More

    ಶಾಲಾಭಿವೃದ್ಧಿಗೆ ನಿವೃತ್ತ ನೌಕರರು ಪಣ

    ಚಳ್ಳಕೆರೆ: ಶಿಕ್ಷಣ ಕಲಿತ ಶಾಲೆಗೆ ಸಹಕಾರ ಮಾಡುವ ದೃಷ್ಟಿಯಿಂದ ನಿವೃತ್ತ ನೌಕರರು ಸೇವಾ ಟ್ರಸ್ಟ್ ಸ್ಥಾಪಿಸಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಡಾ.ಸಿ.ಶಿವಲಿಂಗಪ್ಪ ಹೇಳಿದರು.

    ತಾಲೂಕಿನ ಗೋಪನಹಳ್ಳಿ ನಿವೃತ್ತ ನೌಕರರು ಮತ್ತು ವಿವಿಧ ಸಮುದಾಯಗಳ ನೌಕರರು ಒಗ್ಗೂಡಿ ಗ್ರಾಮದ ಅಭಿವೃದ್ಧಿ ಮತ್ತು ಶಾಲಾ ಸೇವೆಗಾಗಿ ಆರಂಭಿಸಿರುವ ಸೇವಾಟ್ರಸ್ಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಪ್ರಸ್ತುತ ಸಂಬಂಧ ಇಬ್ಭಾಗಿಸುವ ಮತ್ತು ಕೋಮು ಸಂಘರ್ಷ ಸೃಷ್ಟಿಸುವಂತ ಕಾಲಘಟ್ಟವಿದು. ಇಂತಹ ಸಂದರ್ಭದಲ್ಲಿ ವಿದ್ಯೆ ಕಲಿತ ಶಾಲೆ ಮತ್ತು ಗ್ರಾಮಕ್ಕೆ ನೆರವಾಗಲು ನಿವೃತ್ತ ನೌಕರರು ಅಭಿವೃದ್ಧಿ ಮುಂದಾಗಿರುವುದು ಯುವಸಮೂಹಕ್ಕೆ ಮಾದರಿಯಾಗಿದೆ ಎಂದರು.

    ಶಾಲೆ, ಗುರುಗಳನ್ನು ಸ್ಮರಿಸುವ ಹೃದಯವಂತಿಕೆ ಇರಬೇಕು. ಇದರಿಂದ ಮಾತ್ರ ಶಿಕ್ಷಣದ ವಿಶಾಲವಾದ ಅನುಭವ ಅರಿಯಬಹುದು. ಈಗಿನ ಮಕ್ಕಳಿಗೆ ಗ್ರಾಮೀಣ ಹಂತದಲ್ಲೇ ಸ್ಪರ್ಧಾ ಪರೀಕ್ಷೆಗಳಿಗೆ ಸಿದ್ಧಗೊಳಿಸುವ ಶಿಕ್ಷಣ ಕೊಡಬೇಕಿದೆ. ಸರ್ಕಾರದ ಯೋಜನೆಗಳ ಜತೆಗೆ ಸಮುದಾಯಗಳ ಸಹಭಾಗಿತ್ವ ಇದ್ದಲ್ಲಿ ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಸಾಧ್ಯ ಎಂದು ಹೇಳಿದರು.

    ನಿವೃತ್ತ ಪ್ರಾಚಾರ್ಯಎಂ.ಕರಿಯಪ್ಪ, ಗೌರವ ಅಧ್ಯಕ್ಷ ಬಿ.ವಿ.ಸಿರಿಯಣ್ಣ, ಬೆಸ್ಕಾಂ ಮುಖ್ಯ ಇಂಜಿನಿಯರ್ ಚಂದ್ರಶೇಖರ್, ವಾಸುದೇವಮೂರ್ತಿ, ಪ್ರೊ.ಎನ್.ಜಗನ್ನಾಥ್, ಸಿ.ಅಜ್ಜಣ್ಣ, ಎಸ್.ಮೈಲಾರಲಿಂಗಪ್ಪ, ಜಿ.ಆರ್.ಚಂದ್ರಶೇಖರ್, ನಿಂಗಪ್ಪ, ಅಂಜನಾಮೂರ್ತಿ, ಡಿ.ವೀರಭದ್ರಯ್ಯ, ಕೆಂಚರಾಯಪ್ಪ, ಟಿ.ರಂಗಸ್ವಾಮಿ, ಎಸ್.ಟಿ.ತಿಪ್ಪೇಸ್ವಾಮಿ, ಎಚ್.ರಂಗನಾಥ್, ವಿ.ಮಂಜುನಾಥ, ಜಿ.ಪಿ.ತಮ್ಮೇಗೌಡ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts