More

    ಜನರ ಸುರಕ್ಷತೆ ಪೊಲೀಸರ ಹೊಣೆ

    ಚಡಚಣ: ಭೀಮಾ ತೀರದ ಸಾರ್ವಜನಿಕರಿಗೆ ‘ಎಂದೆಂದಿಗೂ ನಾವು ನಿಮ್ಮೊಂದಿಗೆ’ ಎಂದು ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ ಅಭಯ ನೀಡಿದರು.

    ಸಮೀಪದ ಭೀಮಾ ತೀರದ ಉಮರಾಣಿ ಗ್ರಾಮದಲ್ಲಿ ಚಡಚಣ ಪೊಲೀಸ್ ಠಾಣೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಜನಸ್ನೇಹಿ ಆಡಳಿತ ಎಂಬುದು ಕೇವಲ ಘೋಷಣೆಗೆ ಸೀಮಿತವಾಗಬಾರದು. ಅದು ಜನರ ಭಾವನೆಯಲ್ಲಿ ವ್ಯಕ್ತವಾಗಬೇಕು. ಅಂತಹ ವಾತಾವರಣವನ್ನು ಪೊಲೀಸ್ ವ್ಯವಸ್ಥೆಯಲ್ಲಿ ಕಟ್ಟಿಕೊಡುವ ಗುರಿ ಹೊಂದಿದ್ದೇನೆ ಎಂದು ಹೇಳಿದರು.

    ಗ್ರಾಮಸ್ಥರು ಮಾತನಾಡಿ, ಗ್ರಾಮದ ಶಾಲೆ ಕಟ್ಟಡಗಳಲ್ಲಿ ಪುಂಡ- ಪೋಕರಿಗಳು ಅನೈತಿಕ ಚಟುವಟಿಕೆ ಮಾಡುತ್ತಿದ್ದ್ದಾರೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ, ಗದ್ದೆಯಲ್ಲಿನ ಪಂಪ್‌ಸೆಟ್ ಕಳ್ಳತನವಾಗುತ್ತಿರುವ ಕುರಿತು ಹಾಗೂ ಹಾವಿನಾಳ ಇಂಡಿಯನ್ ಶುಗರ್ ಸಕ್ಕರೆ ಕಾರ್ಖಾನೆಯಲ್ಲಿ ರೈತರಿಗೆ ಕಬ್ಬಿನ ದರ ಕಡಿಮೆ ಕೊಡುತ್ತಿರುವ ಕುರಿತು ಡಿವೈಎಸ್ಪಿ ಗಮನಕ್ಕೆ ತಂದರು.

    ಕೂಡಲೇ ಗ್ರಾಮಸ್ಥರ ಸಮಸ್ಯೆಗಳನ್ನು ಬಗೆಹರಿಸಿಕೊಡುವುದಾಗಿ ಡಿವೈಎಸ್ಪಿ ದೊಡ್ಡಿ ಭರವಸೆ ನೀಡಿದರು.
    ಚಡಚಣ ಪಿಎಸ್‌ಐ ಎಂ.ಎ. ಸತ್ತಿಗೌಡರ, ಮುಖಂಡರಾದ ಸುಭಾಸ ಭೈರಗೊಂಡ, ಜಗದೇವ ಭೈರಗೊಂಡ, ಅಶೋಕ ಹಳಿಜೋಳ, ಬಸನಗೌಡ ಬಿರಾದಾರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts