥೆಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಮಾತನಾಡಿ, ಮಕ್ಕಳು ಬೇಸಿಗೆ ಶಿಬಿರದಲ್ಲಿ ಎಲ್ಲರೊಂದಿಗೆ ಬೆರೆತು ಕಲಿಯುವುದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಮಕ್ಕಳಗೆ ಏಕಾಗ್ರತೆ ಅವಶ್ಯಕ. ಓದುವುದನ್ನೇ ಹವ್ಯಾಸವನ್ನಾಗಿ ಮಾಡಿಕೊಂಡರೆ ಜ್ಞಾನದ ಅರಿವುಂಟಾಗುತ್ತದೆ. ಮಕ್ಕಳ ದೈನಂದಿನ ಕಲಿಕೆ ಜತೆಗೆ ಮಕ್ಕಳ ಮನಸ್ಸನ್ನು ವೃದ್ಧಿಸುವುದು, ಸಾಮಾಜಿಕ ಬೆಳವಣಿಗೆ ಬಗ್ಗೆ ಅರಿವು ಮೂಡಿಸುವುದು ಬೇಸಿಗೆ ಶಿಬಿರದ ಮುಖ್ಯ ಜೀವ ಉದ್ದೇಶ ಎಂದರು.
    ಕಾರ್ಯಕ್ರಮದಲ್ಲಿ ಬಿ.ಕೆ.ಆರಾಧ್ಯ, ನಾಗರಾಜ್, ಸುವರ್ಣಾ, ನಾರಾಯಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts