More

    ಚರಂಡಿ, ರಾಜ ಕಾಲುವೆಗಳ ಸ್ವಚ್ಛತೆ

    ಚಳ್ಳಕೆರೆ: ನಗರದ 31 ವಾರ್ಡ್‌ಗಳಲ್ಲಿ ದೊಡ್ಡ ಚರಂಡಿಗಳು ಮತ್ತು ರಾಜಕಾಲುವೆಗಳ ಸ್ವಚ್ಛತಾ ಕಾರ್ಯ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

    ಇಲ್ಲಿನ ವಾರ್ಡ್ 8ರ ರಹೀಂ ನಗರದಲ್ಲಿ ಕೈಗೊಂಡಿರುವ ರಾಜಕಾಲುವೆ ಸ್ವಚ್ಛತಾ ಕಾರ್ಯ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.

    ರಹೀಂ ನಗರ ತಗ್ಗು ಪ್ರದೇಶವಾಗಿದೆ. ಇಲ್ಲಿ ಹರಿಯುತ್ತಿರುವ ದೊಡ್ಡ ಹಳ್ಳಕ್ಕೆ ಈಗಾಗಲೇ ಸಣ್ಣ ನೀರಾವರಿ ಇಲಾಖೆಯಿಂದ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಆದರೆ, ಮಳೆ ಬಂದಾಗ ಸಮಸ್ಯೆ ಹೆಚ್ಚಾಗುತ್ತದೆ. ಆದ್ದರಿಂದ ಶೀಘ್ರದಲ್ಲೇ ಶಾಶ್ವತ ಕಾಯಕಲ್ಪಕ್ಕೆ ಮುಂದಾಗಲಾಗುವುದು ಎಂದರು.

    ಪ್ರತಿ ವಾರ್ಡ್‌ಗಳ ವ್ಯಾಪ್ತಿಗೆ ಬರುವ ರುದ್ರಭೂಮಿ ಮತ್ತು ಖಾಲಿ ನಿವೇಶನಗಳಲ್ಲಿ ಬೆಳೆದಿದ್ದ ಗಿಡ-ಗಂಟೆಗಳ ಸ್ವಚ್ಛ ಮಾಡಲಾಗಿದೆ ಎಂದು ತಿಳಿಸಿದರು.

    ನಗರದ ಸುಂದರತೆಗೆ ಕೈಗೊಳ್ಳುವ ಕಾರ್ಯಗಳಿಗೆ ಸಾರ್ವಜನಿಕರ ಸಹಕಾರ ಅಗತ್ಯ. ಚರಂಡಿ, ರಸ್ತೆಗಳಿಗೆ ಕಸ ಹಾಕದೇ ನಗರಸಭೆ ವಾಹನಗಳಿಗೆ ಹಾಕಬೇಕು. ಪೌರ ಕಾರ್ಮಿಕರಿಗೆ ಸ್ಪಂದಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.

    ನಗರಸಭೆ ಸದಸ್ಯರಾದ ರುದ್ರಾನಾಯ್ಕ, ಕೆ.ಸಿ.ನಾಗರಾಜ, ಬಿ.ಟಿ.ರಮೇಶ್‌ಗೌಡ, ಗೋವಿಂದ ಹೊಯ್ಸಳ, ವೈ.ಪ್ರಕಾಶ್, ಮುಖಂಡರಾದ ಆರ್.ಪ್ರಸನ್ನ ಕುಮಾರ್, ಪಾಲಯ್ಯ, ಗಾಂಧಿನಗರ ಕೃಷ್ಣ, ವೃತ್ತ ನಿರೀಕ್ಷಕ ಈ.ಆನಂದ್ ಇದ್ದರು.

    ನಗರಸಭೆ ಪೌರಾಯುಕ್ತ ಪಾಲಯ್ಯ ಹೇಳಿಕೆ: ಖಾಲಿ ನಿವೇಶಗಳಲ್ಲಿ ಗಿಡಗಳು ಬೆಳೆದು ನಗರದ ಸ್ವಚ್ಛತೆ ಸಮಸ್ಯೆಯಾಗಿದೆ. ನಗರಸಭೆಯಿಂದ ಸ್ವಚ್ಛಗೊಳಿಸಿರುವ ಖಾಲಿ ನಿವೇಶನಗಳ ಸರ್ವೇ ಕಾರ್ಯ ಕೈಗೊಳ್ಳಲಾಗಿದೆ. ಒಂದು ಸಾವಿರಕ್ಕೂ ಅಧಿಕ ಮಾಲೀಕರಿಗೆ ಕಂದಾಯದ ಜತೆಗೆ ದಂಡ ವಿಧಿಸಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts