More

    ಹೊಸ ಜಾಗದಲ್ಲಿ ವ್ಯಾಪಾರಿಗಳ ಪರದಾಟ

    ಸಂಜೆಯವರೆಗೂ ಬೆರಳೆಣಿಕೆ ಗ್ರಾಹಕರು, ಬಂಡವಾಳವೂ ಕೈತಪ್ಪುವ ಆತಂಕ

    ಮಹೇಶ್ ಸಬ್ಬನಹಳ್ಳಿ ಚಾಮರಾಜನಗರ
    ನಗರಸಭೆ ಸೂಚಿಸಿರುವ ಸ್ಥಳಗಳಲ್ಲಿ ವ್ಯಾಪಾರವಿಲ್ಲದೆ, ಹಾಕಿದ ಬಂಡವಾಳವೂ ಸಿಗದೆ ಸ್ಥಳಾಂತರಗೊಂಡಿರುವ ಬೀದಿ ಬದಿ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ.
    ಕರೊನಾ ಹೊಡೆತದಿಂದ ಮೊದಲೇ ಸಮಸ್ಯೆ ಎದುರಿಸುತ್ತಿರುವ ಬೀದಿಬದಿ ವ್ಯಾಪಾರಿಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಳೆದೆರಡು ತಿಂಗಳಿನಲ್ಲಿ ಲಾಕ್‌ಡೌನ್ ಇದ್ದ ಕಾರಣ ವ್ಯಾಪಾರ ಮಾಡದೆ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಸಂದರ್ಭದಲ್ಲಿ ಜಿಲ್ಲಾಡಳಿತ ತೆಗೆದುಕೊಂಡಿರುವ ಕ್ರಮದಿಂದ ವ್ಯಾಪಾರವಿಲ್ಲದೆ ವ್ಯಾಪಾರಿಗಳು ದಿಕ್ಕುತೋಚದಂತಾಗಿದ್ದಾರೆ.
    ನಗರದಲ್ಲಿ ಶುಚಿತ್ವ ಹಾಗೂ ಸಂಚಾರ ವ್ಯವಸ್ಥೆಗೆ ಉಂಟಾಗುವ ಅಡಚಣೆಯನ್ನು ತಡೆಗಟ್ಟಲು ಜಿಲ್ಲಾಡಳಿತ ವೆಂಡರ್ಸ್‌ ಜೋನ್ ಗುರುತಿಸಿ ನಿಗದಿತ ಸ್ಥಳದಲ್ಲಿ ವ್ಯಾಪಾರ ಮಾಡುವಂತೆ ಸೂಚಿಸಿತ್ತು. ಅದರಂತೆ ನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗ ಮಾರಿಗುಡಿಯ ಬೀದಿಯವರೆಗೆ ಹಾಗೂ ನ್ಯಾಯಾಲಯದ ರಸ್ತೆಯಲ್ಲಿ ಸ್ಥಳಗಳನ್ನು ಗುರುತಿಸಿ ನಗರದಾದ್ಯಂತ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಿ ಜೋನ್‌ನಲ್ಲೇ ವ್ಯಾಪಾರ ಮಾಡುವಂತೆ ಸೂಚಿಸಿದೆ. ಆದರೆ ನಗರ ಸಭೆ ಸೂಚಿಸಿರುವ ಸ್ಥಳಗಳಲ್ಲಿ ಜನ ಸಂಚಾರ ವಿರಳವಾಗಿದ್ದು, ಖಾಲಿ ರಸ್ತೆಯಲ್ಲಿ ಕೂತು ಗ್ರಾಹಕರನ್ನು ಕಾಯುವಂತಾಗಿದೆ ಎಂದು ನಗರದ ನ್ಯಾಯಾಲಯ ರಸ್ತೆಯಲ್ಲಿರುವ ತರಕಾರಿ ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದರು.
    ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಇಲ್ಲಿಯವರೆಗೂ ವ್ಯಾಪಾರ ಮಾಡುತ್ತಿದ್ದೆವು. ನಗರದಲ್ಲಿನ ಗ್ರಾಹಕರಿಗಿಂತ ಹೆಚ್ಚು ಪಕ್ಕದ ಊರಿನಿಂದ ಬರುವ ಗ್ರಾಮಸ್ಥರು ವ್ಯಾಪಾರ ಮಾಡುತ್ತಿದ್ದರು. ಸಾರ್ವಜನಿಕರು ಸಂಚರಿಸುವಾಗ ತರಕಾರಿ ಹಾಗೂ ಹಣ್ಣಿನ ಗಾಡಿಗಳನ್ನು ನೋಡಿ ಹೆಚ್ಚು ತರಕಾರಿಗಳನ್ನು ಖರೀದಿಸುತ್ತಿದ್ದರು. ಉತ್ತಮ ವ್ಯಾಪಾರದೊಂದಿಗೆ ನಮ್ಮ ಜೀವನ ನಿರ್ವಹಣೆಗೆ ಅನುಕೂಲವಾಗಿತ್ತು. ಈ ರಸ್ತೆಯಲ್ಲಿ ಹೊಸದಾಗಿ ವ್ಯಾಪಾರ ಮಾಡುತ್ತಿರುವುದರಿಂದ ಗ್ರಾಹಕರಿಗೆ ಈ ಸ್ಥಳ ತಿಳಿದಿಲ್ಲ. ಅರ್ಧ ಗಂಟೆಗೆ ಒಮ್ಮೆ ಒಬ್ಬ ಗ್ರಾಹಕನೂ ಬರುವುದು ಕಷ್ಟವಾಗಿದೆ. ಇದರಿಂದ ದಿನಕ್ಕೆ 100 ರೂ. ವ್ಯಾಪಾರ ಆಗುತ್ತಿಲ್ಲ. ಹಾಕಿದ ಬಂಡವಾಳವೂ ಸಿಗದೆ ದಿಕ್ಕು ತೋಚದಂತಾಗಿದೆ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಅಭಿಷೇಕ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts