More

    ಫಲಿತಾಂಶ ಸುಧಾರಣೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿ

    ಚಡಚಣ: ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ಉಪನ್ಯಾಸಕರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಹೇಳಿದರು.
    ಪಟ್ಟಣದ ಸಂಗಮೇಶ್ವರ ಪಪೂ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್, ಇತಿಹಾಸ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಅರ್ಥಶಾಸ ಉಪನ್ಯಾಸಕರಿಗಾಗಿ ಹಮ್ಮಿಕೊಂಡಿದ್ದ ಎರಡು ದಿನಗಳ ಜಿಲ್ಲಾಮಟ್ಟದ ಪುನಶ್ಚೇತನ ಕಾರ್ಯಾಗಾರದಲ್ಲಿ ಪೇಜಾವರ ಶ್ರೀಗಳು ಕೃಷ್ಣೈಕ್ಯರಾದ ನಿಮಿತ್ತ ನಡೆದ ಸಂತಾಪ ಸೂಚಕ ಸಭೆಯ ನಂತರ ಅವರು ಮಾತನಾಡಿದರು.
    ಪೇಜಾವರ ಶ್ರೀಗಳು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವ ಮೂಲಕ ಬಡ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುತ್ತಿರುವುದನ್ನು ಅವರು ಇದೇ ಸಂದರ್ಭದಲ್ಲಿ ಸ್ಮರಿಸಿದರು.
    ಪುನಶ್ಚೇತನ ಕಾರ್ಯಾಗಾರದ ಅವಶ್ಯಕತೆ ಕುರಿತು ಉಪನ್ಯಾಸಕರೊಂದಿಗೆ ಸಂವಾದ ನಡೆಸಿದ ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜೆ.ಎಸ್. ಪೂಜೇರಿ ಮಾತನಾಡಿ, ಶಿಕ್ಷಕರು ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಪಿಯುಸಿ ಲಿತಾಂಶ ಸುಧಾರಣೆಗೆ ಅಣಿಯಾಗಬೇಕು. ಅನೇಕ ಉಪನ್ಯಾಸಕರು ತಮಗೆ ವಹಿಸಿದ ಜವಾಬ್ದಾರಿಗಳನ್ನು ನಿರ್ವಹಿಸದಿರುವುದು ಖೇದಕರ ಎಂದರಲ್ಲದೆ, ಉಪನ್ಯಾಸಕರು ತಮ್ಮ ಸ್ವಂತ ಮಕ್ಕಳ ಶಿಕ್ಷಣಕ್ಕೆ ಕೊಡುವಷ್ಟು ಪ್ರಾಮುಖ್ಯತೆಯನ್ನು ತಾವು ಕಲಿಸುವ ಮಕ್ಕಳ ಶಿಕ್ಷಣಕ್ಕೂ ನೀಡಿದರೆ ಖಂಡಿತ ಜಿಲ್ಲೆಯ ಲಿತಾಂಶ ಸಾಕಷ್ಟು ಹೆಚ್ಚಾಗಲಿದೆ ಎಂದು ಹೇಳಿದರು.
    ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲ ಅನುದಾನಿತ ಮತ್ತು ಸರ್ಕಾರಿ ಕಾಲೇಜುಗಳ ಸುಮಾರು 266 ಉಪನ್ಯಾಸಕರುಗಳು ಮತ್ತು ಪ್ರಾಚಾರ್ಯರು ಭಾಗವಹಿಸಿದ್ದರು.
    ಸಂಗಮೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಆರ್. ಡೋಣಗಾಂವ, ಉಪಾಧ್ಯಕ್ಷ ಎಸ್.ಆರ್. ಅವಜಿ, ಗೌರವ ಕಾರ್ಯದರ್ಶಿ ವಿ.ಜಿ. ಮುತ್ತಿನ, ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಡಿ. ಚವಾಣ್, ಐದು ವಿಷಯಗಳು ವಿಷಯ ಪರಿಣಿತರು ಮತ್ತು ಉಪನ್ಯಾಸಕರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts