More

    ಸಿಇಟಿ ರ‌್ಯಾಂಕಿಂಗ್ ಬಿಕ್ಕಟ್ಟು; ನಾಳೆ ಏನಾಗಲಿದೆ?

    ಬೆಂಗಳೂರು: ಸಿಇಟಿ ರ‌್ಯಾಂಕಿಂಗ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ನಾಳೆ ಮಹತ್ವದ ಬೆಳವಣಿಗೆಯೊಂದು ನಡೆಯಲಿದೆ. ಸಿಇಟಿ ರ‌್ಯಾಂಕಿಂಗೆ ಸಂಬಂಧಿಸಿದಂತೆ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಲು ಅಗತ್ಯವಾದ ಸಮನ್ವಯ ಸೂತ್ರವನ್ನು ರೂಪಿಸಲು ಹೈಕೋರ್ಟ್ ನಿರ್ದೇಶನದಂತೆ ಸರ್ಕಾರವು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ ಅವರ ಅಧ್ಯಕ್ಷತೆಯಲ್ಲಿ ಐವರ ಸಮಿತಿಯನ್ನು ರಚಿಸಿತ್ತು.

    ಆ ಸಮಿತಿ ಗುರುವಾರ ಬೆಳಗ್ಗೆ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಲಿದೆ. ಆ ನಂತರ ಆ ವರದಿಯನ್ನು ಹೈಕೋರ್ಟ್‌ಗೆ ಸರ್ಕಾರ ಸಲ್ಲಿಸಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಗುರುವಾರ ಬೆಳಗ್ಗೆ ಸಮಿತಿ ನೀಡಿರುವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಸರ್ಕಾರ ಬೆಳಗ್ಗೆ 8.30ಕ್ಕೆ ಉನ್ನತಮಟ್ಟದ ಸಭೆಯನ್ನು ನಡೆಸಲಿದೆ. ಸಭೆಯ ನಂತರ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸುತ್ತಾರೆ. ಆ ವರದಿಯನ್ನು ಆಧರಿಸಿ ಹೈಕೋರ್ಟ್ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

    ಈ ಸಮಿತಿಯಲ್ಲಿ ಅನಂತಪುರದ ಕೇಂದ್ರೀಯ ವಿವಿ ಉಪಕುಲಪತಿ ಎಸ್.ಎ.ಕೋರಿ, ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎನ್. ರವಿಚಂದ್ರನ್, ಐಐಎಸ್ಸಿ ನಿವೃತ್ತ ಡೀನ್ ಪ್ರೊ.ಎಂ.ಆರ್.ಎನ್.ಮೂರ್ತಿ ಮತ್ತು ಬಯೋಇನ್​ಫಾರ್ಮ್ಯಾಟಿಕ್ಸ್​ ಆ್ಯಂಡ್ ಅಪ್ಲೈಡ್ ಬಯೋ ಟೆಕ್ನಾಲಜಿಯ ಪ್ರೊಫೆಸರ್ ಎಮಿರೈಟಸ್, ಪ್ರೊ.ಎನ್.ಯತೀಂದ್ರ ಅವರೂ ಇದ್ದಾರೆ ಎಂದು ತಿಳಿಸಿದ್ದಾರೆ.

    ಪಡೆದಿದ್ದ ಲಂಚಕ್ಕೆ 50 ಸಾವಿರ ರೂ. ಸೇರಿಸಿ ವಾಪಸ್​ ಕೊಡಲು ಹೋಗಿ ಸಿಕ್ಕಿಬಿದ್ದ ಕೆಎಎಸ್​ ಅಧಿಕಾರಿ

    ಅಂಗಿ-ಬನಿಯನ್ ತೆಗೆಯಲು ತಕರಾರು: ದೇವಸ್ಥಾನಗಳಲ್ಲಿನ ಫಲಕ ತೆಗೆಸುವಂತೆ ಕೋರಿ ಅರ್ಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts