More

    ಕೆರೆಗಳು ಜೀವ ಸಂಕುಗಳ ಜೀವನಾಡಿ

    ಚಳ್ಳಕೆರೆ: ಜನತೆ ಕೆರೆಗಳ ಅಭಿವೃದ್ಧಿ, ಅಂತರ್ಜಲ ಹೆಚ್ಚಳಕ್ಕೆ ಆಧಾರವಾಗಿರುವ ಜಲಾಮೃತ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಲಾಮೃತ ಯೋಜನೆ ನಿರ್ವಹಣಾಧಿಕಾರಿ ಪ್ರವೀಣ್ ಹೇಳಿದರು.

    ತಾಲೂಕಿನ ಹಿರೇಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಲಾಮೃತ ಯೋಜನೆ ಜಾಗೃತ ಸಭೆಯಲ್ಲಿ ಮಾತನಾಡಿ, ಕೆರೆ, ಕಟ್ಟೆಗಳು ಜೀವ ಸಂಕುಗಳ ಜೀವನಾಡಿಗಳು. ಇವುಗಳ ಉಳಿವು ಪ್ರತಿ ವ್ಯಕ್ತಿ ಹೊಣೆ ಎಂದರು.

    ಹಿರೇಹಳ್ಳಿ ಮತ್ತು ಪಾಲನಾಯಕನಕೋಟೆ ಕೆರೆಗಳು ಜಲಾಮೃತ ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಇದರಡಿ ಹೂಳೆತ್ತುವುದು, ಕೆರೆ ವಿಸ್ತೀರ್ಣ ಅಳತೆ, ವಿಂಗಡಣೆ ಮತ್ತು ಗಡಿ ಗುರುತಿಸುವಿಕೆ ಜತೆಗೆ ಏರಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

    ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದು, ಬಿದ್ದ ಮಳೆ ನೀರು ವ್ಯರ್ಥವಾಗದಂತೆ ಸಂಗ್ರಹಿಸುವ ಕೆಲಸ ಆಗಬೇಕು. ಈ ಉದ್ದೇಶದಿಂದ ಜಲಾಮೃತ ಯೋಜನೆ ಜಾರಿಗೊಳಿಸಿದ್ದು, ಇದರಿಂದಾಗುವ ಕೆರೆಗಳ ಸಂರಕ್ಷಣೆಯಿಂದ ಅಂತರ್ಜಲ ಹೆಚ್ಚಿ ಜನ ಜಾನುವಾರು, ರೈತರ ಕೃಷಿ ಪಂಪ್‌ಗಳಿಗೆ ಅನುಕೂಲವಾಗುತ್ತದೆ ಎಂದರು.

    ಗ್ರಾಪಂ ಅಧ್ಯಕ್ಷ ಆರ್.ಟಿ.ಬಸವರಾಜ್ ಮಾತನಾಡಿ, ಬರ ನಿರ್ವಹಣೆಗೆ ಕೆರೆ ಅಭಿವೃದ್ಧಿ ಮುಖ್ಯವಾಗಿದೆ. ಜಲಾಮೃತ ಯೋಜನೆಯಡಿ ಕಾಮಗಾರಿ ಕೈಗೊಂಡು ಜಲಸಂರಕ್ಷಣೆಗೆ ಗ್ರಾಮಸ್ಥರು ಮುಂದಾಗಬೇಕು. ಹೂಳೆತ್ತುವ ಕೆಲಸವನ್ನು ಸ್ಥಳೀಯರಿಗೆ ನೀಡಲಾಗುತ್ತದೆ ಎಂದರು.

    ಗ್ರಾಪಂ ಉಪಾಧ್ಯಕ್ಷ ಎ.ಕೆ.ಬಸವರಾಜ್, ಸದಸ್ಯರಾದ ರೂಪಾ, ರಮೇಶ, ಸುರೇಶ್, ಪಿಡಿಒ ರಾಜೇಶ್, ಜಗದೀಶ್, ರೈತ ಮುಖಂಡರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts