More

    ಬೃಹತ್ ತಿರಂಗಾ ಪಥಸಂಚಲನ : 300 ಮೀ.ಉದ್ದದ ರಾಷ್ಟ್ರಧ್ವಜ

    ಚಡಚಣ: ಸ್ವಾತಂತ್ರೃ ಅಮೃತ ಮಹೋತ್ಸವ ಪ್ರಯುಕ್ತ ಹಮ್ಮಿಕೊಂಡ ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸಲು ಪಟ್ಟಣದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಉಮೇಶ ಕಾರಜೋಳ ನೇತೃತ್ವದಲ್ಲಿ ಶನಿವಾರ ಬೃಹತ್ ಜಾಗೃತಿ ಜಾಥಾ ನಡೆಸಲಾಯಿತು.

    300 ಮೀ.ಉದ್ದದ ಭವ್ಯ ರಾಷ್ಟ್ರಧ್ವಜದೊಂದಿಗೆ ಪಟ್ಟಣದ ಸಂಗಮೇಶ್ವರ ದೇವಸ್ಥಾನದಿಂದ ಆರಂಭಗೊಂಡ ರ‌್ಯಾಲಿಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಎಪಿಎಂಸಿಯಲ್ಲಿ ಸಮಾಪ್ತಿಗೊಂಡಿತು.

    ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಮಾತನಾಡಿ, ದೇಶದ ಸ್ವಾತಂತ್ರೃ ಸಂಗ್ರಾಮ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಹೋರಾಟವಾಗಿದೆ. ಲಕ್ಷಾಂತರ ಜನರ ತ್ಯಾಗ, ಬಲಿದಾನದ ಲವಾಗಿ ಇಂದು ನಾವು ಸ್ವಾತಂತ್ರೃ ಪಡೆದಿದ್ದೇವೆ. ಸ್ವಾತಂತ್ರೃ ಹೋರಾಟಗಾರರನ್ನು ನಾವು ಅನುದಿನವು ನೆನೆಯಬೇಕು ಎಂದರು.

    ಸ್ವಾತಂತ್ರೃ ದೊರೆತು 75ನೇ ವಸಂತಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ಆಶಯಂತೆ ಹರ್ ಘರ್ ತಿರಂಗಾ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಜನ ಜಾಗೃತಿ ಅಭಿಯಾನ ಕೈಗೊಳ್ಳಲಾಗಿದೆ. ಪ್ರತಿಯೊಬ್ಬರೂ ತಮ್ಮ ಮನೆಗಳ ಮುಂದೆ ತಿರಂಗಾ ಧ್ವಜ ಹಾರಿಸಬೇಕು ಎಂದರು.

    ಮಂಡಲ ಅಧ್ಯಕ್ಷ ರಾಮ ಅವಟಿ, ಅಪ್ಪುಗೌಡ ಬಿರಾದಾರ, ಶ್ರೀಮಂತ ಉಮರಾಣಿ, ನಾಗುಸಾಹುಕಾರ ಬಿರಾದಾರ, ಭೀಮಾಶಂಕರ ಬಿರಾದಾರ, ಕಲ್ಲಪ್ಪ ಗುಮಸ್ತೆ, ರಾಜುಗೌಡ ಪಾಟೀಲ, ಅಪ್ಪುಗೌಡ ಪಾಟೀಲ (ಗೊಳಗಿ), ವಿಜಯಕುಮಾರ ಅವಟಿ, ಮಹಾದೇವ ಬಗಲಿ, ಪ್ರಕಾಶ ಹಲಸಂಗಿ, ಸಂಜೀವ ಕುಂಬಾರ, ಪ್ರಭಾಕರ ನಿರಾಳೆ, ಶ್ರೀಕಾಂತ ಗಂಟಗಲ್ಲ, ಅಮನ ಕುಲಕರ್ಣಿ, ಅಶೋಕ ನಡಗಟ್ಟಿ, ಕಲ್ಲಪ್ಪ ಉಟಗಿ ಸೇರಿ ಸುತ್ತಲಿನ ಗ್ರಾಮಗಳ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

    ಅಭಿಯಾನ ಯಶಸ್ವಿಗೊಳಿಸಿ 
    
    ಮುದ್ದೇಬಿಹಾಳ: ಪ್ರತಿಯೊಬ್ಬರೂ ತಮ್ಮ ಮನೆ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ 75ನೇ ವರ್ಷದ ಸ್ವಾತಂತ್ರೃವನ್ನು ಸಡಗರದಿಂದ ಆಚರಿಸಬೇಕು ಎಂದು ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಹೇಳಿದರು. 
    
    ಪಟ್ಟಣದ ಪುರಸಭೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು. ಅಮೃತ ಮಹೋತ್ಸವ ಸಂದರ್ಭದಲ್ಲಿ ಎಲ್ಲರೂ ರಾಷ್ಟ್ರಧ್ವಜ ಹಾರಿಸುವುದರ ಹಿಂದೆ ದೇಶಭಕ್ತಿ 
    ಜಾಗೃತಿಗೊಳಿಸುವ ಉದ್ದೇಶವಿದೆ. ಇದನ್ನು ಎಲ್ಲರೂ ಯಶಸ್ವಿಗೊಳಿಸೋಣ ಎಂದರು.
    
    ಸರ್ಕಾರ ಈಗಾಗಲೇ ಪುರಸಭೆಗೆ 5 ಸಾವಿರ ಧ್ವಜಗಳನ್ನು ಪೂರೈಸಿದೆ. ಪ್ರತಿ ಧ್ವಜದ ಬೆಲೆ 22 ರೂ.ಇದ್ದು, ಎಲ್ಲರೂ ಖರೀದಿಸಬೇಕು. ಪುರಸಭೆ ಕಚೇರಿಯಲ್ಲಿ ಇದಕ್ಕಾಗಿ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ ಎಂದರು. ಪುರಸಭೆ ಉಪಾಧ್ಯಕ್ಷೆ ಶಹಜಾದಬಿ ಹುಣಚಗಿ, ಸದಸ್ಯರಾದ ಮಹ್ಮದರಫೀಕ್ ದ್ರಾಕ್ಷಿ, ಮಾಜಿ ಸದಸ್ಯ ಸಂತೋಷ ನಾಯ್ಕೋಡಿ, ಮಹಾಂತೇಶ ಕಟ್ಟಿಮನಿ, ಜಾವೇದ ನಾಯ್ಕೋಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts