More

    ವಿ.ಶ್ರೀನಿವಾಸಪ್ರಸಾದ್ ಆಶಯದಂತೆ ನಡೆ

    ಚಾಮರಾಜನಗರ: ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ಆಶಯದಂತೆ ನಾವು ನಡೆದಿದ್ದೇವೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಯ್ಯನಪುರ ಶಿವಕುಮಾರ್ ಹೇಳಿದರು.

    ವಿ.ಶ್ರೀನಿವಾಸ ಪ್ರಸಾದ್ ಅವರ ಬಳಿ ಮಾತನಾಡಿದ ಬಳಿಕ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ತೀರ್ಮಾನ ತೆಗೆದುಕೊಂಡಿದ್ದೇವೆ. ಅವರು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಉತ್ತಮ ಅವಕಾಶವಿದೆ ಎಂದು ಹೇಳಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ವಿ.ಶ್ರೀನಿವಾಸಪ್ರಸಾದ್ ಅವರನ್ನು ಬಿಜೆಪಿಯವರು ಕಡೆಗಣಿಸಿದರು. ಕೊನೆಯ ಎರಡು ವರ್ಷಗಳಲ್ಲಿ ಸರಿಯಾಗಿ ನಡೆಸಿಕೊಳ್ಳಲಿಲ್ಲ. ನಾನು ಬಿಜೆಪಿಯಲ್ಲಿ ದೈಹಿಕವಾಗಿಯಷ್ಟೇ ಇದ್ದೆ. ಮಾನಸಿಕವಾಗಿ ಇರಲು ಸಾಧ್ಯವಾಗುತ್ತಿರಲಿಲ್ಲ. ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ದಲಿತ ಸಮುದಾಯದ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆಯ ಹಿಂದೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಇದೆ. ಪೊಲೀಸ್ ಇಲಾಖೆ ಇವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು ಮಾಡಬೇಕು. ದಲಿತರ ನಡೆ ಬಿಜೆಪಿ ಕಡೆ ಎಂದು ಭೀಮ ಸಮಾವೇಶ ಮಾಡುತ್ತಿರುವ ಎನ್.ಮಹೇಶ್‌ಗೆ ಬಲಗೈ ಸಮುದಾಯ ಮಸಿ ಬಳಿಯಬೇಕು ಎಂದರು.

    ಲೋಕಸಭೆ ಚುನಾವಣೆ ಟಿಕೆಟ್ ವಂಚಿತರಾಗಿರುವ ವಿ.ಶ್ರೀನಿವಾಸಪ್ರಸಾದ್ ಅವರ ಅಳಿಯ ಡಾ.ಮೋಹನ್ ಒತ್ತಡಕ್ಕೆ ಮಣಿದು ಬಿಜೆಪಿ ಪ್ರಚಾರಕ್ಕೆ ಬಂದಿದ್ದಾರೆ. ಅವರಿಗೆ ಟಿಕೆಟ್ ಕೈ ತಪ್ಪಿದಾಗ ಅಭಿಮಾನಿಗಳು ಸಭೆ ಕರೆದಿದ್ದರು. ಇದನ್ನು ಒತ್ತಾಯ ಮಾಡಿ ರದ್ದು ಮಾಡುವಂತೆ ಮಾಡಲಾಗಿದೆ ಎಂದು ದೂರಿದರು. ವಿ.ಶ್ರೀನಿವಾಸಪ್ರಸಾದ್ ಅವರ ಸಹೋದರ ವಿ.ರಾಮಸ್ವಾಮಿ, ಬಸವರಾಜು, ಸುರೇಶ್, ಸಂಪತ್, ಪ್ರಸನ್ನಕುಮಾರ್, ಶಿವರಾಜು ಮತ್ತು ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts