More

    ಕೃಷಿಕರಿಗೆ ನ್ಯಾಯ ಕೊಡಿಸಿದ ಕೀರ್ತಿ ರೈತ ಸಂಘಕ್ಕಿದೆ

    ಚಳ್ಳಕೆರೆ: ತಾಲೂಕಿನ ವೇದಾವತಿ ನದಿಗೆ ವಿವಿ ಸಾಗರದಿಂದ ಕುಡಿವ ನೀರು ಹರಿಸಬೇಕೆಂದು ನಡೆಸಿದ ಪಾದಯಾತ್ರೆಯ ಹೋರಾಟಗಾರರ ಬಗ್ಗೆ ಹಗುರವಾಗಿ ಮಾತನಾಡಿರುವ ರೈತ ಮುಖಂಡ ಕೆ.ಪಿ.ಭೂತಯ್ಯ ಗ್ರಾಮೀಣ ಭಾಗದ ಕೃಷಿಕರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಸಂಘದ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ದೂರಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ರೈತರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಬರಪೀಡಿತ ತಾಲೂಕಿಗೆ ಭದ್ರಾ ಮೇಲ್ದಂಡೆ ಜಾರಿಯಾಗಬೇಕೆಂದು ಒತ್ತಾಯಿಸಿ ಸುದೀರ್ಘ ಕಾಲದಿಂದ ಹೋರಾಟ ನಡೆಸಿಕೊಂಡು ಬರಲಾಗಿದೆ. ರೈತರ ಸಮಸ್ಯೆ ಪರಿಹಾರಕ್ಕಾಗಿ ಜಿಲ್ಲೆ ಮತ್ತು ರಾಜ್ಯಾದ್ಯಂತ ವಿವಿಧ ಚಳವಳಿ ನಡೆಸಿದ ಇತಿಹಾಸ ಸಂಘಕ್ಕಿದೆ. ಇಂಥ ಸಂಘವನ್ನು ತೆಗಳುವ ಹೇಳಿಕೆ ಖಂಡನಾರ್ಹ ಎಂದರು.

    ಇವರು ಬ್ಯಾಂಕ್‌ವೊಂದರಲ್ಲಿ ಹರಾಜಾದ ರೈತರ ಬಂಗಾರ ಮರಳಿಸಿಕೊಡುವುದಾಗಿ ಸಾಣಿಕೆರೆ ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸಿ, ಬಳಿಕ ಬ್ಯಾಂಕಿನವರ ಜತೆ ಹೊಂದಾಣಿಕೆ ಮಾಡಿಕೊಂಡಿದ್ದರು. ಕಸ್ತೂರಿ ತಿಮ್ಮಪ್ಪನಹಳ್ಳಿ ರೈತರಿಂದ ಹಣ ಪಡೆದು ವಿದ್ಯುತ್ ಪರಿವರ್ತಕ ಕೊಡಿಸದೆ ಅನ್ಯಾಯ ಮಾಡಿದ್ದಾರೆ. ಇವರ ಹೋರಾಟಗಳು ಕೇವಲ ರಾಜಕೀಯಕ್ಕೆ ಸೀಮಿತವಾಗಿವೆ ಎಂದು ದೂರಿದರು.

    ರೈತ ಸಂಘಟನೆಯ ತಾಲೂಕು ಅಧ್ಯಕ್ಷ ಶ್ರೀಕಂಠಮೂರ್ತಿ, ಪ್ರಧಾನ ಕಾರ್ಯದರ್ಶಿ ಆರ್. ಬಸವರಾಜ್, ಸಣ್ಣಪಾಲಯ್ಯ, ಗೋವಿಂದಪ್ಪ, ತಿಪ್ಪೇಸ್ವಾಮಿ, ಶಶಿಕುಮಾರ್, ತಿಮ್ಮಣ್ಣ, ಬೋರಯ್ಯ, ತಿಪ್ಪೇಸ್ವಾಮಿಗೌಡ, ರಾಜಣ್ಣ ಇತರರಿದ್ದರು.

    ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ: ಒಂದು ಎಕರೆ ಭೂಮಿ ಇಲ್ಲದ ರೆಡ್ಡಿಹಳ್ಳಿ ವೀರಣ್ಣ ರೈತ ಸಂಘಟನೆ ಹೋರಾಟಗಾರರಾಗಿದ್ದಾರೆ. ವೇದಾವತಿ ನದಿ ನೀರಿಗೆ ಹಮ್ಮಿಕೊಂಡಿದ್ದ ಪಾದಯಾತ್ರೆ ನೇರವಾಗಿ ಜಿಲ್ಲಾ ಕಚೇರಿಗೆ ಏಕೆ ತಲುಪಲಿಲ್ಲ? ಬಾಲೇನಹಳ್ಳಿಗೆ ಯಾತ್ರೆ ಕೊನೆಗೊಳಿಸಿದ್ದೇಕೆ? ನಿಜವಾದ ಹೋರಾಟಗಾರರಾಗಿದ್ದರೆ ಯಾರ ಒತ್ತಡಕ್ಕೂ ಮಣಿಯದೆ ಜಿಲ್ಲಾ ಕಚೇರಿ ತಲುಪಿ ಹಕ್ಕೊತ್ತಾಯದ ಮನವಿ ಸಲ್ಲಿಸುತ್ತಿದ್ದರು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts