More

    14 ದಿನ ಕ್ವಾರೆಂಟೈನಲ್ಲಿದ್ದರು

    ಚಳ್ಳಕೆರೆ: ಹೊರ ರಾಜ್ಯದಿಂದ ಬಂದಿದ್ದವರನ್ನು ನಗರದ ವಿವಿಧ ವಸತಿ ಶಾಲೆಗಳಲ್ಲಿ ಕ್ವಾರೆಂಟೈನ್‌ಗಳಲ್ಲಿ ಇರಿಸಿಲಾಗಿದ್ದ 57 ಜನರನ್ನು ಭಾನುವಾರ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಬಿಡುಗಡೆಗೊಳಿಸಲಾಗಿದೆ ಎಂದು ಎಂ.ಮಲ್ಲಿಕಾರ್ಜುನ ತಿಳಿಸಿದರು.

    ತಾಲೂಕಿನ ದೇವರಮರಿಕುಂಟೆ, ಬೊಂಬೇರಹಳ್ಳಿ, ಪುರ‌್ಲೆಹಳ್ಳಿ, ಚನ್ನಮ್ಮನಾಗತಿಹಳ್ಳಿ ಗ್ರಾಮದಿಂದ ಜೀವನೋಪಾಯಕ್ಕಾಗಿ ಹೊರ ರಾಜ್ಯಗಳಿಗೆ ಹೋಗಿದ್ದ 57 ಮಂದಿ, ಲಾಕ್‌ಡೌನ್ ಸಂದರ್ಭದಲ್ಲಿ ತಾಲೂಕಿಗೆ ಮರಳಿ ಬಂದಿದ್ದರು.

    ಜಿಲ್ಲಾಡಳಿತ ನಿರ್ದೇಶನದಂತೆ ಮುರಾರ್ಜಿ ಶಾಲೆ, ಬಿಸಿಎಂ ಇಲಾಖೆ ಮತ್ತು ಲಾಡ್ಜ್‌ನಲ್ಲಿ 14 ದಿನಗಳ ವರೆಗೆ ಕ್ವಾರೆಂಟೈನ್‌ನಲ್ಲಿ ಇರಿಸಲಾಗಿತ್ತು.

    ಆರೋಗ್ಯ ಇಲಾಖೆಯ 2 ಹಂತದ ಗಂಟಲು ದ್ರವ ಪರೀಕ್ಷೆಯ ವರದಿಯಲ್ಲೂ ನೆಗೆಟೀವ್ ಬಂದಿರುವ ಹಿನ್ನೆಲೆಯಲ್ಲಿ ಮತ್ತು ಉತ್ತಮ ಆರೋಗ್ಯ ಇರುವ ಕಾರಣ ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದರು.

    ತಾಲೂಕು ಆರೋಗ್ಯಾಧಿಕಾರಿ ಡಾ.ಎನ್.ಪ್ರೇಮಸುಧಾ, ಸಿಬ್ಬಂದಿ ಎನ್.ಪ್ರೇಮ್‌ಕುಮಾರ್, ಎಸ್.ಬಿ.ತಿಪ್ಪೇಸ್ವಾಮಿ, ಪ್ರಯೋಗಾಲಯ ಎಚ್.ತಿಪ್ಪೇಸ್ವಾಮಿ, ಜಿಲ್ಲಾ ಸರ್ವೇಕ್ಷಣ ತಂಡದ ಎಂ.ಚಂದ್ರಪ್ಪ, ಎಂ.ಪ್ರಸನ್ನಕುಮಾರ್, ಎ.ಗಂಗಾಧರ, ಗ್ರಾಮ ಲೆಕ್ಕಾಧಿಕಾರಿ ರಾಜೇಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts