More

    ಲಕ್ಷಾಂತರ ಮಹಿಳೆಯರ ಉಳಿವಿಗಾಗಿ ದೇಶದಲ್ಲೇ ತಯಾರಾಯ್ತು ಸರ್ವಿಕಲ್ ಕ್ಯಾನ್ಸರ್​ ಲಸಿಕೆ!

    ನವದೆಹಲಿ: ದೇಶದಲ್ಲಿನ ಪ್ರತಿವರ್ಷ ಸಾವಿಗೀಡಾಗುತ್ತಿರುವ ಲಕ್ಷಾಂತರ ಮಹಿಳೆಯರ ಉಳಿವಿಗಾಗಿ ಭಾರತದಲ್ಲೇ ಇದೀಗ ಲಸಿಕೆಯೊಂದನ್ನು ಕಂಡು ಹಿಡಿಯಲಾಗಿದ್ದು, ಅದನ್ನು ಲೋಕಾರ್ಪಣೆ ಮಾಡಲಾಗಿದೆ. ಕ್ವಾಡ್ರಿವ್ಯಾಲೆಂಟ್ ಹ್ಯೂಮನ್​ ಪ್ಯಾಪಿಲೋಮಾವೈರಸ್ ವ್ಯಾಕ್ಸಿನ್​ (qHPV) ಎಂದು ಕರೆಯಲಾಗುವ ಇದು ಸರ್ವಿಕಲ್ ಕ್ಯಾನ್ಸರ್ ವಿರುದ್ಧ ಪ್ರಪ್ರಥಮ ಸ್ವದೇಶಿ ಲಸಿಕೆಯಾಗಿದೆ.

    ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಇಂದು ಲಸಿಕೆ ಪೂರ್ಣಗೊಂಡಿರುವ ಕುರಿತ ಘೋಷಣೆ ಸಲುವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಈ ವಿಷಯ ತಿಳಿಸಿದರು. ಡ್ರಗ್​ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಜಿಸಿಐ) ಸರ್ವಿಕಲ್​ ಕ್ಯಾನ್ಸರ್​ ವಿರುದ್ಧ ಲಸಿಕೆ ಕಂಡುಹಿಡಿಯಲು ಸೀರಂ ಇನ್​ಸ್ಟಿಟ್ಯೂಟ್ ಆಫ್​ ಇಂಡಿಯಾ (ಎಸ್​ಐಐ)ಗೆ ಅನುಮತಿ ನೀಡಿತ್ತು. ಅದರಂತೆ ಎಸ್​ಐಐ ಮತ್ತು ಡಿಪಾರ್ಟ್​ಮೆಂಟ್ ಆಫ್​ ಬಯೋಟೆಕ್ನಾಲಜಿ ಸಹಯೋಗದಲ್ಲಿ ಲಸಿಕೆಯ ತಯಾರಿ ಪೂರ್ಣಗೊಂಡಿದೆ.

    ಮಹಿಳೆಯರಲ್ಲಿ ಕಂಡುಬರುವ ಕ್ಯಾನ್ಸರ್​ಗಳ ಪೈಕಿ ಸರ್ವಿಕಲ್ (ಗರ್ಭಕಂಠ)​ ಕ್ಯಾನ್ಸರ್​ ಎರಡನೇ ಸ್ಥಾನವನ್ನು ಹೊಂದಿದ್ದು, ಇದು 14ರಿಂದ 44ರ ವಯಸ್ಸಿನವರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.

    ನ್ಯಾಷನಲ್​ ಟೆಕ್ನಿಕಲ್ ಅಡ್ವೈಸರಿ ಗ್ರೂಪ್​ ಆನ್​ ಇಮ್ಯುನೈಸೇಷನ್​ನ ಕೋವಿಡ್ ವರ್ಕಿಂಗ್ ಗ್ರೂಪ್​ನ ಅಧ್ಯಕ್ಷ ಡಾ.ಎನ್​.ಕೆ. ಅರೋರಾ, ಸರ್ವಿಕಲ್​ ಕ್ಯಾನ್ಸರ್ ವಿರುದ್ಧ ಇದು ಪರಿಣಾಮಕಾರಿ ಲಸಿಕೆಯಾಗಿದೆ. ಏಕೆಂದರೆ ಶೇ. 85ರಿಂದ 90 ಪ್ರಕರಣಗಳಲ್ಲಿ ಸರ್ವಿಕಲ್ ಕ್ಯಾನ್ಸರ್ ಹ್ಯೂಮನ್​ ಪ್ಯಾಪಿಲೋಮಾವೈರಸ್​ನಿಂದ ಬರುತ್ತದೆ ಎಂದರು.

    ಇದು ಎಚ್​ಪಿ ವೈರಸ್​ಗಳಿಂದ ಉಂಟಾಗುವ ಸರ್ವಿಕಲ್, ವೆಜೈನಲ್ ಮತ್ತು ವಲ್ವರ್​ ಕ್ಯಾನ್ಸರ್​ಗಳನ್ನು ನಿಯಂತ್ರಿಸಲಿದೆ. ರಾಷ್ಟ್ರೀಯ ರೋಗನಿರೋಧಕ ಕಾರ್ಯಕ್ರಮದಡಿ ದೇಶದ 9ರಿಂದ 14ರ ವಯಸ್ಸಿನ ಎಲ್ಲ ಹುಡುಗಿಯರಿಗೂ ಈ ಲಸಿಕೆ ನೀಡಲು ಆರೋಗ್ಯ ಸಚಿವಾಲಯ ಯೋಜನೆ ಹಾಕಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ ಭಾರತದಲ್ಲಿ 2019ರಿಂದ ಇದುವರೆಗೆ 41.91 ಲಕ್ಷ ಮಹಿಳೆಯರು ಸರ್ವಿಕಲ್ ಕ್ಯಾನ್ಸರ್​ನಿಂದ ಸಾವಿಗೀಡಾಗಿದ್ದಾರೆ.

    ಚೌತಿ ಮೆರವಣಿಗೆ ವೇಳೆ ಮಸೀದಿ ಆವರಣಕ್ಕೆ ಬಣ್ಣ ಎರಚಿದ ಯೋಧ; ಸೈನಿಕನ ಬಂಧನ, ಪ್ರಕರಣ ದಾಖಲು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts