More

    ಕೂಲಿ ಕಾರ್ಮಿಕರಿಗಾಗಿ ಪರದಾಟ

    ವೆಚ್ಚವೂ ಹೆಚ್ಚು ಮುಕ್ತಾಯ ಹಂತದಲ್ಲಿ ಬೆಳ್ಳುಳ್ಳಿ ಬಿತ್ತನೆ ಕಾರ್ಯ

    ಕೆ.ಎನ್.ಮಹದೇವಸ್ವಾಮಿ ಕೊಡಸೋಗೆ ಗುಂಡ್ಲುಪೇಟೆ
    ಮುಂಗಾರು ಮಳೆ ಪ್ರಾರಂಭವಾಗಿರುವುದರಿಂದ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಬೆಳ್ಳುಳ್ಳಿ ಬಿತ್ತನೆ ಕಾರ್ಯ ಮುಕ್ತಾಯ ಹಂತದಲ್ಲಿದ್ದು, ಕೂಲಿ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿ ಬೆಳೆಗಾರರು ಪರದಾಡುವಂತಾಗಿದೆ.
    ಲಾಕ್‌ಡೌನ್ ಜಾರಿಯಿಂದ ತೊಂದರೆಗೊಳಗಾದ ಕೂಲಿ ಕಾರ್ಮಿಕರು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿಯೂ ನರೇಗಾ ಯೋಜನೆಯಡಿ ಕೆಲಸ ನೀಡುತ್ತಿರುವುದರಿಂದ ಬಿತ್ತನೆ ಕಾರ್ಯಕ್ಕೆ ಕಾರ್ಮಿಕರಿಗೆ ತೀವ್ರ ಬೇಡಿಕೆಯುಂಟಾಗಿದೆ. ಜೂನ್ ಮೊದಲ ವಾರದೊಳಗೆ ಬಿತ್ತನೆ ಕಾರ್ಯ ಮುಗಿಸಬೇಕಾದ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ದುಪ್ಪಟ್ಟು ಕೂಲಿ ಕೊಡಬೇಕಾಗಿದೆ. ಜತೆಗೆ ಒಳ್ಳೆಯ ಇಳುವರಿಗಾಗಿ ರಾಸಾಯನಿಕ ಗೊಬ್ಬರದ ಜತೆಗೆ ಕೊಟ್ಟಿಗೆ ಗೊಬ್ಬರವನ್ನು ಹಾಕಬೇಕು. ಇದರಿಂದ ಹೆಚ್ಚು ಹಣ ಖರ್ಚು ಆಗುತ್ತಿದೆ ಎಂದು ರೈತರು ಆಳಲು ತೊಂಡಿಕೊಂಡಿದ್ದಾರೆ.
    ಮಳೆ ಬಿದ್ದು ಭೂಮಿ ತಂಪಾದ ಪರಿಣಾಮ ತಾಲೂಕಿನ ಹಂಗಳ ಹೋಬಳಿಯ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಬಿತ್ತನೆ ಕಾರ್ಯ ಮಾಡಲಾಗುತ್ತಿದೆ. ಗೋಪಾಲಪುರ, ಕುಣಗಹಳ್ಳಿ, ದೇವರಹಳ್ಳಿ, ಹಂಗಳ, ಭೀಮನಬೀಡು, ಬೇರಂಬಾಡಿ, ಕಳ್ಳೀಪುರ ಮುಂತಾದ ಗ್ರಾಮಗಳಲ್ಲಿ ಬೆಳ್ಳುಳ್ಳಿ ಬೆಳೆಯನ್ನು ವಿಶೇಷವಾಗಿ ಬೆಳೆಯಲಾಗುತ್ತಿದೆ.
    ತಮಿಳುನಾಡಿನ ಮೆಟ್ಟುಪಾಳಯಂನಲ್ಲಿ ಮಾತ್ರ ಬೆಳ್ಳುಳ್ಳಿಯ ಮಾರುಕಟ್ಟೆಯಿದ್ದು, ಎಲ್ಲ ರಾಜ್ಯಗಳಿಗೂ ಇಲ್ಲಿಂದಲೇ ಬೆಳ್ಳುಳ್ಳಿ ಸರಬರಾಜಾಗುತ್ತದೆ. ಪ್ರಾರಂಭದಲ್ಲಿ ಬಿತ್ತನೆ ಬೆಳ್ಳುಳ್ಳಿ ಕ್ವಿಂಟಾಲ್‌ಗೆ 12 ರಿಂದ 13 ಸಾವಿರ ರೂ.ವರೆಗೆ ಇದ್ದದು ಲಾಕ್‌ಡೌನ್ ಹಿನ್ನೆಲೆಯಲ್ಲಿ ಈಗ 18 ರಿಂದ 20 ಸಾವಿರ ರೂ.ವರೆಗೂ ಮಾರಾಟವಾಗುತ್ತಿದೆ. ತಮಿಳುನಾಡಿನಲ್ಲಿ ಕರೊನಾ ಹಾವಳಿ ಹೆಚ್ಚಾಗಿರುವುದರಿಂದ ಹೆಚ್ಚಿನ ರೈತರು ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಮೆಟ್ಟುಪಾಳಯಂನಿಂದ ಖರೀದಿಸಿ ತಂದ ಬೆಳ್ಳುಳ್ಳಿಯನ್ನು ಸುಮಾರು 2 ತಿಂಗಳು ತೇವಾಂಶ ಇಲ್ಲದಂತೆ ಸುಂಡಿಸಬೇಕು. ನಂತರ ಬಿತ್ತನೆ ಮಾಡಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts