More

    ನೂತನ ಬುದ್ಧವನ, ಧ್ಯಾನಮಂದಿರ ಉದ್ಘಾಟನೆ

    ಕೊಳ್ಳೇಗಾಲ: ಪಟ್ಟಣದ ಸಿದ್ಧ್ದಾರ್ಥನಗರದಲ್ಲಿ ಗುರುವಾರ 2568ನೇ ಬುದ್ಧ ಪೂರ್ಣಿಮೆ ಪ್ರಯುಕ್ತ ನೂತನವಾಗಿ ನಿರ್ಮಿಸಿರುವ ಬುದ್ಧವನ ಮತ್ತು ಧ್ಯಾನಮಂದಿರ ಉದ್ಘಾಟಿಸಲಾಯಿತು.

    ಬಂತೇ ಧಮ್ಮಪಾಲ, ಬಂತೆ ಬೋಧಿಪ್ರಿಯ ಅವರು ಬುದ್ಧವನ ಮತ್ತು ಧ್ಯಾನ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು. ಈ ವೇಳೆ ಆನಂದ್ ಬಂತೇಜಿ ವಿಡಿಯೋ ಮೂಲಕ ಶುಭ ಹಾರೈಸಿದರು. ಬುದ್ಧವನ ಮತ್ತು ಧ್ಯಾನ ಮಂದಿರದ ದಾನಿಗಳಾದ ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ, ಬೌದ್ಧ ಬಿಕ್ಕುಗಳ ನೇತೃತ್ವದಲ್ಲಿ ಉದ್ಘಾಟನೆಗೊಂಡ ಬುದ್ಧ ವಿಹಾರವನ್ನು ನನ್ನ ಪತ್ನಿ ದಿ.ವಿಜಯಾ ಅವರ ನೆನಪಿನಾರ್ಥವಾಗಿ ನಿರ್ಮಾಣ ಮಾಡಿದ್ದೇನೆ. ಬಿಕ್ಕು ಸಂಘಕ್ಕೆ ಧ್ಯಾನ ಕೇಂದ್ರವಾಗಿ ಬಳಸಿಕೊಳ್ಳಲು ದಾನ ಮಾಡಿದ್ದೇನೆ. ನಾನು ಬುದ್ಧ, ಬಸವ, ಅಂಬೇಡ್ಕರ್ ಅವರ ಅನುಯಾಯಿಯಾಗಿದ್ದು, ಮೂರು ಮಹಾಪುರುಷರ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದೇನೆ. ಈ ಮಹಾತ್ಮರ ತತ್ವ-ಸಿದ್ಧಾಂತಗಳನ್ನು ನಾವೆಲ್ಲರೂ ಪಾಲಿಸುವ ಮೂಲಕ ಉತ್ತಮ ಮಾರ್ಗದಲ್ಲಿ ನಡೆಯೋಣ ಎಂದರು.

    ಮಾಜಿ ಶಾಸಕ ಎಸ್.ಬಾಲರಾಜು, ನಗರಸಭೆ ಸದಸ್ಯೆ ಕವಿತಾ ರಾಜೇಶ್, ಬಸ್ತೀಪುರ ಶಾಂತರಾಜು, ಪ್ರಕಾಶ್ ಶಂಕನಪುರ, ಮುಖಂಡರಾದ ಅರ್ಜುನ್ ಮಹೇಶ್, ಮುಳ್ಳೂರು ಶಿವಮಲ್ಲು, ವಕೀಲ ರಾಜೇಂದ್ರ, ನಾಗರಾಜು, ಎಸ್. ಸಿದ್ದಪ್ಪಾಜಿ, ರಮೇಶ್, ಜಗದೀಶ್ ಶಂಕನಪುರ, ಸಿದ್ದರಾಜು ಕೆಂಪನಪಾಳ್ಯ, ಜಯಶಂಕರ್, ತೇಜು, ಶಂಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts