More

    ಪ್ರೀತಿ ಹೇಳಿಕೊಳ್ಳುವ ಧೈರ್ಯವಿಲ್ಲದೆ ಮದ್ವೆಗೆ ಒಪ್ಪಿಗೆ: ಇನ್ನೇನು ತಾಳಿ ಕಟ್ಟುವಷ್ಟರಲ್ಲಿ ಯುವತಿಗೆ ಸರ್ಪ್ರೈಸ್​!

    ವಿಜಯವಾಡ: ತನ್ನ ಪ್ರೀತಿಯನ್ನು ಹೇಳಿಕೊಳ್ಳಲಾಗದೇ ಹಿರಿಯರು ನಿಶ್ಚಯ ಮಾಡಿದ್ದ ಮದುವೆಗೆ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡು ಮದುವೆ ಮಂಟಪಕ್ಕೆ ಆಗಮಿಸಿದ್ದ ವಧುವಿಗೆ ಭಾರಿ ಆಶ್ಚರ್ಯವೊಂದು ಎದುರಾಗಿತ್ತು. ತಾಳಿ ಕಟ್ಟಲು ಕೆಲವೇ ಕ್ಷಣಗಳು ಇರುವಾಗ ಮಂಟಪಕ್ಕೆ ಪ್ರವೇಶ ನೀಡಿದ ಪೊಲೀಸರು ಇಡೀ ಚಿತ್ರಣವನ್ನೇ ಬದಲಾಯಿಸಿದ ಸಿನಿಮೀಯ ಘಟನೆ ಆಂಧ್ರ ಪ್ರದೇಶದ ಕಡಪ ಜಿಲ್ಲೆಯಲ್ಲಿ ನಡೆದಿದೆ.

    ಕಡಪ ಮೂಲದ ಯುವತಿ ಮತ್ತು ಚೆನ್ನೈ ಮೂಲದ ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಯುವತಿ ಮನೆಯಲ್ಲಿ ಆಕೆಗೆ ಗುರ್ರಾನ್​ಕೊಂಡ ಮೂಲದ ವ್ಯಕ್ತಿಯೊಂದಿಗೆ ಮದುವೆ ನಿಶ್ಚಯ ಮಾಡಿದ್ದರು. ತನ್ನ ಪ್ರೀತಿಯನ್ನು ಪಾಲಕರ ಮುಂದೆ ಹೇಳಿಕೊಳ್ಳಲು ಧೈರ್ಯವಿರದ ಯುವತಿ ಪ್ರೀತಿಯನ್ನು ಅದುಮಿಟ್ಟು ಒಲ್ಲದ ಮನಸ್ಸಿನಿಂದಲೇ ಒಪ್ಪಿಗೆ ನೀಡಿದ್ದಳು.

    ಇದನ್ನೂ ಓದಿ: VIDEO| ನಾನು ಸಾಯುವ ಸಾಧ್ಯತೆಯಿದೆ ಎಂದು ಭಾವುಕರಾದ ರಾಣಾ: ಕಣ್ಣೀರಿಟ್ಟ ಸಮಂತಾ, ವೀಕ್ಷಕರು!

    ನಿಶ್ಚಯದಂತೆ ಕಳೆದ ಗುರುವಾರ ಮದುವೆ ನಡೆಯುತ್ತಿತ್ತು. ಕರೊನಾ ಹಿನ್ನೆಲೆಯಲ್ಲಿ ಕುಟುಂಬ ಹಾಗೂ ಕೆಲವೇ ಬಂಧುಬಳಗ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಮದುವೆ ಸುಸೂತ್ರವಾಗಿ ನಡೆಯುತ್ತದೆ ಎಂಬ ಆಶಾಭಾವನೆಯಲ್ಲಿ ಕುಟುಂಬದವರಿದ್ದರು. ಯುವತಿ ಏನಾದರೂ ಪವಾಡ ಸಂಭವಿಸಬಹುದೇ ಎಂಬ ನಿರೀಕ್ಷೆಯಲ್ಲಿದ್ದಳು. ಇನ್ನೇನು ತಾಳಿ ಕಟ್ಟಲು ಕೆಲವೇ ಕ್ಷಣಗಳು ಇರುವಾಗ ದಿಢೀರನೇ ಪ್ರವೇಶ ನೀಡಿದ ಪೊಲೀಸರು ಇಡೀ ಮದುವೆ ಚಿತ್ರಣವನ್ನು ಬದಲಿಸಿದರು.

    ತಮಿಳುನಾಡಿನಲ್ಲಿದ್ದ ಯುವತಿಯ ಪ್ರಿಯಕರ ಮದುವೆ ನಿಲ್ಲಿಸಲು ಸರಿಯಾದ ಸಮಯಕ್ಕೆ ಹೋಗಲು ಸಾಧ್ಯವಾಗದಿದ್ದರಿಂದ ತಮಿಳುನಾಡು ಪೊಲೀಸರ ನೆರವಿನಿಂದ ಕಡಪ ಜಿಲ್ಲೆಯ ಪೊಲೀಸರಿಗೆ ದೂರು ನೀಡಿದ್ದ. ಇತ್ತ ಮಾಹಿತಿ ಪಡೆಯುತ್ತಿದ್ದಂತೆ ಸ್ಥಳೀಯ ಠಾಣೆಯ ಹೆಡ್​ ಕಾನ್ಸ್​ಟೇಬಲ್​, ನಾಲ್ವರು ಕಾನ್ಸ್​ಟೇಬಲ್​ ಮತ್ತು ಇಬ್ಬರು ಮಹಿಳಾ ಪೊಲೀಸ್​ ಸಿಬ್ಬಂದಿ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟು ವಧು-ವರ ಕುಟುಂಬಕ್ಕೆ ನಡೆದ ಘಟನೆಯನ್ನು ಮನವರಿಕೆ ಮಾಡಿಕೊಟ್ಟರು.

    ಇದನ್ನೂ ಓದಿ: ಪತ್ನಿಯ ಬೆತ್ತಲೆ ದೇಹದ ವಿಡಿಯೋ ಮಾಡಿ ಈತ ಮಾಡುತ್ತಿದ್ದ ಮಹಾನೀಚತನದ ಕೆಲಸ!

    ತನ್ನ ಭವಿಷ್ಯದ ದೃಷ್ಟಿಯಿಂದ ಯುವತಿಗೆ ಇದೊಂದು ಕಠಿಣ ಸಮಯವಾಗಿದ್ದರಿಂದ ಬೆಳಗ್ಗೆ 8 ಗಂಟೆಯವರೆಗೂ ಯುವತಿಗೆ ಆಪ್ತ ಸಮಾಲೋಚನೆ ನಡೆಸಲಾಯಿತು. ಬಳಿಕ ಯುವತಿ ಪ್ರಿಯಕರನನ್ನು ಮದುವೆಯಾಗಲು ಒಪ್ಪಿದಳು. ಇದರ ನಡುವೆ ಅಂದುಕೊಂಡತೆ ಮದುವೆ ನಡೆಯದಿದ್ದಕ್ಕೆ ನಿಶ್ಚಯ ಮಾಡಿದ್ದ ವರನ ಕುಟುಂಬ ಮಂಟಪದಿಂದ ಅಸಮಾಧಾನದಿಂದಲೇ ಕಾಲ್ಕಿತ್ತಿತ್ತು. ಯುವತಿ ಮತ್ತು ಆಕೆಯ ಪಾಲಕರನ್ನು ಪೊಲೀಸರು ಸ್ಥಳೀಯ ತಹಸೀಲ್ದಾರ್​ ಅಮರ್​ನಾಥ್​ ಮುಂದೆ ಪ್ರಸ್ತುತ ಪಡಿಸಿದರು.

    ಅಮರ್​ನಾಥ್​ ಅವರು ಎಲ್ಲವನ್ನು ಪರಿಶೀಲಿಸಿ ಯುವತಿಯನ್ನು ಪಾಲಕರಿಗೆ ಒಪ್ಪಿಸಿದರು. ಮಧ್ಯಾಹ್ನದ ಹೊತ್ತಿಗೆ ಯುವತಿಯ ಪ್ರಿಯಕರ ಸಹ ಸ್ಥಳೀಯ ಪೊಲೀಸ್​ ಠಾಣೆಗೆ ಸ್ನೇಹಿತರ ಜತೆ ಆಗಮಿಸಿದ. ಕೊನೆಯಲ್ಲಿ ಪೊಲೀಸರು ಯುವಕ ಮತ್ತು ಯುವತಿಯ ಪಾಲಕರನ್ನು ಕಡಪಗೆ ಕಳುಹಿಸಿಕೊಟ್ಟರು. (ಏಜೆನ್ಸೀಸ್​)

    ಸರ್ಕಾರ ಯೋಜನೆಯಡಿ ಕೋಳಿಮರಿಗಳನ್ನು ತಂದ ರೈತ: ಮರಿಗಳು ದೊಡ್ಡದಾಗುತ್ತಿದ್ದಂತೆ ಕಾದಿತ್ತು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts