More

    ಕೌಶಲಕ್ಕೆ ಪ್ರೋತ್ಸಾಹ ಅಗತ್ಯ

    ಚಳ್ಳಕೆರೆ: ವಿದ್ಯಾರ್ಥಿಗಳ ಕೌಶಲಕ್ಕೆ ಪ್ರೋತ್ಸಾಹ ಸಿಕ್ಕಾಗ ಸಾಧನೆಗೆ ದಾರಿ ಆಗುತ್ತದೆ ಎಂದು ಮುಖ್ಯ ಶಿಕ್ಷಕಿ ಜಿ. ಸುಲೋಚನಾ ಹೇಳಿದರು.

    ರಾಜ್ಯಮಟ್ಟದ ಇನ್‌ಸ್ಪೈರ್ ಅವಾರ್ಡ್‌ನಲ್ಲಿ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿ ಎನ್.ಐಶ್ವರ್ಯಗೆ ನಗರದ ಕಾಟಪ್ಪನಹಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ವಿದ್ಯಾರ್ಥಿಗಳಲ್ಲಿ ಹಿಂಜರಿಕೆ ಮನೋಭಾವನೆ ಇರಬಾರದು. ಸ್ಪರ್ಧಾತ್ಮಕ ಸಮಾಜದಲ್ಲಿ ಹಳ್ಳಿ ಮಕ್ಕಳು ಸಾಧನೆ ಮಾಡುವುದನ್ನು ನೋಡುತ್ತಿದ್ದೇವೆ. ಬಯಲುಸೀಮೆಯ ವಿದ್ಯಾರ್ಥಿನಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಇತರರಿಗೆ ಮಾದರಿಯಾಗಿದೆ ಎಂದರು.

    ವಿಜ್ಞಾನ ಶಿಕ್ಷಕಿ ಪಿ.ಎನ್. ಪದ್ಮಾ ಮಾತನಾಡಿ, ಅನುಪಯುಕ್ತ ವಸ್ತುಗಳ ಮರುಬಳಕೆಗೆ ತಂತ್ರಜ್ಞಾನ ಅಳವಡಿಸಿದರೆ ಹೆಚ್ಚು ಅನುಕೂಲ. ಶಿಕ್ಷಕರು ಬೋಧನೆ ಮಾಡುವ ವೇಳೆ ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿಯಬೇಕು ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts