More

    ಗರ್ಭಕಂಠದ ಕ್ಯಾನ್ಸರ್ ತೆಡೆಗೆ ಕ್ರಮ – ಸಚಿವ ದಿನೇಶ್ ಗುಂಡೂರಾವ್

    ಬೆಂಗಳೂರು: ಮಹಿಳೆಯರಲ್ಲಿ ಹೆಚ್ಚುತ್ತಿರುವ ಗರ್ಭಕಂಠದ ಕ್ಯಾನ್ಸರ್ ನಿರ್ಮೂಲನೆ ಕನಾಟಕದ ಆದ್ಯತೆಯಾಗಿದ್ದು, ಈ ಗುರಿ ಸಾಧಿಸಲು ಪರಿಣಾಮಕಾರಿ ಸ್ಕ್ರೀನಿಂಗ್, ವ್ಯಾಕ್ಸಿನ್ ಮತ್ತು ಶೀಘ್ರ ಚಿಕಿತ್ಸೆಗೆ ಒತ್ತು ನೀಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು, ಫೈಂಡ್ ಸಂಸ್ಥೆ ಮತ್ತು ರೋಚೆ ಡಯಾಗ್ನೋಸ್ಟಿಕ್ಸ್ ಸಹಯೋಗದಲ್ಲಿ ಗರ್ಭಕಂಠದ ಕ್ಯಾನ್ಸರ್ ಸ್ಕ್ರೀನಿಂಗ್ ಹೆಚ್ಚಿಸುವ ಮಾರ್ಗೋಪಾಯಗಳನ್ನು ಗುರುತಿಸಲು ಪ್ರಮುಖ ಪಾಲುದಾರರೊಂದಿಗೆ ತೊಡಗಿಸಿಕೊಳ್ಳಲು ಶುಕ್ರವಾರ ನಗರದಲ್ಲಿ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

    ಗರ್ಭಕಂಠದ ಕ್ಯಾನ್ಸರ್ ನಿರ್ಮೂಲನೆಗೆ ಮಾರ್ಗಸೂಚಿ ಅಭಿವೃದ್ಧಿಪಡಿಸಲು ರಾಜ್ಯ ಬದ್ಧವಾಗಿದ್ದು, 30 ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೆ ಸ್ಕ್ರೀನಿಂಗ್‌ಗೆ ಅವಕಾಶ ಕಲ್ಪಿಸಿಕೊಡಲು ಮತ್ತು 9 ರಿಂದ 14 ವರ್ಷ ವಯಸ್ಸಿನ ಎಲ್ಲಾ ಹೆಣ್ಣು ಮಕ್ಕಳಿಗೆ ಸಾರ್ವತ್ರಿಕ ಲಸಿಕೆ ನೀಡಲು ಮಾರ್ಗೋಪಾಯಗಳನ್ನು ರೂಪಿಸುತ್ತಿರುವುದಾಗಿ ತಿಳಿಸಿದರು.

    ಫೈಂಡ್ ಸಂಸ್ಥೆಯ ಉಪಾಧ್ಯಕ್ಷ ಡಾ ಸಂಜಯ್ ಸರಿನ್ ಮಾತನಾಡಿ, ಎಚ್‌ಪಿವಿ ಸ್ಕ್ರೀನಿಂಗ್‌ಗೆ ಅವಕಾಶವನ್ನು ಹೆಚ್ಚಿಸುವ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಗರ್ಭಕಂಠದ ಕ್ಯಾನ್ಸರ್ ನಿರ್ಮೂಲನ ಗುರಿಯನ್ನು ಪೂರೈಸಲು ಈ ಸಭೆ ವೇದಿಕೆ ಕಲ್ಪಿಸಿದೆ. ಗರ್ಭಕಂಠದ ಕ್ಯಾನ್ಸರ್‌ನ ಸವಾಲನ್ನು ಎದುರಿಸುವ ಪ್ರಯತ್ನದಲ್ಲಿ ಕರ್ನಾಟಕದೊಂದಿಗೆ ಸಹಕರಿಸಲು ನಾವು ಬದ್ಧರಾಗಿದ್ದೇವೆ ಎಂದರು.

    ರೋಚೆ ಡಯಾಗ್ನೋಸ್ಟಿಕ್ಸ್ಥಿಲೋ ಬ್ರೆನ್ನರ್ ಮಾತನಾಡಿ, ರೋಗ ಪತ್ತೆಗೆ ಅವಕಾಶ ಒದಗಿಸುವಲ್ಲಿ ಆರೋಗ್ಯ ಸೇವೆಗಳ ಸಮಗ್ರ ಬದಲಾವಣೆ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾವು ಮಹಿಳೆಯರಿಗೆ ಅವರ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ ವೃದ್ಧಿಸುವಲ್ಲಿ, ಮುಖ್ಯವಾಗಿ ಗರ್ಭಕಂಠದ ಕಾನ್ಸರ್ ನಿಭಾಯಿಸುವಲ್ಲಿ ಇರುವ ಅಂತರ ಕಡಿಮೆ ಮಾಡಲು ಗಮನ ಹರಿಸಿದ್ದೇವೆ. ಈ ಕುರಿತು ಶಿಕ್ಷಣ ನೀಡಲು ಸ್ಕ್ರೀನಿಂಗ್‌ಗೆ ಅವಕಾಶವನ್ನು ವಿಸ್ತರಿಸುವ ಮೂಲಕ, ಗರ್ಭಕಂಠದ ಕ್ಯಾನ್ಸರ್‌ನ ನಿರ್ವಹಣೆಯಲ್ಲಿ ವ್ಯವಸ್ಥಿತ ಬದಲಾವಣೆ ತರಲಾಗುವುದು ಎಂದು ಹೇಳಿದರು.

    ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ. ಲೋಕೇಶ್, ಸೀರೋಗ ಮತ್ತು ಕ್ಯಾನ್ಸರ್ ತಜ್ಞರು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts