More

    ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ದೊಡ್ಡದು

    ಚಳ್ಳಕೆರೆ: ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಬಹಳ ಮುಖ್ಯ ಎಂದು ಮನೋವೈದ್ಯ ಡಾ.ವಿರೂಪಾಕ್ಷಪ್ಪ ದೇವರಮನೆ ಅಭಿಪ್ರಾಯಪಟ್ಟರು.

    ತಾಲೂಕಿನ ಸಾಣಿಕೆರೆಯ ವಸಿಷ್ಠ ಶೈಕ್ಷಣಿಕ ಅಭಿವೃದ್ಧಿ ಅಕಾಡೆಮಿ, ವೇದಾ ಶಾಲೆ, ಮತ್ತು ಪ.ಪೂ.ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಕುರಿತ ಸಂವಾದದಲ್ಲಿ ಮಾತನಾಡಿದರು.

    ಶಾಲೆಯಿಂದ ಮನೆಗೆ ಬರುವ ಮಕ್ಕಳ ಜತೆ ಪಾಲಕರು ಪ್ರೀತಿಯಿಂದ ಕನಿಷ್ಠ ಅರ್ಧ ತಾಸು ಮಾತನಾಡಬೇಕು. ಅವರನ್ನು ಬೇರೆಯವರೊಂದಿಗೆ ಹೋಲಿಸಬಾರದು. ಚಟುವಟಿಕೆಗಳನ್ನು ಪ್ರೀತಿಸುವ ಮತ್ತು ಪ್ರೋತ್ಸಾಹಿಸುವ ಮನೋಭಾವ ರೂಢಿಸಿ ಕೊಳ್ಳಬೇಕು. ಅವರ ಸಂತೋಷವನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಕಿವಿಮಾತು ಹೇಳಿದರು.

    ದೇಶದ ಸರ್ವತೋಮುಖ ಬೆಳವಣಿಗೆ ತಂದೆ ತಾಯಿ ಮತ್ತು ಶಿಕ್ಷಕರ ಕೈಯಲ್ಲಿದೆ ಎಂದು ಡಾ. ಅಬ್ದುಲ್ ಕಲಾಮ್ ಹೇಳಿದ್ದಾರೆ. ಮಕ್ಕಳನ್ನು ಪಠ್ಯಕ್ಕೆ ಸೀಮಿತಗೊಳಿಸದೆ ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಮತ್ತಿತರ ಹವ್ಯಾಸಗಳನ್ನು ರೂಢಿಸಬೇಕು. ಮನೆಯಲ್ಲಿ ರಾಮಾಯಣ, ಮಹಾಭಾರತ ವಿಚಾರಗಳನ್ನು ತಿಳಿಸುವ ಕೆಲಸ ಆಗಬೇಕು. ಮಕ್ಕಳು ಸ್ವತಂತ್ರವಾಗಿ ಸರಿದಾರಿಯಲ್ಲಿ ಬೆಳೆಯಲು ಉತ್ತೇಜನ ನೀಡಬೇಕು ಎಂದರು.

    ವಿದ್ಯಾಸಂಸ್ಥೆ ಅಧ್ಯಕ್ಷ ಡಿ.ಟಿ.ರವೀಂದ್ರ ಮಾತನಾಡಿ, ಇಂದಿನ ಸ್ಪರ್ಧೆಯ ಯುಗದಲ್ಲಿ ಮಕ್ಕಳನ್ನು ಬೆಳೆಸಬೇಕು ಎಂದರು. ಕೌಟುಂಬಿಕ ಸಮಸ್ಯೆಗಳಿದ್ದರೂ ಕಲಿಕೆಗೆ ಪ್ರೋತ್ಸಾಹ ಅಗತ್ಯ ಎಂದು ಹೇಳಿದರು.

    ಪ್ರಾಚಾರ್ಯರಾದ ಸುಗುಣ, ಪುಷ್ಪರಾಣಿ, ಸುವರ್ಣಾ, ಕಾರ್ಯದರ್ಶಿ ಡಿ.ಕೆ. ಕಿರಣ್, ಶ್ರೇಯಸ್ ಆಚಾರ್ಯ, ಸಲಹಾ ಸಮಿತಿ ಪ್ರಸನ್ನ ಕುಮಾರ್, ಚಂದ್ರಪ್ಪ, ಎಸ್. ಬಿ. ರಾಜು ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts