More

    ಮೊಬೈಲ್​ ಫೋನ್​ ರಿಚಾರ್ಜ್​ ಮಳಿಗೆ ತೆರೆಯಲು ಅನುಮತಿ, ದಾಲ್​ ಮಿಲ್​ ಕಾರ್ಯಾರಂಭಿಸಬಹುದು, ಮತ್ತಷ್ಟು ನಿರ್ಬಂಧ ಸಡಿಲಿಸಿದ ಕೇಂದ್ರ

    ನವದೆಹಲಿ: ಮೇ 3ರ ನಂತರ ಲಾಕ್​ಡೌನ್​ ತೆರವು ಬಳಿಕ ಹಲವು ನಿರ್ಬಂಧಗಳನ್ನು ಕೇಂದ್ರ ಸರ್ಕಾರ ಹಂತಹಂತವಾಗಿ ಸಡಿಲಿಸಲಿದೆ. ಅದಕ್ಕೆ ಪೂರಕವಾಗಿ ಹಲವು ಅಗತ್ಯ ಸೇವೆಗಳಿಗೆ ಅನುಮತಿ ನೀಡುತ್ತಿದೆ.

    ಮಂಗಳವಾರವಷ್ಟೇ ಕೃಷಿ ಉತ್ಪನ್ನ ಹಾಗೂ ಶೈಕ್ಷಣಿಕ ಪಠ್ಯಪುಸ್ತಕಗಳ ಮಾರಾಟ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಿತ್ತು. ಜತೆಗೆ ಬೇಸಿಗೆ ಕಾರಣಕ್ಕೆ ಎಲೆಕ್ಟ್ರಿಕ್​ ಫ್ಯಾನ್​ಗಳ ದುರಸ್ತಿ ಅಂಗಡಿಗಳಿಗೂ ಅವಕಾಶ ನೀಡಿದೆ.

    ಇದೀಗ ಮತ್ತಷ್ಟು ನಿರ್ಬಂಧಗಳನ್ನು ತೆರವುಗೊಳಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ಅದರಂತೆ, ಪ್ರಿಪೇಡ್​ ಮೊಬೈಲ್​ಗಳಿಗೆ ಕರೆನ್ಸಿ ರೀಚಾರ್ಜ್​ ಮಾಡುವ ಅಂಗಡಿಗಳನ್ನು ತೆರೆಯಬಹುದಾಗಿದೆ. ಸಾರ್ವಜನಿಕ ಅಗತ್ಯ ಸೇವೆಗಳಲ್ಲಿ ಇದೂ ಒಂದಾಗಿದೆ ಎಂದು ಹೇಳಿದೆ.

    ಇದಲ್ಲದೇ, ಮನೆಯಲ್ಲಿಯೇ ಇರುವ ಹಿರಿಯರನ್ನು ನೋಡಿಕೊಳ್ಳಲು ಸಹಾಯಕರು ಹಾಗೂ ಆರೈಕೆ ನೀಡುವವರ ಕೆಲಸಕ್ಕೆ ಅನುಮತಿಸಿದೆ.
    ಅತ್ಯಾವಶ್ಯಕ ವಸ್ತುಗಳ ಸರಬರಾಜು ಅನ್ವಯ ಬ್ರೆಡ್​ ತಯಾರಿಸುವ ಫ್ಯಾಕ್ಟರಿಗಳು ಕಾರ್ಯಾರಂಭಿಸಬಹುದು. ಹಾಲು ಸಂಸ್ಕರಣಾ ಘಟಕಗಳು, ಹಿಟ್ಟಿನ ಗಿರಣಿಗಳು ಹಾಗೂ ದಾಲ್​ ಮಿಲ್​ಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಬಗ್ಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್​ ಭಲ್ಲಾ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ರವಾನಿಸಿದ್ದಾರೆ.

    ತುತ್ತು ಅನ್ನಕ್ಕೂ ಹಾಹಾಕಾರ, ಹಸಿವಿನಿಂದ ಕಂಗೆಡಲಿದ್ದಾರೆ 26 ಕೋಟಿ ಜನ, ವಿಶ್ವಸಂಸ್ಥೆ ನೀಡಿದೆ ಆಘಾತಕಾರಿ ವರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts