More

    VIDEO: ಚಾಲೆಜಿಂಗ್‌ ಸ್ಟಾರ್ ದರ್ಶನ್‌ ಕುಟುಂಬದ ಮನೋಜ್‌ಕುಮಾರ್ ಅಭಿನಯದ ಟಕ್ಕರ್ ಚಿತ್ರದ ಹಾಡು ಬಿಡುಗಡೆ ಮಾಡಿದ ಐಪಿಎಸ್ ಅಧಿಕಾರಿ ರೂಪಾ

    ಬೆಂಗಳೂರು: ಚಾಲೆಜಿಂಗ್‌ ಸ್ಟಾರ್ ದರ್ಶನ್‌ರ ಕುಟುಂಬದ ಹುಡುಗ ಮನೋಜ್‌ಕುಮಾರ್ ನಾಯಕನಾಗಿ ನಟಿಸಿರುವ ಟಕ್ಕರ್ ಚಿತ್ರದ ವಿಡಿಯೋ ಸಾಂಗ್’ಅನ್ನು ಐಪಿಎಸ್ ಅಧಿಕಾರಿ ಡಿ. ರೂಪಾ ಬಿಡುಗಡೆಗೊಳಿಸಿದರು.

    ಇಂದಿನ ಮೊಬೈಲ್ ಯುಗದಲ್ಲಿ ಮಹಿಳೆಯರು ಹೇಗೆಲ್ಲ ಸಮಸ್ಯೆಗಳಿಗೆ ಸಿಲುಕುತ್ತಿದ್ದಾರೆ ಎಂಬ ವಿಚಾರವನ್ನಿಟ್ಟಿಕೊಂಡು ಕಮರ್ಷಿಯಲ್ಲಾಗಿ ರೂಪಿಸಿರುವ ಸಿನಿಮಾ ಟಕ್ಕರ್. ಹೀಗಾಗಿ ಮಹಿಳಾ ಪೊಲೀಸ್ ಅಧಿಕಾರಿ ರೂಪಾ ಅವರಿಂದ ವಿಡಿಯೋ ಸಾಂಗನ್ನು ರಿಲೀಸ್ ಮಾಡಿಸಲಾಯಿತು.

    ರೈಲ್ವೇಸ್ ಪೊಲೀಸ್ ಐಜಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರೂಪಾ ಅವರು ಈ ಚಿತ್ರದ ಹಾಡನ್ನು ಬಿಡುಗಡೆಗೊಳಿಸಿ, ಟಕ್ಕರ್ ಚಿತ್ರದ ಟ್ರೇಲರನ್ನು ನೋಡಿದ ರೂಪಾ, ಹೆಣ್ಣುಮಕ್ಕಳಿಗೆ ಎದುರಾಗುತ್ತಿರುವ ಸಮಸ್ಯೆಗಳ ಕುರಿತ ವಿಷಯ ಹೊಂದಿರುವುದು ಮತ್ತು ಮಹಿಳೆಯರು ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂಬ ವಿಚಾರವಾಗಿ ದೃಶ್ಯ ರೂಪದಲ್ಲಿ ಕಟ್ಟಿಕೊಟ್ಟಿರುವುದು ಮೆಚ್ಚಬೇಕಾದ ವಿಚಾರ ಎಂದರು.

    ಕೆ.ಎನ್. ನಾಗೇಶ್ ಕೋಗಿಲು ಅವರ ನಿರ್ಮಾಣದ ಈ ಚಿತ್ರಕ್ಕೆ ವಿ. ರಘುಶಾಸ್ತ್ರಿ ಆ್ಯಕ್ಷನ್​ ಕಟ್ ಹೇಳಿದ್ದಾರೆ. ಮನೋಜ್‌ಗೆ ನಾಯಕಿಯಾಗಿ ಪುಟ್ಟಗೌರಿ ಮದುವೆ ಖ್ಯಾತಿಯ ರಂಜನಿ ರಾಘವನ್ ನಟಿಸಿದ್ದಾರೆ. 65 ದಿನಗಳ ಕಾಲ ಮೈಸೂರು, ಬೆಂಗಳೂರು ಮತ್ತು ಮಲೇಷಿಯಾದಲ್ಲಿ ಮೂರು ಹಂತಗಳಲ್ಲಿ ಚಿತ್ರೀಕರಿಸಲಾಗಿದೆ.

    ನಮ್ಮ ಮನೆಯ ಹೆಣ್ಣುಮಕ್ಕಳು ನಮ್ಮ ಮನೆಯಲ್ಲೇ ಸೇಫ್ ಆಗಿಲ್ಲ ಎನ್ನುವುದೇ ಈ ಸಿನಿಮಾದ ಸಾರಾಂಶ. ಸೈಬರ್ ಕ್ರೈಂ ಹಿನ್ನೆಲೆಯಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ.

    ಕದ್ರಿ ಮಣಿಕಾಂತ್ ಅವರು ಚಿತ್ರಕ್ಕೆ ಪಕ್ಕಾ ಮಾಸ್ ಮತ್ತು ಮೆಲೋಡಿ ಟ್ಯೂನ್ ಕೊಟ್ಟಿದ್ದಾರೆ. ಖಳನಾಯಕನಾಗಿ ಭಜರಂಗಿ ಖ್ಯಾತಿಯ ಸೌರವ್ ಲೋಕಿ ಕಾಣಿಸಿಕೊಂಡಿದ್ದಾರೆ. 30ನಿಮಿಷಗಳ ಗ್ರಾಫಿಕ್ಸ್ ಕೂಡ ಇದರಲ್ಲಿದೆ.

    ಟಕ್ಕರ್ ಎಂದರೆ ಪಾಸಿಟಿವ್ ಹಾಗೂ ನೆಗಟೀವ್ ಎರಡೂ ಅರ್ಥವಿದ್ದು ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಸಂಘರ್ಷ ಚಿತ್ರದಲ್ಲಿದೆ. ಲವ್ ಸ್ಟೋರಿ ಜತೆಗೆ ಆ್ಯಕ್ಷನ್​ ಕೂಡ ಚಿತ್ರದಲ್ಲಿ ಮನರಂಜಿಸಲಿದೆ. ಎಲ್ಲ ಕೆಲಸಗಳನ್ನು ಮುಗಿಸಿಕೊಂಡು ಬಿಡುಗಡೆಗೆ ಟಕ್ಕರ್ ಸಜ್ಜಾಗಿದೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts