More

    ಮಹಿಳೆಯರಿಗಿನ್ನು ಹದಿನೆಂಟಲ್ಲ, ಮದುವೆ ವಯಸ್ಸು 21…!

    ನವದೆಹಲಿ: ಮಹಿಳೆಯರ ಮದುವೆಯ ಕನಿಷ್ಠ ವಯಸ್ಸಿನ ಪರಾಮರ್ಶೆ ಹಾಗೂ ತಾಯಿಯ ಆರೋಗ್ಯದ ಮೇಲೆ ಅದರ ಪರಿಣಾಮದ ಬಗ್ಗೆ ಅಧ್ಯಯನ ನಡೆಸಲು ಆರು ತಿಂಗಳೊಳಗಾಗಿ ಕಾರ್ಯಪಡೆಯೊಂದನ್ನು ರಚಿಸುವುದಾಗಿ 2020ರ ಬಜೆಟ್​ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಘೋಷಿಸಿದ್ದರು.

    ಅದರಂತೆ, ಸಮಿತಿಯೊಂದು ರಚನೆಯಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇತ್ತೀಚೆಗೆ ಪ್ರಕಟಿಸಿತ್ತು. ಜತೆಗೆ, ಈ ಸಮಿತಿಯು ಮಹಿಳೆಯರ ಮದುವೆಯ ವಯಸ್ಸನ್ನು 21ಕ್ಕೆ ಏರಿಸುವ ಪ್ರಸ್ತಾವ ಸಲ್ಲಿಸಿದೆ ಎಂಬ ಸುಳಿವು ನೀಡಿದೆ.

    ಸದ್ಯ ಭಾರತದಲ್ಲಿ ಕಾನೂನಾತ್ಮಕವಾಗಿ ಮಹಿಳೆಯರ ಮದುವೆ ವಯಸ್ಸು 18 ಆಗಿದೆ. ಪುರುಷರಿಗೆ ಈ ವಯಸ್ಸು 21. ಮಹಿಳೆಯರ ಮದುವೆಯ ವಯಸ್ಸನ್ನು ಹೆಚ್ಚಿಸಿದ ಪ್ರಸ್ತಾಪ ಜುಲೈ 31ರೊಳಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಲ್ಲಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ನಂತರ ಇದು ಕಾನೂನು ರೂಪ ಪಡೆಯಲಿದೆ.

    ಇದನ್ನೂ ಓದಿ; ಅಲ್ಕೋಹಾಲ್​ ಮಿಶ್ರಿತ ಸ್ಯಾನಿಟೈಸರ್​ ಬಳಕೆಯಿಂದ ಧಾರ್ಮಿಕ ತಾಣಗಳು ಅಪವಿತ್ರ….! 

    ಇದೇನಾದರೂ ಜಾರಿಯಾದಲ್ಲಿ, 1978ರ ಬಳಿಕ ಇದೇ ಮೊದಲ ಬಾರಿಗೆ ಮಹಿಳೆಯ ಮದುವೆ ವಯಸ್ಸು ಬದಲಾವಣೆಯಾಗಲಿದೆ. ಇದಕ್ಕೂ ಮುನ್ನ 1929ರಲ್ಲಿ 15ರಿಂದ 18ಕ್ಕೆ ಏರಿಸಲಾಗಿತ್ತು.

    ಬದಲಾಗುತ್ತಿರುವ ಭಾರತದಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳು ಲಭ್ಯವಾಗುತ್ತಿವೆ. ಉನ್ನತ ಶಿಕ್ಷಣ ದೊರೆಯುತ್ತಿದೆ. ತಾಯಂದಿರ ಮರಣದ ಪ್ರಮಾಣವನ್ನು ಕಡಿಮೆಗೊಳಿಸುವುದು ಹಾಗೂ ಪೌಷ್ಠಿಕ ಆಹಾರ ದೊರೆಯುವಂತೆ ನೋಡಿಕೊಳ್ಳುವುದು ಕಡ್ಡಾಯವಾಗುತ್ತಿದೆ. ಈ ಎಲ್ಲ ವಿಚಾರದಲ್ಲಿಟ್ಟುಕೊಂಡು ಮಹಿಳೆಯರ ಮದುವೆ ವಯಸ್ಸಿನ ವಿಷಯವನ್ನು ಪರಿಗಣಿಸಬೇಕಿದೆ ಎಂದು ಈ ಹಿಂದೆ ನಿರ್ಮಲಾ ಸೀತಾರಾಮನ್​ ಹೇಳಿದ್ದರು.

    ಇದನ್ನೂ ಓದಿ; ಖಾಲಿ ಕ್ರೀಡಾಂಗಣಗಳಲ್ಲಿ ನಡೆಯಲಿದೆ ಐಪಿಎಲ್​; ರಾಜ್ಯ ಕ್ರಿಕೆಟ್​ ಮಂಡಳಿಗಳಿಗೆ ಗಂಗೂಲಿ ಪತ್ರ

    ಕಾರ್ಯಪಡೆಯಲ್ಲಿ 10 ಸದಸ್ಯರಿದ್ದು, ನೀತಿ ಆಯೋಗದ ಸಹಕಾರ ಇದಕ್ಕಿದೆ. ಮದುವೆ ವಯಸ್ಸು, ತಾಯ್ತನ, ಆರೋಗ್ಯ, ಜನನ ಪೂರ್ವ ಹಾಗೂ ಜನನಾನಂತರ ಮಗು ಮತ್ತು ತಾಯಿಯ ಪೌಷ್ಠಿಕತೆ ವಿಚಾರವನ್ನು ಅಧ್ಯಯನ ಮಾಡಿದೆ. ಜತೆಗೆ, ಮಹಿಳೆಯರನ್ನು ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಶಿಫಾರಸು ಮಾಡಲಿದೆ.

    ಜೂನ್​ 15ರಿಂದ ಮತ್ತೊಮ್ಮೆ ದೇಶಾದ್ಯಂತ ಸಂಪೂರ್ಣ ಲಾಕ್​ಡೌನ್​ ; ಇಲ್ಲಿದೆ ಫ್ಯಾಕ್ಟ್​ಚೆಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts