More

    ಸನ್ಮಾನಕ್ಕೆ ಭಾವುಕರಾದ ಹಳೆ ವಿದ್ಯಾರ್ಥಿಗಳು

    ಚಾಮರಾಜನಗರ: ತಮ್ಮ ವಿಧ್ಯಭ್ಯಾಸಕ್ಕೆ ಪ್ರೋತ್ಸಾಹ ನೀಡಿದ ಪಾಲಕರು, ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ಸೇವೆ ಹಾಗೂ ಬೋಧಕರನ್ನು ನೆನೆದು ಭಾವುಕರಾದ ಹಳೆಯ ವಿದ್ಯಾರ್ಥಿಗಳ ಸಮಾಗಮಕ್ಕೆ ಹಿರೊಇಯ ವಿದ್ಯಾರ್ಥಿಗಳ ಸಮಾವೇಶ ಸಾಕ್ಷಿಯಾಯಿತು.

    ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಹಿರಿಯ ವಿದ್ಯಾರ್ಥಿಗಳ ಸಮಾವೇಶದಲ್ಲಿ ಸನ್ಮಾನ ಸ್ವೀಕರಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಹಳೆಯ ವಿದ್ಯಾರ್ಥಿನಿಯರು ತಮ್ಮ ಸಾಧನೆಗೆ ಸಹಕಾರ ನೀಡಿದ ಪಾಲಕರು ಮತ್ತು ಶಿಕ್ಷಣ ಸಂಸ್ಥೆಯ ಸೇವೆಯನ್ನು ನೆನೆದು ಕಣ್ಣೀರಿಟ್ಟರು. ಈ ಮೂಲಕ ಕಾರ್ಯಕ್ರಮದಲ್ಲಿ ಹಾಜರಿದ್ದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯಲ್ಲೇ ಕಲಿತು ಉನ್ನತ ಮಟ್ಟದ ಹುದ್ದೆಗಳನ್ನು ಅಲಂಕರಿಸಿರುವ ಹಲವಾರು ಗಣ್ಯರು, ಹಳೆಯ ಮತ್ತು ಇತ್ತೀಚಿನ ವಿದ್ಯಾರ್ಥಿಗಳನ್ನು ಭಾವುಕಗೊಳಿಸಿದರು.

    ಇದಕ್ಕೂ ಮುನ್ನಾ ಕಾರ್ಯಕ್ರಮವನ್ನು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ರೋಗ ಲಕ್ಷಣ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಜಿ.ನಟರಾಜು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ವಿಧ್ಯಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಪಾಲಕರು ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಸದಾಕಾಲವೂ ನೆನೆದುಕೊಳ್ಳಬೇಕು. ಎಲ್ಲರೂ ಯಶಸ್ಸಿನ ಬಗ್ಗೆ ಮಾತನಾಡುತ್ತೇವೆ. ಆದರೆ ಮೊಬೈಲ್ ಬಳಕೆಯಿಂದ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಅದರಿಂದ ಅಂತರ ಕಾಯ್ದುಕೊಂಡು ಶ್ರದ್ಧೆಯಿಂದ ಗುರುಗಳ ಪಾಠವನ್ನು ಕೇಳಬೇಕು. ನಿರ್ದಿಷ್ಟವಾದ ಗುರಿಯನ್ನು ಇಟ್ಟುಕೊಂಡು ಸಾಗಿದಾಗ ಸಾಧನೆ ಸುಲಭವಾಗುತ್ತದೆ. ಈ ಮೂಲಕ ತಮ್ಮ ಪಾಲಕರು ಮತ್ತು ಶೈಕ್ಷಣಿಕ ಸಂಸ್ಥೆಗಳು ಹೆಮ್ಮೆ ಪಡುವಂತಹ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

    ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಪ್ರಸನ್ನ ಮಾತನಾಡಿ, ತಾನು ಕಲಿತ ಶಾಲೆಗೆ ಅತಿಥಿಗಳಾಗಿ ಹೋದಾಗ ಯಾವುದೇ ಒಬ್ಬ ವ್ಯಕ್ತಿ ಬದುಕು ಸಾರ್ಥಕವಾಗುತ್ತದೆ. ಜೆಎಸ್‌ಎಸ್ ಸಂಸ್ಥೆಯಿಂದ ಪಡೆದಿರುವ ವಿಧ್ಯಭ್ಯಾಸವೆ ನಾವು ದೊಡ್ಡಮಟ್ಟದ ಹುದ್ದೆಗೆ ಬರಲು ಸಾಧ್ಯವಾಗಿದೆ. ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಮೈಸೂರು ಮಹಾರಾಣಿ ಕಾಲೇಜು ವಿಶ್ರಾಂತ ಪ್ರಾಧ್ಯಾಪಕಿ ಡಾ.ಡಿ.ಶೀಲಾಕುಮಾರಿ, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ನಿರ್ಮಲ, ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ.ಸ್ವಾಮಿ, ಐಕ್ಯೂಎಸಿ ಸಂಚಾಲಕಿ ಬಿ.ರೇವಣಾಂಬ, ಜೆಎಸ್‌ಎಸ್ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ.ಎನ್.ಮಹದೇವಸ್ವಾಮಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ರೂಪಶ್ರೀ, ಜಾನಪದ ಕಲಾವಿದ ಸಿ.ಎಂ.ನರಸಿಂಹಮೂರ್ತಿ, ಸಹಾಯಕ ಪ್ರಾಧ್ಯಾಪಕಿ ಎಲ್.ಎನ್.ಶುಭ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    ನಮ್ಮ ತಂದೆ-ತಾಯಿಯ ಮುಂದೆ ಸನ್ಮಾನ ಮಾಡುತ್ತಿರುವುದು ತುಂಬಾ ಖುಷಿನೀಡಿದೆ. ನಾವು ಒಂದು ಕಲ್ಲಿನ ತರಹ ಶಾಲೆಗೆ ಬರುತ್ತೇವೆ. ಅದಕ್ಕೆ ಶಿಕ್ಷಕರು ಶಿಲೆಯ ರೂಪ ನೀಡುತ್ತಾರೆ. ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ನಮ್ಮ ಕಲಿಕೆಗೆ ಅತ್ಯುತ್ತಮವಾಗಿ ಪ್ರೋತ್ಸಾಹ ನೀಡುತ್ತಿದ್ದಾರೆ.
    -ಎನ್.ಸುಚಿತ್ರಾ, ಸನ್ಮಾನಿತ ಹಳೆಯ ವಿದ್ಯಾರ್ಥಿನಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts