More

    ಬಳ್ಳಾರಿ ಜಿಲ್ಲೆಯಲ್ಲಿ ಅಕಾಲಿಕ ಮಳೆಗೆ ತೋಟಗಾರಿಕೆ ಬೆಳೆ ಹಾನಿ

    ಬಳ್ಳಾರಿ: ಜಿಲ್ಲೆಯಲ್ಲಿ ಅಕಾಲಿಕ ಮಳೆಗೆ ತೋಟಗಾರಿಕೆ ಬೆಳೆ ನೆಲ ಕಚ್ಚಿದೆ. ಕಂಪ್ಲಿ, ಕುರುಗೋಡು, ಸಂಡೂರು ಭಾಗದಲ್ಲಿ ವರುಣನ ಅಬ್ಬರಕ್ಕೆ ಹಾನಿ ಆಗಿದೆ. ಬಳ್ಳಾರಿ ತಾಲೂಕಿನ ಎತ್ತಿನಬೂದಿಹಾಳ, ಬುರ‌್ರನಾಯಕಹಳ್ಳಿ, ಬೆಂಚಿಕೊಟ್ಟಾಳ್ ಗ್ರಾಮದಲ್ಲಿ ಬೆಳೆ ನಷ್ಟ ಆಗಿದೆ.


    ಮಂಗಳವಾರ ರಾತ್ರಿ ಸುರಿದ ಮಳೆಗೆ 40 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದ್ದು, ಪಪ್ಪಾಯ 10 ಹೆಕ್ಟೇರ್, ದಾಳಿಂಬೆ 15 ಹೆಕ್ಟೇರ್, ಬಾಳೆ 15 ಹೆಕ್ಟೇರ್ ಪ್ರದೇಶದಲ್ಲಿ ಮಣ್ಣು ಪಾಲಾಗಿದೆ. ಇನ್ನು ಮೆಕ್ಕೆಜೋಳ ಕೂಡ ಹಾನಿಯಾಗಿದೆ. ಗುಡುಗು ಸಹಿತ ಮಳೆಗೆ ಜಿಲ್ಲೆಯಲ್ಲಿ ಮೂರು ಕುರಿ, ಒಂದು ಎತ್ತು ಸಾವನ್ನಪಿದೆ. ಮೂರು ಮನೆಗಳಿಗೆ ಹಾನಿಯಾಗಿದೆ.

    ಇದನ್ನೂ ಓದಿ: ವಿದ್ಯುತ್ ತಂತಿ ತುಂಡಾಗಿ ಬಿದ್ದು ತಾಯಿ, ಇಬ್ಬರು ಮಕ್ಕಳ ದುರ್ಮರಣ: ಅಕಾಲಿಕ ಮಳೆಗೆ ಚಿಂಚೋಳಿಯಲ್ಲಿ ದುರ್ಘಟನೆ


    ಮಂಗಳವಾರ ತಡರಾತ್ರಿ ಮಳೆ ಸುರಿದಿದ್ದು, ಬಳ್ಳಾರಿ ತಾಲೂಕು ವ್ಯಾಪ್ತಿ 18.9 ಮಿ.ಮೀ ಮಳೆಯಾಗಿದೆ. ಸಿರಗುಪ್ಪ 14.1, ಸಂಡೂರು 20.5, ಕಂಪ್ಲಿ 31.2 ಹಾಗೂ ಕುರುಗೋಡು 32.4 ಎಂ.ಎಂ ಮಳೆಯಾಗಿದೆ ಎಂದು ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣೆ ಇಲಾಖೆ ಮಾಹಿತಿ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts