More

    ಭೀಮನ ಅಮಾವಾಸ್ಯೆ ದಿನವೂ ಭಕ್ತರಿಲ್ಲದೆ ಬಿಕೋ ಎನ್ನುತ್ತಿದೆ ಮಲೆಮಹದೇಶ್ವರ ಬೆಟ್ಟ

    ಚಾಮರಾಜನಗರ: ಭೀಮನ ಅಮಾವಾಸ್ಯೆ ದಿನದಂದು ಭಾರೀ ಸಂಖ್ಯೆಯಲ್ಲಿ ಭಕ್ತರಿಂದ ತುಂಬಿ ತುಳುಕುತ್ತಿದ್ದ ಇತಿಹಾಸ ಪ್ರಸಿದ್ಧ ಮಲೆಮಹದೇಶ್ವರ ಬೆಟ್ಟದಲ್ಲಿ ಈ ಬಾರಿ ಭಕ್ತರಿಲ್ಲದೆ ಬಿಕೋ ಎನ್ನುತ್ತಿದೆ.

    ಪ್ರತಿಬಾರಿಯ ಅಮಾವಾಸ್ಯೆಯಂದು ಲಕ್ಷಾಂತರ ಮಂದಿ ಭಕ್ತರು ಮಾದಪ್ಪನ ದರ್ಶನ ಪಡೆಯುತ್ತಿದ್ದರು. ಅಮಾವಾಸ್ಯೆ ದಿನದಂದು ಮಾದಪ್ಪನ ದರ್ಶನ ಪಡೆದ್ರೆ ಇಷ್ಟಾರ್ಥ ಇಡೇರಿಕೆಯಾಗುತ್ತೇ ಎಂಬ ನಂಬಿಕೆ ಇದೆ. ಆದ್ರೆ ಇಂದು ಭಕ್ತರಿಲ್ಲದೆ ಸಂಪ್ರದಾಯಕವಾಗಿ ಮಾದಪ್ಪನಿಗೆ ಪೂಜೆ ನೆರವೇರಿದೆ.

    ಬೆಳ್ಳಿಗೆ 3 ಗಂಟೆಯಿಂದ 6.30ರ ವರೆಗೆ ವಿಶೇಷ ಪೂಜಾಕೈಂಕರ್ಯ ನಡೆದಿದೆ. ಪ್ರಥಮ ಪೂಜೆ, ಸಂಕಲ್ಪ, ಪಂಚಕಳಸ ಪೂಜೆ, ಪಂಚಾಮೃತ ಅಭಿಷೇಕಾ, ಕ್ಷೀರ ಅಭಿಷೇಕ ಬಿಲ್ವಾರ್ಚನೆ, ಅಲಂಕಾರ, ಮಹಮಂಗಳಾರತಿ ಪೂಜೆ ನೆರವೇರಿದೆ.

    ಕರೊನಾ ಮೂರನೇ ಅಲೇ ಭೀತಿ ಹಿನ್ನೆಲೆ ಹಾಗೂ‌ ವಿಕೇಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಇಂದು ಮಾದಪ್ಪನ ಬೆಟ್ಟಕ್ಕೆ ಭಕ್ತರಿಗೆ ನಿಷೇಧ ಹೇರಲಾಗಿದೆ. ದೇವಸ್ಥಾನದಲ್ಲಿ ಅರ್ಚಕರಿಂದ ಸಾಂಪ್ರಾದಾಯಿಕವಾಗಿ ಪೂಜೆ ನೆರವೇರಿದೆ. ಮಾದಪ್ಪನ ಬೆಟ್ಟ ಅಕ್ಷರ ಸಹ ಸ್ತಬ್ಧವಾಗಿದೆ.

    ತ್ಯಾಗ ಮಾಡಿ ಬಂದ್ವಿ ಅನ್ನೋದು ಸರಿಯಲ್ಲ: ಬಾಂಬೆ ಟೀಂಗೆ ಸಚಿವ ಮುನಿರತ್ನ ಟಾಂಗ್​..!

    ಸೆರೆ ಹಿಡಿದು 3 ದಿನವಾದ್ರೂ ಈ ಮಂಗಗಳಿಗೆ ಊಟ ಕೊಟ್ಟಿರಲಿಲ್ಲ!

    ವಿಶ್ವದ ಅತಿ ಎತ್ತರದ ಶ್ರೀ ಚಾಮುಂಡೇಶ್ವರಿ ದೇವಿ ವಿಗ್ರಹ ಲೋಕಾರ್ಪಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts