More

    ಚುನಾವಣೆಯಿಂದ ಬಹಿಷ್ಕರಿಸಲು ತೀರ್ಮಾನ

    ಯಳಂದೂರು: ತಾಲೂಕಿ ಬಿಳಿಗಿರಿರಂಗನಬೆಟ್ಟ ಸೋಲಿಗಾರ ಪೋಡುಗಳಾದ ಯರಕನಗದ್ದೆ ಕಾಲನಿ, ಸೀಗೆಬೆಟ್ಟ ಪೋಡು ವತ್ತು ಬಂಗ್ಲೆ ಪೋಡುಗಳ ನಿವಾಸಿಗಳು ಈ ಬಾರಿಯ ಲೋಕಸಭಾ ಚುನಾವಣೆ ಬಹಿಷ್ಕರಿಸಲು ತಿರ್ಮಾನಿಸಿ ಧರಣಿ ನಡೆಸಿದರು.

    ಈ ಬಗ್ಗೆ ಸೋಲಿಗ ಮುಖಂಡ ಸಿ.ಮಹದೇವಗೌಡ್ ಮಾತನಾಡಿ, ಬೆಟ್ಟದ ಸೋಲಿಗಾರ ಕಂದಾಯ ಇಲಾಖೆಯಿಂದ 1962-63ರಲ್ಲಿ ಕಂದಾಯ ಭೂಮಿಯನ್ನು ಆಗಿನ ಸರ್ಕಾರ ಮಂಜೂರು ಮಾಡಿತ್ತು. 30 ಸೋಲಿಗ ಕುಟುಂಬಗಳು ಪಡೆದುಕೊಂಡಿದ್ದಾರೆ. ಅಲ್ಲಿಂದ ಪ್ರಸ್ತುತವರೆಗೂ ಭೂಮಿಯನ್ನು ವ್ಯವಸಾಯವನ್ನು ಮಾಡಿಕೊಂಡು ಬಂದಿದ್ದಾರೆ. ಆದರೆ ಕಳೆದ 4 ವರ್ಷಗಳಿಂದ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೇ ಮಾಡಿ ಸೋಲಿಗರ ಕುಟುಂಬಗಳ ಜಮೀನು ಅರಣ್ಯಕ್ಕೆ ಸೇರಿದೆ ಎಂದು ಹೇಳಿ ಮೂಲ ದಾಖಲಾತಿಗಳನ್ನು ಸಲ್ಲಿಸುವಂತೆ ಹಲವು ಬಾರಿ ತಹಸೀಲ್ದಾರ್, ಉಪವಿಭಾಗಾಧಿಕಾರಿ ನೋಟಿಸ್ ನೀಡಿದ್ದರು ಎಂದು ದೂರಿದರು.

    ಈ ಬಗ್ಗೆ ಆರ್‌ಟಿಸಿ, ಹಕ್ಕುಪತ್ರ, ಭೂ ಕಂದಾಯ ರಶೀದಿಯನ್ನು ಕಟ್ಟಿರುವುದನ್ನು ಹಾಗೂ ಸರ್ಕಾರದ ಯೋಜನೆಗಳಿಂದ ಸಾಲ ಸೌಲಭ್ಯ ಪಡೆದುಕೊಂಡಿದ್ದಾರೆ. ಬಿಳಿಗಿರಿರಂಗನಬೆಟ್ಟ 595 ಎಕರೆ ಜಮೀನನ್ನು ಬೆಟ್ಟದ ವಾಸವಾಗಿರುವ ಸೋಲಿಗರು ಮತ್ತು ಇತರ ಜನಾಂಗದ 135 ಜನರಿಗೆ ನೀಡಿದ್ದಾರೆ. ಆದರೆ ಸೋಲಿಗರ ಜಮೀನನ್ನು ಮಾತ್ರ ಅರಣ್ಯ ಇಲಾಖೆ ಸೇರಿದೆ ಎಂದು ಪ್ರತ್ಯೇಕ ಸರ್ವೇ ನಂಬರ್ ರಚಿಸಿ ಸೋಲಿಗರ ಜಮೀನುಗಳನ್ನು ಅರಣ್ಯಕ್ಕೆ ಸೇರಿಸಲು ತಿರ್ಮಾನಿಸಿದ್ದಾರೆ. ಇತರ ವರ್ಗದ ಜಮೀನನ್ನು ಸರಿಯಾಗಿದೆ ಎಂದು ಹೇಳಿ ಬೆಟ್ಟದ ಮೂಲ ನಿವಾಸಿಗಳಾದ ಸೋಲಿಗರಿಗೆ ಅನ್ಯಾಯ ಮಾಡಲಾಗುತ್ತಿದೆ. ಸೋಲಿಗರ ಜಮೀನನ್ನು ಪಕ್ಕಾ ಪೋಡಿ ಅಡಿಯಲ್ಲಿ ತರಬೇಕು. ಹೊಸ ಮನೆಗಳಿಗೆ ಮಂಜುರಾತಿ ನೀಡಿ ಮೂಲಸೌಲಭ್ಯ ನೀಡುವಂತೆ ಒತ್ತಾಯಿಸಿದ್ದಾರೆ.

    ಸೋಲಿಗರ ಸಮುದಾಯದ ಮುಖಂಡರಾದ ಗಿರಿಮಾದೇಗೌಡ್, ಬಸವರಾಜು, ಎಂ.ಸಿದ್ದೇಗೌಡ್, ನಂಜೇಗೌಡ್, ಛಲವಾದಿ ರಂಗೇಗೌಡ , ಕೆಂಪಮ್ಮ, ರಂಗಮ್ಮ, ಮಾದಮ್ಮ, ಬೇದಮ್ಮ, ಬಸಮ್ಮ, ಬಸವಣ್ಣ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts