More

    ಫೆಬ್ರವರಿಯಿಂದ ವ್ಯಾಕ್ಸಿನೇಷನ್ ಆರಂಭ; ಲಸಿಕೆಯ ಪೂರ್ಣ ವೆಚ್ಚ ಭರಿಸಲಿದೆ ಕೇಂದ್ರ- ಬಜೆಟ್ ನಲ್ಲಿ ಘೋಷಣೆ ಸಾಧ್ಯತೆ

    ನವದೆಹಲಿ: ಕರೊನಾ ಲಸಿಕೆಯ ವ್ಯಾಕ್ಸಿನೇಷನ್ ಯೋಜನೆಯ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಬಹುದು ಎಂದು ಕೆಲ ಮೂಲಗಳು ವರದಿ ಮಾಡಿವೆ.

    ಈ ಕುರಿತು ಕೇಂದ್ರ ಸರ್ಕಾರ 2021-22ರ ಬಜೆಟ್‌ನಲ್ಲಿ ಘೋಷಣೆ ಮಾಡುವ ನಿರೀಕ್ಷೆ ಇದ್ದು, ವ್ಯಾಕ್ಸಿನೇಷನ್ ಯೋಜನೆಯು ಮುಂದಿನ ವರ್ಷ ಫೆಬ್ರವರಿ ಅಂತ್ಯದಿಂದ ಪ್ರಾರಂಭವಾಗುವ ಸಾಧ್ಯತೆ ಇದೆ.

    ಬ್ಲಾಕ್ ಟಾಸ್ಕ್ ಫೋರ್ಸ್: ಲಸಿಕೆ ವಿತರಣೆಗಾಗಿ ಸಂಪೂರ್ಣ ಯೋಜನೆ ತಯಾರಿಸಿ ಹಾಗೂ ಬ್ಲಾಕ್ ಟಾಸ್ಕ್ ಫೋರ್ಸ್ (ಬಿಟಿಎಫ್) ರಚಿಸಿ ಎಂದು ಎಲ್ಲ ರಾಜ್ಯಗಳಿಗೆ ಕೇಂದ್ರ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೂಚಿಸಿದೆ.

    ಈ ಕುರಿತು ರಾಜ್ಯಗಳಿಗೆ ಪತ್ರ ಬರೆದಿರುವ ರಾಷ್ಟ್ರೀಯ ಆರೋಗ್ಯ ಮಿಷನ್‌ನ ಹೆಚ್ಚುವರಿ ಕಾರ್ಯದರ್ಶಿ ಮತ್ತು ನಿರ್ದೇಶಕಿ ವಂದನಾ ಗುರ್ನಾನಿ, ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಬಿಟಿಎಫ್ ರಚಿಸಬೇಕು ಹಾಗೂ ಸರ್ಕಾರಿ ಅಧಿಕಾರಿಗಳು, ಎನ್‌ಜಿಒಗಳು ಮತ್ತು ಸ್ಥಳೀಯ ಪ್ರಭಾವಿಗಳ ಜತೆ ಸಭೆ ನಡೆಸಿ ಯೋಜನೆ ರೂಪಿಸಬೇಕು ಎಂದು ತಿಳಿಸಿದ್ದಾರೆ.

    ಲಸಿಕೆ ವಿತರಣೆ ಜತೆಗೆ ಸಂಭಾವ್ಯ ಅಡ್ಡಪರಿಣಾಮಗಳೇನಾದರು ಉಂಟಾದರೆ ಅದನ್ನು ಎದುರಿಸುವ ಕ್ರಮಗಳೇನು ಎಂಬ ಬಗ್ಗೆ ವರದಿ ನೀಡಿ ಎಂದೂ ರಾಜ್ಯಗಳಿಗೆ ಕೇಳಲಾಗಿದೆ. ತುರ್ತು ಪರಿಸ್ಥಿತಿಗಳಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಸಿದ್ಧವಾಗಿರಿಸಿಕೊಳ್ಳಿ ಎಂದು ಸೂಚಿಸಿದೆ. ಎರಡು ದಿನಗಳ ಹಿಂದೆ ಸಿಎಂಗಳ ಜತೆ ನಡೆದ ಸಭೆಯಲ್ಲಿ ಟಾಸ್ಕ್ ಫೋರ್ಸ್ ರಚನೆಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದರು.

    ಸೆರಂ ಸಂಸ್ಥೆ ಪ್ರಧಾನಿ ಭೇಟಿ: ಆಸ್ಟ್ರಾಜೆನೆಕಾ ಹಾಗೂ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕೋವಿಶೀಲ್ಡ್ ಲಸಿಕೆ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡಿರುವ ಪುಣೆಯ ಸೆರಂ ಇನ್ಸ್‌ಟಿಟ್ಯೂಟ್ ಆಫ ಇಂಡಿಯಾ ಸಂಸ್ಥೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪರೀಕ್ಷೆ ಹಾಗೂ ಲಸಿಕೆ ಉತ್ಪಾದನೆಯ ಯೋಜನೆಯನ್ನು ಅವರು ಪರಿಶೀಲಿಸಲಿದ್ದಾರೆ.

    VIDEO| ನಾನು ಸಾಯುವ ಸಾಧ್ಯತೆಯಿದೆ ಎಂದು ಭಾವುಕರಾದ ರಾಣಾ: ಕಣ್ಣೀರಿಟ್ಟ ಸಮಂತಾ, ವೀಕ್ಷಕರು!

    ಲಕ್ಷ್ಮಿ ಹೆಬ್ಬಾಳ್ಕರ್‌ ಇನ್ಮುಂದೆ ಅತ್ತೆ! ಗೋವಾದಲ್ಲಿ ಬೀಡುಬಿಟ್ಟಿರೋ ಕೈ ಮುಖಂಡರು…

    ಕಾಡಿನ ಗುಡಿಸಲಿನಲ್ಲಿ ಕೂಡಿ 14 ದಿನ ಅತ್ಯಾಚಾರ ಮಾಡಿದ! ಕಾಮುಕನಿಂದ ಬಚಾವಾಗಿದ್ದೇ ಒಂದು ರೋಚಕ ಕಥೆ

    ಹೆಂಡತಿ ಪ್ರೀತಿಯಿಂದ ಮಾಡಿಕೊಟ್ಟ ಟೀ ಕುಡಿದ ಪತಿ ಸಾವು, ಸ್ವಲ್ಪ ಹೊತ್ತಲ್ಲೇ ಆಸ್ಪತ್ರೆ ಸೇರಿದ ಪತ್ನಿ

    ಪ್ರೀತಿ ಹೇಳಿಕೊಳ್ಳುವ ಧೈರ್ಯವಿಲ್ಲದೆ ಮದ್ವೆಗೆ ಒಪ್ಪಿಗೆ: ಇನ್ನೇನು ತಾಳಿ ಕಟ್ಟುವಷ್ಟರಲ್ಲಿ ಯುವತಿಗೆ ಸರ್ಪ್ರೈಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts