More

    ವೀರನಪುರದಲ್ಲಿ ಓಕುಳಿ ಸಂಭ್ರಮ

    ಗುಂಡ್ಲುಪೇಟೆ: ತಾಲೂಕಿನ ವೀರನಪುರ ಗ್ರಾಮದಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ಓಕುಳಿ ಹಬ್ಬವನ್ನು ಮಂಗಳವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

    ತಲಾಂತರಗಳಿಂದಲೂ ಗ್ರಾಮದಲ್ಲಿ ಹೋಳಿಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಅದರಂತೆ ಈ ಬಾರಿಯೂ ಗ್ರಾಮದ ಆರಾಧ್ಯ ದೈವ ವೀರಭದ್ರೇಶ್ವರ ದೇವಾಲಯದ ಎದುರು ಹಬ್ಬಕ್ಕೆ ಐದು ದಿನಗಳು ಮುಂಚಿತವಾಗಿ ಐದು ಅಡಿ ಆಳದ ಓಕುಳಿ ಗುಂಡಿ ತೆಗೆಯಲಾಗಿತ್ತು. ಮಂಗಳವಾರ ವೀರಭದ್ರ ದೇವರ ಪೂಜೆ ನಡೆಸಿದ ನಂತರ ತಲೆಯ ಮೇಲೆ ಕುಂಭ ಹೊತ್ತ ಪುಟ್ಟ ಹೆಣ್ಣುಮಕ್ಕಳನ್ನು ಮಂಗಳವಾದ್ಯ ಹಾಗೂ ವೀರಗಾಸೆ ಸಮೇತ ಊರ ತುಂಬ ಮೆರವಣಿಗೆ ಸಾಗಿ ಹೊಸ ನೀರು ತಂದರು.

    ನಂತರ ಓಕುಳಿ ಗುಂಡಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸಿ, ನೀರಿಗೆ ಅರಿಶಿನ ಬೆರೆಸಲಾಯಿತು. ಪ್ರಧಾನ ಅರ್ಚಕರು ಓಕುಳಿಗುಂಡಿಗೆ ಇಳಿದು ದೇವಾಲಯಕ್ಕೆ ಹೋದ ನಂತರ ಗ್ರಾಮಸ್ಥರು ಒಬ್ಬರಿಗೊಬ್ಬರು ಗುಂಡಿಯ ನೀರು ಎರಚಿಕೊಳ್ಳುವ ಮೂಲಕ ಜನರು ಓಕುಳಿ ಸಂಭ್ರಮಿಸಿದರು. ಹೊರಗಿನ ಗ್ರಾಮದವರನ್ನು ಹೊರತುಪಡಿಸಿ ಗ್ರಾಮದ ಸಣ್ಣ ಮಕ್ಕಳು ಸೇರಿದಂತೆ ಎಲ್ಲರಿಗೂ ಓಳಿ ನೀರನ್ನು ಎರಚಲಾಯಿತು. ಅರಿಶಿನ ಮಿಶ್ರಿತ ಓಕುಳಿ ನೀರನ್ನು ಮೈಮೇಲೆ ಹಾಕುವುದರಿಂದ ರೋಗಭಾದೆ ನಿರ್ವಾರಣೆಯಾಗುತ್ತದೆ ಎನ್ನುವ ನಂಬಿಕೆ.

    ಹಳ್ಳಿಯ ಜನಗಳಿಗೆ ಹೊರತುಪಡಿಸಿ ನಮ್ಮ ಗ್ರಾಮದವರಿಗೆ ಓಕುಳಿ ನೀರು ಹಾಕಲಾಗುತ್ತದೆ ಇದು ಹಿಂದಿನ ಪದ್ಧತಿ. ನಮ್ಮ ತಾತ ಮುತ್ತಾತನ ಕಾಲದಿಂದಲೂ ಈ ಹಬ್ಬ ಆಚರಿಸುತ್ತಿದ್ದೇವೆ. ಓಕುಳಿ ಹಬ್ಬ ನಮ್ಮ ಗ್ರಾಮದ ವಿಶೇಷ ಎಂದು ಗ್ರಾಮಸ್ಥ ಬಸವಣ್ಣ ವಿಜಯವಾಣಿಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts