More

    ಸರ್ಕಾರ-ಜನರ ಸಂಘರ್ಷಕ್ಕೆ ಕಾರಣವಾದ ಎನ್‌ಆರ್‌ಸಿ

    ಚಳ್ಳಕೆರೆ: ಕೇಂದ್ರ ಸರ್ಕಾರ ಜಾರಿ ಮಾಡಿರುವ ಪೌರತ್ವ ತಿದ್ದುಪಡಿ ಕಾಯ್ದೆ, ಜನಸಾಮಾನ್ಯರು ಮತ್ತು ಸರ್ಕಾರದ ನಡುವಿನ ಸಂಘರ್ಷಕ್ಕೆ ಕಾರಣವಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪಿ. ಪ್ರಕಾಶ್‌ಮೂರ್ತಿ ಹೇಳಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಎನ್‌ಆರ್‌ಸಿ ಮತ್ತು ಸಿಎಎ ಬಗ್ಗೆ ಜನ ಸಾಮಾನ್ಯರಿಗೆ ಯಾವುದೇ ಅನುಕೂಲವೂ ಇಲ್ಲ, ಮಾಹಿತಿಯೂ ಇಲ್ಲ. ಇದರಿಂದ ಗಲಭೆಗಳು ಹೆಚ್ಚುತ್ತಿವೆ. ಕೇಂದ್ರ ಸರ್ಕಾರದ ಪರ ಇರುವ ಕೆಲ ಗೂಂಡಾ ಸಂಘಟನಾಕಾರರು ಪೊಲೀಸ್ ವೇಷಧಾರಿಗಳಾಗಿ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ದೂರಿದರು.

    ಸ್ವಾತಂತ್ರ್ಯ ತರುವಾಯ ದೇಶದಲ್ಲಿ ಆಡಳಿತ ನಡೆಸಿರುವ ಯಾವ ಸರ್ಕಾರಗಳೂ ಚಳವಳಿ ಮತ್ತು ಹೋರಾಟಗಳನ್ನು ಹತ್ತಿಕ್ಕುವ ಕೆಲಸ ಮಾಡಿಲ್ಲ. ಆದರೆ ಕೇಂದ್ರ ಬಿಜೆಪಿ ಸರ್ಕಾರದಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಹೋರಾಟದ ಹಕ್ಕು ದಮನವಾಗುತ್ತಿದೆ ಎಂದು ತಿಳಿಸಿದರು.

    ನಗರಸಭೆ ಸದಸ್ಯ ಕೆ. ವೀರಭದ್ರಯ್ಯ, ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎಚ್. ಆಂಜನೇಯ, ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ಕರೀಕೆರೆ ರಾಜಣ್ಣ, ಬಿ. ಷಣ್ಮುಖಪ್ಪ, ಎಚ್. ಮಲ್ಲಿಕಾರ್ಜುನ, ಕರಿಬಸವ, ಕಡದರಹಳ್ಳಿ ಚನ್ನಪ್ಪ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts