More

    ಸ್ವಾವಲಂಬಿ ಬದುಕಿಗೆ ಮಹಿಳಾ ಸ್ವ ಸಹಾಯ ಸಂಘಗಳು ಸಹಕಾರಿ

    ಚಳ್ಳಕೆರೆ: ಸ್ತ್ರೀಯರ ಸಂಘಟನೆ, ಸ್ವಾವಲಂಬಿ ಬದುಕಿಗೆ ಮಹಿಳಾ ಸ್ವ ಸಹಾಯ ಸಂಘಗಳು ಸಹಕಾರಿಯಾಗಿವೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಒ. ಶಶಿಕಲಾ ಹೇಳಿದರು.

    ತಾಲೂಕಿನ ಗೋಪನಹಳ್ಳಿಯ ಗಂಗಾವಧೂತರ ಸಮುದಾಯ ಭವನದಲ್ಲಿ ಮಂಗಳವಾರ ಅಂಗನವಾಡಿ ಕಾರ್ಯಕರ್ತೆಯರು, ಸ್ವ ಸಹಾಯ ಸಂಘಗಳ ಮಹಿಳಾ ಸದಸ್ಯರಿಗೆ ಏರ್ಪಡಿಸಿದ್ದ ಪಂಚಾಯತ್ ರಾಜ್ ಮತ್ತು ಸಹಾಯ ಸಂಘಗಳ ಒಗ್ಗೂಡುವಿಕೆ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಸಂಘಗಳ ಸ್ಥಾಪನೆಗೆ ಬಹುದೂರದಿಂದ ಬರುವವರನ್ನು ನಂಬಿ ಮೋಸ ಹೋಗಬಾರದು. ಸ್ಥಳೀಯವಾಗಿ ಹುಟ್ಟಿಕೊಂಡ ಸಂಘಗಳಲ್ಲಿ ಭಾಗಿಯಾಗಿ ಉಳಿತಾಯ ಮನೋಭಾವ ಬೆಳೆಸಿಕೊಳ್ಳಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ಸ್ವಯಂ ಉದ್ಯೋಗ ಯೋಜನೆಯಡಿ ಹೈನುಗಾರಿಕೆ, ಗುಡಿ ಕೈಗಾರಿಕೆಗಳ ಯೋಜನೆ ಜಾರಿಗೊಳಿಸಿ ಸಾಲ ಸೌಲಭ್ಯ ನೀಡುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

    ಮಹಿಳಾ ಸಾಂಘಿಕ ಅಧಿಕಾರಿ ಪ್ರಿಯದರ್ಶಿನಿ ಮಾತನಾಡಿ, ಮಹಿಳಾ ಸಂಘಗಳ ಉತ್ತೇಜನಕ್ಕೆ ಸರ್ಕಾರದಿಂದ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳಿವೆ. ಸ್ಥಳೀಯ ಗ್ರಾಪಂ ವ್ಯಾಪ್ತಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಸ್ವ ಸಹಾಯ ಸಂಘಗಳಿಗೆ ತರಬೇತಿ ಮತ್ತು ಸರ್ಕಾರಿ ಸೌಲಭ್ಯಗಳ ಮಾಹಿತಿ ನೀಡುವ ಮೂಲಕ ಪ್ರತಿ ಸದಸ್ಯರಿಗೂ ಸ್ವ ಉದ್ಯೋಗ ಭದ್ರತೆಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

    ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಣ್ಣ, ವೆಂಕಟೇಶ್, ಮಹಿಳಾ ಸಾಂಘಿಕ ಇಲಾಖೆ ರೀನಾ, ಅಂಗನವಾಡಿ ಕಾರ್ಯಕರ್ತೆಯರಾದ ಲಕ್ಷ್ಮೀದೇವಿ, ತಿಪ್ಪಮ್ಮ, ಯಲ್ಲಮ್ಮ, ಗಣಕಯಂತ್ರ ನಿರ್ವಾಹಕ ವೆಂಕಟೇಶ್, ತಿಮ್ಮಕ್ಕ, ಮಹಿಳಾ ಸ್ವ ಸಹಾಯ ಸಂಘದ ಸದಸ್ಯರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts