More

    ಬೇಡರೆಡ್ಡಿಹಳ್ಳೀಲಿ ಗುಗ್ಗರಿ ಹಬ್ಬ

    ಚಳ್ಳಕೆರೆ: ತಾಲೂಕಿನ ಬೇಡರೆಡ್ಡಿಹಳ್ಳಿಯಲ್ಲಿ ಭಾನುವಾರ ಮೂರು ವರ್ಷಕ್ಕೊಮ್ಮೆ ಜರುಗುವ ಬುಡಕಟ್ಟು ಸಂಸ್ಕೃತಿಯ ಗುಗ್ಗರಿ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಲಾಯಿತು.

    ಏಳು ಜನ ಅಣ್ಣತಮ್ಮಂದಿರ ಗುಡಿಕಟ್ಟಿಗೆ ಹೆಸರಾಗಿರುವ ಪೋರಿ ಮಂಚನಾಯಕನ ಸಂಸ್ಥಾನದ ವತಿಯಿಂದ ಗುಗ್ಗರಿ ಹಬ್ಬ ಆಚರಿಸಲಾಯಿತು. ಮೂರು ದಿನಗಳ ಕಾಲ ನಡೆಯುವ ಧಾರ್ಮಿಕ ಪೂಜಾ ಕಾರ್ಯಕ್ರಮಗಳಲ್ಲಿ ಮೊದಲು ಗೋಪೂಜೆ, ನಂತರ ಗಂಗಾಪೂಜೆ ಬಳಿಕ ದೇವರ ಪೂಜೆ ನಡೆಸುವ ವಿಶೇಷವಿದೆ.

    ಹಬ್ಬದ ಆರಂಭದಲ್ಲಿ ಗ್ರಾಮ ಸಮೀಪ ಇರುವ ನೂರಾರು ದೇವರ ಎತ್ತುಗಳನ್ನು ಗ್ರಾಮಕ್ಕೆ ಬರಮಾಡಿಕೊಂಡು ಗ್ರಾಮ ದೇವರಾದ ಕೊತ್ತಲ ಬೊಮ್ಮಲಿಂಗೇಶ್ವರ ದೇವಸ್ಥಾನದ ಸುತ್ತಲು ಪ್ರದಕ್ಷಿಣೆ ಹಾಕಿಸಿ ಗೋವುಗಳಿಗೆ ಪೂಜೆ ಸಲ್ಲಿಸಲಾಯಿತು.

    ಪೂಜಾರಿ ದಾಸರ ಕೀರ್ತಿ, ಎತ್ತಿನ ಕಿಲಾರಿ ಓಬಯ್ಯ, ಬಂಜಯ್ಯ, ಈಶ್ವರಪ್ಪ, ಗೋವಿಂದಪ್ಪ, ಮಹೇಶ, ಸೀತಣ್ಣ, ಚಂದ್ರಣ್ಣ, ಮಹಾಂತೇಶ, ಯಾದಲಗಟ್ಟೆ ಜಗನ್ನಾಥ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts