More

    ಕರೊನಾ ವಿರುದ್ಧದ ಹೋರಾಟಕ್ಕೆ ವಿದೇಶಿ ದೇಣಿಗೆ ಸ್ವೀಕರಿಸಲು ಕೇಂದ್ರದ ನಿರ್ಧಾರ

    ನವದೆಹಲಿ: ಕರೊನಾ ವೈರಸ್​ ವಿರುದ್ಧ ಹೋರಾಡಲು ಸ್ಥಾಪಿಸಲಾಗಿರುವ PM-Cares (ಪಿಎಂ ಕೇರ್ಸ್) ಪರಿಹಾರ ನಿಧಿಗೆ ವಿದೇಶಿ ದೇಣಿಗೆಯನ್ನು ಸ್ವೀಕರಿಸಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ ಎಂದು ಮೂಲಗಳು ತಿಳಿಸಿವೆ.

    ವಿಶ್ವದ ನಾಯಕರು ಕೂಡ ಇದೇ ಹಾದಿಯಲ್ಲಿದ್ದಾರಾ ಎಂದು ಖಚಿತಪಡಸಿಕೊಳ್ಳಲು ಇಂದು ಪ್ರಮುಖ 10 ನಾಯಕರೊಂದಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಪ್ರಧಾನಿ ಚರ್ಚಿಸಿದ್ದಾರೆ. ಈ ವಿಚಾರದಲ್ಲಿ ಒಂದು ನಿರ್ದಿಷ್ಟ ತೀರ್ಮಾನ ತೆಗೆದುಕೊಳ್ಳಲು ವಿಶ್ವದ ನಾಯಕರನ್ನು ಪ್ರಧಾನಿ ಒತ್ತಾಯಿಸಿದ್ದಾರೆ.

    ಕರೊನಾ ಪಿಡುಗನ್ನು ತೊಲಗಿಸಲು ಕೈಜೋಡಿಸುವಂತೆ ಮಾರ್ಚ್​ 28ರಂದು ಪ್ರಧಾನಿ ಮೋದಿ PM-Cares (ಪಿಎಂ ಕೇರ್ಸ್) ಪರಿಹಾರ ನಿಧಿಯನ್ನು ಘೋಷಿಸಿದರು. ಇದೊಂದು ಸಾವರ್ಜನಿಕ ಚಾರಿಟಬಲ್ ಟ್ರಸ್ಟ್​ ಆಗಿದ್ದು, ಇದಕ್ಕೆ ಪ್ರಧಾನಿ ಮೋದಿಯವರೇ ಮುಖ್ಯಸ್ಥರಾಗಿದ್ದಾರೆ. ಇದರಲ್ಲಿ ರಕ್ಷಣಾ ಸಚಿವರು, ಗೃಹ ಸಚಿವರು ಮತ್ತು ವಿತ್ತ ಸಚಿವರು ಸದಸ್ಯರಾಗಿದ್ದಾರೆ. ಕರೊನಾ ವಿರುದ್ಧ ಹೋರಾಡಲು ಸರ್ಕಾರಕ್ಕೆ ಸಹಾಯ ಮಾಡಬಯಸುವವರು ತಮ್ಮ ಕೈಲಾದಷ್ಟನ್ನು ಪರಿಹಾರ ನಿಧಿಗೆ ನೀಡಬಹುದಾಗಿದೆ.

    ಕೋವಿಡ್​-19 ಜಾಗತಿಕವಾಗಿ ಆರೋಗ್ಯ ಬಿಕ್ಕಟ್ಟನ್ನು ಸೃಷ್ಟಿಸಿದೆ. ಭಾರತದಲ್ಲೂ ಕೂಡ ಕರೊನಾ ಕರಿಛಾಯೆ ದಿನದಿಂದ ದಿನಕ್ಕೆ ವಿಸ್ತರಿಸುತ್ತಾ ಹೋಗುತ್ತಿದೆ. ಇದರ ಪರಿಣಾಮವಾಗಿಯೇ ದೇಶದಲ್ಲಿ ಎಲ್ಲ ಚಟುವಟಿಕೆಗಳು ಸ್ತಬ್ಧವಾಗಿದ್ದು, ಆರೋಗ್ಯ ಮಾತ್ರವಲ್ಲ ಆರ್ಥಿಕ ಪರಿಸ್ಥಿತಿಯ ಮೇಲೂ ದೊಡ್ಡ ಹೊಡೆತ ನೀಡಿದೆ.

    ಈಗಾಗಲೇ ಪ್ರಧಾನಿ ಕಾರ್ಯಾಲಯಕ್ಕೆ ದೇಣಿಗೆ ಹರಿದುಬರುತ್ತಿದ್ದು, ಸಂದಿಗ್ಧ ಸಮಯದಲ್ಲಿ ಸರ್ಕಾರ ಆರ್ಥಿಕವಾಗಿ ಸಮತೋಲನ ಕಾಯ್ದುಕೊಳ್ಳಲು ಜನರು ಸಹಾಯಾಸ್ತ ಚಾಚಿದ್ದಾರೆ. ನಿಮಗೂ ದೇಣಿಗೆ ನೀಡುವ ಮನಸ್ಸಿದ್ದರೆ, pmindia.gov.in ಮತ್ತು donate to PM CARES Fund ವೆಬ್​ಸೈಟ್​ಗೆ ಭೇಟಿ ನೀಡಿ ಹಣ ಸಂದಾಯ ಮಾಡಬಹುದಾಗಿದೆ. (ಏಜೆನ್ಸೀಸ್​)

    ಪ್ರಧಾನಿ ಮೋದಿ ತಾಯಿ ಹೀರಾಬೆನ್​ರಿಂದ ಕರೊನಾ ಪೀಡಿತರ ನೆರವಿಗೆ 25 ಸಾವಿರ ರೂ. ದೇಣಿಗೆ

    ಕರೊನಾ ವಿಚಾರದಲ್ಲಿ ಸುಳ್ಳಿನ ಮಹಾಗೋಡೆ ಕಟ್ಟಿತೇ ಚೀನಾ? ಎಚ್ಚರಿಸಿದ ವೈದ್ಯನನ್ನೇ ಶಿಕ್ಷಿಸಿ ಸಾವಿಗೆ ಕಾರಣರಾದರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts