More

    ಕರೊನಾ ನಿಯಂತ್ರಣಕ್ಕಾಗಿ ಜನ ಜಾಗೃತಿ

    ಚಳ್ಳಕೆರೆ: ತಾಲೂಕಿನ ಪಗಡಲಬಂಡೆ ಪಂಚಾಯಿತಿ ವ್ಯಾಪ್ತಿಯ ಬಡಗಡ್ಡೆ, ಕೊರ‌್ಲಕುಂಟೆ, ಪುಟ್ಲಾರಹಳ್ಳಿಗಳಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕರು ಮನೆ ಮನೆಗೆ ತೆರಳಿ ಕರೊನಾ ವೈರಸ್ ನಿಯಂತ್ರಣ ಕುರಿತು ಜಾಗೃತಿ ಮೂಡಿಸಿದರು.

    ಬೆಂಗಳೂರಿನಿಂದ ಗ್ರಾಮಕ್ಕೆ ಆಗಮಿಸಿರುವ 110 ಜನರ ಆರೋಗ್ಯದ ಮಾಹಿತಿ ಸಂಗ್ರಹಿಸಿ ಸಂಬಂಧಿಸಿ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆ ಸರ್ವಮಂಗಳಮ್ಮ ತಿಳಿಸಿದರು.

    ಜಾಗೃತಿ ವೇಳೆ ಮನೆ ಮತ್ತು ವೈಯಕ್ತಿಕ ಸ್ವಚ್ಛತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈತೊಳೆದುಕೊಳ್ಳುವ ವಿಧಾನದ ಬಗ್ಗೆ ತಿಳಿಸಿಕೊಡಲಾಯಿತು.

    ಅಂಗನವಾಡಿ ಕಾರ್ಯಕರ್ತೆ ಸುಶೀಲಮ್ಮ, ಸಹಾಯಕರಾದ ಎಚ್.ಮಂಜುಳಾ, ಲಕ್ಷ್ಮೀದೇವಿ, ಪಟ್ಲಾರಹಳ್ಳಿ ಲಕ್ಷ್ಮೀದೇವಿ, ಆರೋಗ್ಯ ಸಹಾಯಕ ದಯಾನಂದ, ಗ್ರಾಮಸ್ಥರಾದ ಅಜ್ಜಪ್ಪ, ಕೃಷ್ಣಮೂರ್ತಿ, ವೀರೇಂದ್ರ, ಎಂ. ಹರೀಶ, ಮಂಜುನಾಥ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts