More

    ದೊಡ್ಡೇರಿ ಕಾಲೇಜು ಆವರಣದ ಗಿಡಗಳಿಗೆ ಟ್ಯಾಂಕರ್ ನೀರು

    ಚಳ್ಳಕೆರೆ: ನೆರಳು, ಶುದ್ಧಗಾಳಿ, ತಂಪಾದ ವಾತಾವರಣಕ್ಕೆ ಕಾರಣವಾಗಿದ್ದ ತಾಲೂಕಿನ ದೊಡ್ಡೇರಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದ ಗಿಡ ಮರಗಳ ರಕ್ಷಣೆಗೆ ನೀರಿನ ಕೊರತೆ ಉಂಟಾಗಿದೆ.

    ವಿದ್ಯಾರ್ಥಿಗಳನ್ನು ಆಕರ್ಷಿಸಲು ಹಾಗೂ ಸೂಕ್ತ ಕಲಿಕಾ ವಾತಾವರಣ ಕಲ್ಪಿಸಲೆಂದು ಕಾಲೇಜಿನ ಐದು ಎಕರೆ ಆವರಣದಲ್ಲಿ ಬೇವು, ಅರಳಿ, ನೇರಳೆ, ಹೊಂಗೆ, ಕಾಡು ಬಾದಾಮಿ, ಅಶೋಕ ಟ್ರೀ ಇನ್ನಿತರ ಮರಗಳು ಹಾಗೂ ವಿವಿಧ ಜಾತಿಯ ಹೂ ಗಿಡಗಳನ್ನು ನೆಟ್ಟು ನೆಡುತೋಪು ನಿರ್ಮಾಣ ಮಾಡಿ ಬೋರ್‌ವೆಲ್ ಮೂಲಕ ನೀರುಣಿಸಲಾಗುತ್ತಿತ್ತು. ಈಗ ಅಂತರ್ಜಲ ಕುಸಿತಕಂಡಿದ್ದರಿಂದ ಗಿಡ ಮರಳನ್ನು ಉಳಿಸಿಕೊಳ್ಳುವುದು ಕಾಲೇಜು ಆಡಳಿತ ಮಂಡಳಿಗೆ ಸವಾಲಾಗಿದೆ.

    ಟ್ಯಾಂಕರ್ ವ್ಯವಸ್ಥೆ: ಕಾಲೇಜು ಆರಂಭವಾದಾಗ ಮೂಲ ಸೌಕರ್ಯಗಳ ಕೊರತೆ ಎದುರಾಗಿತ್ತು. ಗ್ರಾಮಸ್ಥರ ಸಹಕಾರದಿಂದ ಎಲ್ಲ ರೀತಿಯ ಅನುಕೂಲ ಮಾಡಿಕೊಳ್ಳಲಾಗಿದೆ. ಅರಣ್ಯ ಇಲಾಖೆ ಸಹಕಾರ, ಮಕ್ಕಳು ಮತ್ತು ಉಪನ್ಯಾಸಕರ ಪರಿಶ್ರಮದಿಂದ 500 ಮರಗಳ ಜತೆಗೆ ದಾಸವಾಳ, ಬಸವಪಾದ, ಕಣಗಿಲು, ಪೇಪರ್ ಹೂ, ಸಂಪಿಗೆ, ಗುಲಾಬಿ ಗಿಡಗಳನ್ನು ಬೆಳೆಯಲಾಗಿದೆ. ಮೊದಲು ಗೋಮಾಳವಾಗಿದ್ದ ಭೂಮಿಯಲ್ಲಿ ಈಗ ಹಸಿರೀಕರಣವಾಗಿದೆ. ಇವುಗಳನ್ನು ಉಳಿಸಿಕೊಳ್ಳಲು ನೀರಿನ ಸಮಸ್ಯೆ ಉಂಟಾಗಿದ್ದು, ಗ್ರಾಪಂ ಸದಸ್ಯ ಶಿವಣ್ಣ, ಪಿಡಿಒ ಪ್ರತಿಭಾ ಅವರ ಸಹಕಾರದಿಂದ ವಾರಕ್ಕೆ ಎರಡು ದಿನದಂತೆ ಟ್ಯಾಂಕರ್ ನೀರು ಲಭ್ಯವಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳಿಂದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕರೆ ಅನುಕೂಲವಾಗುತ್ತದೆ ಎಂದು ಪ್ರಾಚಾರ್ಯ ಎಸ್. ಲಕ್ಷ್ಮಣ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts