More

    ಬೆಳೆಗಳಿಗೆ ಸಾವಯವ ಗೊಬ್ಬರ ಬಳಸಿ

    ಕಂಪ್ಲಿ: ಮಣ್ಣಿನ ಫಲವತ್ತತೆ ಕಾಪಾಡಲು ಸಿರಿಧಾನ್ಯಗಳನ್ನು ಬೆಳೆಯಲು ರೈತರು ಮುಂದಾಗಲಿ ಎಂದು ತಾಪಂ ಇಒ ಆರ್.ಕೆ.ಶ್ರೀಕುಮಾರ್ ಹೇಳಿದರು.
    ಇಲ್ಲಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಶುಕ್ರವಾರ ತಾಲೂಕು ಯೋಜನೆಯ ಕೃಷಿ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ನಿರಂತರ ಒಂದೇ ಬೆಳೆಯನ್ನು ಬೆಳೆಯುವುದರಿಂದ ಮಣ್ಣಿನ ಗುಣಮಟ್ಟ ಹೋಗಲಿದೆ. ಹಾಗಾಗಿ ವಿವಿಧ ಉತ್ಪನ್ನಗಳನ್ನು ಬೆಳೆಯಲು ರೈತರು ಮುಂದಾಗಬೇಕು. ಅಲ್ಲದೆ ಸಾವಯವ ಗೊಬ್ಬರ ಬಳಸಬೇಕು ಎಂದರು.

    ರೈತರು ಮಣ್ಣಿನ ಆರೋಗ್ಯ ಚೀಟಿಯ ಮಹತ್ವ ಅರಿಯಿರಿ

    ಕೊಪ್ಪಳದ ಮಣ್ಣು ತಜ್ಞ ಡಾ.ರವಿ ಮಾತನಾಡಿ, ರೈತರು ಮಣ್ಣಿನ ಆರೋಗ್ಯ ಚೀಟಿಯ ಮಹತ್ವ ಅರಿಯಬೇಕಿದೆ. ಮಣ್ಣಿಗೆ ಪೋಷಕಾಂಶ ಆಧಾರಿತ ಗೊಬ್ಬರ ನೀಡಬೇಕು. ಭೂಮಿಯ ಆರೋಗ್ಯ ಕಾಪಾಡುವಲ್ಲಿ ರೈತರು ಮುಂಜಾಗ್ರತೆ ಕ್ರಮ ಅನುಸರಿಸಬೇಕು ಎಂದರು.
    ನರೇಗಾ ಎಡಿ ಕೆ.ಎಸ್.ಮಲ್ಲನಗೌಡ ಮಾತನಾಡಿ, ಕೃಷಿಕರು ಸಮಗ್ರ ಬೇಸಾಯ ಪದ್ಧತಿ ಅನುಸರಿಸಬೇಕು. ಅತ್ಯಂತ ಕಡಿಮೆ ಖರ್ಚಿನಲ್ಲಿ ರಾಸಾಯನಿಕ ಸೋಂಕಿಲ್ಲದ ಉತ್ತಮ ಇಳುವರಿ ಗಳಿಸುವ ಬೆಳೆ ಪದ್ಧತಿ ಕೈಗೊಳ್ಳಬೇಕಿದೆ ಎಂದರು.

    ಇದನ್ನೂ ಓದಿ: ಬಳ್ಳಾರಿ ಜಿಲ್ಲೆಯಲ್ಲಿ ಅಕಾಲಿಕ ಮಳೆಗೆ ತೋಟಗಾರಿಕೆ ಬೆಳೆ ಹಾನಿ

    ಮಣ್ಣು ಪರೀಕ್ಷೆಗೆ ಮಣ್ಣು ಸಂಗ್ರಹ ಪದ್ಧತಿಯನ್ನು ಪ್ರಾತ್ಯಕ್ಷಿತೆ ಮೂಲಕ ತಿಳಿಸಲಾಯಿತು. ಗಂಗಾವತಿಯ ಕೀಟಶಾಸ್ತ್ರಜ್ಞ ಡಾ.ಸುಜಯ್, ಸಹಾಯಕ ಕೃಷಿ ನಿರ್ದೇಶಕಿ ಡಾ.ಸಿ.ಆರ್.ಅಭಿಲಾಷ, ಕೃಷಿ ಅಧಿಕಾರಿ ಶ್ರೀಧರ್, ಶಿಕ್ಷಕ ಟಿ.ಎಂ.ಬಸವರಾಜ, ಪಶುವೈದ್ಯ ಪರೀಕ್ಷಕ ಶಿವಣ್ಣ ದೇವಕ್ಕಿ , ಸಂಯೋಜಕಿ ಕವಿತಾಕುಮಾರಿ, ಎಟಿಎಂ ರೇಣುಕಾರಾಜ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts