More

    ಚಳ್ಳಕೆರೆಯಲ್ಲಿ ಶೇಂಗಾ ಬಿತ್ತನೆ ಕುಂಠಿತ

    ಕೊರ್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ
    ಮುಂಗಾರು ಬಳಿಕ ಮಳೆ ಕೊರತೆಯಿಂದ ಚಳ್ಳಕೆರೆ ತಾಲೂಕಿನಲ್ಲಿ ಶೇಂಗಾ ಬಿತ್ತನೆ ಕುಂಠಿತಗೊಂಡಿದ್ದು, ಶೇ.20 ರಿಂದ 25ರಷ್ಟು ಮಾತ್ರ ಪ್ರಗತಿಯಾಗಿದೆ ಬೆಳೆಗಾರರು ಮಳೆ ನಿರೀಕ್ಷೆಯಲ್ಲಿ ಆಕಾಶದತ್ತ ಮುಖ ಮಾಡಿದ್ದಾರೆ.

    ತಾಲೂಕಿನ ಕೆಂಪು ಭೂಮಿಯಲ್ಲಿ ಶೇಂಗಾ ಪ್ರಧಾನ ಬೆಳೆಯಾಗಿದೆ. 85 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಇದೆ. ಜುಲೈ ಹೊತ್ತಿಗೆ ಶೇ.70ರಷ್ಟು ಬಿತ್ತನೆ ಆಗಬೇಕಿತ್ತು. ಆದರೆ, ಸಕಾಲದಲ್ಲಿ ಮಳೆ ಸುರಿಯದ ಕಾರಣ 18ರಿಂದ 19 ಸಾವಿರ ಹೆಕ್ಟೇರ್ ಮಾತ್ರ ಆಗಿದೆ.

    ಶೇಂಗಾ ಬೆಳೆಯಿಂದ ತಾಲೂಕು ಎಣ್ಣೆ ನಗರಿ ಎಂಬ ಖ್ಯಾತಿ ಪಡೆದಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಅನಾವೃಷ್ಟಿ, ಅತಿವೃಷ್ಟಿ ಮತ್ತು ಪ್ರಕೃತಿ ವಿಕೋಪದ ಕಾರಣಗಳಿಂದ ಬೆಳೆಗಾರರಿಗೆ ಬೆಳೆ ಲಾಭ ತರುತ್ತಿಲ್ಲ.

    ಎರಡು ದಶಕಗಳಿಂದ ಶೇಂಗಾ ಬೆಳೆಯುವ ರೈತರು ನಷ್ಟ ಅನುಭವಿಸಿದ್ದಾರೆ. ಅಲ್ಪಸ್ವಲ್ಪ ಮಳೆಯಲ್ಲಿ ಮರಳು ಮಿಶ್ರಿತ ಬಿಳಿ ನೆಲದಲ್ಲಿ ಬೀಜ ಊರಲಾಗಿದೆ. ಕೆಂಪು ಮಣ್ಣಿನ ಜಮೀನಲ್ಲಿ ಮಳೆ ನೋಡಿಕೊಂಡು ಬಿತ್ತನೆ ಮಾಡಲು ಕಾಯುತ್ತಿದ್ದಾರೆ.

    ಚಳ್ಳಕೆರೆ ತಾಲೂಕಿನಲ್ಲಿ 85 ಸಾವಿರ ಹೆಕ್ಟೇರ್ ಶೇಂಗಾ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ವರ್ಷ ಶೇ.100ರಷ್ಟು ಬಿತ್ತನೆ ಆಗಿತ್ತು. ಈ ವರ್ಷ ಹಿನ್ನಡೆಯಾಗಿದೆ. ಸಕಾಲಕ್ಕೆ 9 ಸಾವಿರ ಕ್ವಿಂಟಾಲ್ ಶೇಂಗಾ ಬೀಜ ವಿತರಿಸಲಾಗಿದ್ದು, ಕೊರತೆ ಇಲ್ಲದಂತೆ ದಾಸ್ತಾನು ಮಾಡಿಕೊಳ್ಳಲಾಗಿದೆ.
    ಜೆ.ಅಶೋಕ್ ಸಹಾಯಕ ನಿರ್ದೇಶಕ, ಕೃಷಿ ಇಲಾಖೆ.

    ಮಳೆ ಸಕಾಲಕ್ಕೆ ಬರದ ಕಾರಣ ರೈತರು ಬಿತ್ತನೆಗೆ ಹಿಂದೇಟು ಹಾಕುತ್ತಿದ್ದಾರೆ. ಭೂಮಿ ಹಸನು ಮಾಡಿಕೊಂಡು ಕಾಯುತ್ತಿದ್ದಾರೆ. ಬೆಳೆಗಾರರು ಸಮಸ್ಯೆಗೆ ಸಿಲುಕಿದರೆ ಸರ್ಕಾರದ ವಿಶೇಷ ಯೋಜನೆಯಡಿ ನೆರವು ನೀಡಬೇಕು.
    ರೆಡ್ಡಿಹಳ್ಳಿ ವೀರಣ್ಣ ಉಪಾಧ್ಯಕ್ಷರು, ರಾಜ್ಯ ರೈತ ಸಂಘ, ಚಳ್ಳಕೆರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts