More

    ಅನ್‌ಲಾಕ್ 3.0: ಆ. 5ರಿಂದ ಜಿಮ್‌ಗಳನ್ನು ತೆರೆಯಲು ಕೇಂದ್ರ ಅನುಮತಿ

    ನವದೆಹಲಿ: ದೇಶಾದ್ಯಂತ ಅನ್ವಯವಾಗುವ ಅನ್‌ಲಾಕ್ 3.0 ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬುಧವಾರ ಸಂಜೆ ಪ್ರಕಟಿಸಿದ್ದು, ಯೋಗ ಸಂಸ್ಥೆಗಳು ಮತ್ತು ಜಿಮ್‌ಗಳನ್ನು ಆ. 5ರ ಬಳಿಕ ತೆರೆಯಲು ಅನುಮತಿ ನೀಡಿದೆ.

    ಜಿಮ್ನಾಸಿಯಂಗಳು, ಯೋಗ ಕೇಂದ್ರಗಳನ್ನು ತೆರೆಯುವ ಹಿನ್ನೆಲೆಯಲ್ಲಿ ಇದಕ್ಕಾಗಿ ಪ್ರತ್ಯೇಕ ನಿಯಮಗಳನ್ನು ಕೇಂದ್ರ ಸರ್ಕಾರ ಸದ್ಯದಲ್ಲೇ ಹೊರಡಿಸಲಿದೆ. ಆ. 1ರಿಂದ ಅನ್ವಯವಾಗಲಿರುವ ಹೊಸ ಮಾರ್ಗಸೂಚಿಗಳ ಪ್ರಕಾರ ಸಿನಿಮಾ ಹಾಲ್, ಸ್ವಿಮಿಂಗ್ ಪೂಲ್, ಬಾರ್, ಆಡಿಟೋರಿಯಂ ಮುಂತಾದವುಗಳನ್ನು ತೆರೆಯುವಂತಿಲ್ಲ. ಶಾಲೆ, ಕಾಲೇಜು, ಇತರ ಶೈಕ್ಷಣಿಕ ಸಂಸ್ಥೆಗಳು, ಕೋಚಿಂಗ್ ಕ್ಲಾಸ್‌ಗಳನ್ನು ಆ. 31ರವರೆಗೆ ತೆರೆಯಲು ಅನುಮತಿ ಇಲ್ಲ. ಆದರೆ ಆನ್‌ಲೈನ್ ಶಿಕ್ಷಣ, ದೂರ ಶಿಕ್ಷಣಕ್ಕೆ ಅನುಮತಿ ನೀಡುವುದಲ್ಲದೇ ಪ್ರೋತ್ಸಾಹಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ ಒಂದು ಸಾವಿರ ಕರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ: ಡಾ.ಗಿರಿಧರ್ ಕಜೆ

    ಮೆಟ್ರೋ ರೈಲು, ಅಂತಾರಾಷ್ಟ್ರೀಯ ವಿಮಾನ ಯಾನ ಕೂಡ ಸದ್ಯಕ್ಕೆ ಶುರುವಾಗುವುದಿಲ್ಲ. ಸಾಮಾಜಿಕ, ರಾಜಕೀಯ, ಕ್ರೀಡೆ, ಧಾರ್ಮಿಕ ಮುಂತಾಗಿ ಯಾವುದೇ ಕ್ಷೇತ್ರಕ್ಕೆ ಸಂಬಂಧಿಸಿದಂತೆಯೂ ಸಭೆ-ಸಮಾರಂಭಗಳನ್ನು ಏರ್ಪಡಿಸುವಂತಿಲ್ಲ.

    ಆಗಸ್ಟ್ 15ರಂದು ಸ್ವಾತಂತ್ರೃ ದಿನೋತ್ಸವ ಕಾರ‌್ಯಕ್ರಮಗಳನ್ನು ರಾಷ್ಟ್ರ, ರಾಜ್ಯ, ಜಿಲ್ಲೆ, ಉಪವಿಭಾಗ, ಪಾಲಿಕೆ ಮತ್ತು ಪಂಚಾಯಿತಿ ಮಟ್ಟದಲ್ಲಿ ಏರ್ಪಡಿಸಬಹುದು. ಮನೆಗಳಲ್ಲಿಯೂ ಸಾರ್ವಜನಿಕರು ಆಚರಿಸಬಹುದು. ಆದರೆ ಈ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಈ ಬಗ್ಗೆ ಈಗಾಗಲೇ ಹೊರಡಿಸಿರುವ ನಿಯಮಗಳನ್ನು ಪಾಲಿಸಬೇಕು. ಇದನ್ನೂ ಓದಿ ಕರೊನಾ ಚಿಕಿತ್ಸೆಗೆ 5 ಲಕ್ಷ ರೂ. ಬಿಲ್​, ಅಪೋಲೋ ಆಸ್ಪತ್ರೆ ವಿರುದ್ಧ ಕ್ರಮ; ಡಾ.ಕೆ. ಸುಧಾಕರ್

    ಈಗ ಅಸ್ತಿತ್ವದಲ್ಲಿರುವ ಲಾಕ್‌ಡೌನ್ ಅನ್ನು ಕಂಟೇನ್ಮೆಂಟ್ ಜೋನ್‌ಗಳಿಗೆ ಸೀಮಿತವಾಗಿ ಆ. 31ರವರೆಗೆ ಮುಂದುವರಿಸಬೇಕು. ಕಂಟೇನ್ಮೆಂಟ್ ಜೋನ್‌ಗಳ ಹೊರಗಿನ ಪ್ರದೇಶಗಳಲ್ಲಿ ಆಯಾ ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಆಡಳಿತಗಳು ಅಲ್ಲಿನ ಪರಿಸ್ಥಿತಿ ನೋಡಿಕೊಂಡು ಸೀಮಿತ ನಿಯಮಗಳನ್ನು ರೂಪಿಸಿಕೊಳ್ಳಬಹುದು. ಉಳಿದಂತೆ, ಕೇಂದ್ರ ಸರ್ಕಾರ ಈ ಮುಂಚೆಯೇ ಹೊರಡಿಸಿರುವ ನಿಯಮಗಳು ಆ. 31ರವರೆಗೆ ಅನ್ವಯವಾಗುತ್ತವೆ ಎಂದು ಕೇಂದ್ರ ಗೃಹ ಕಾರ‌್ಯದರ್ಶಿ ಹೊರಡಿಸಿರುವ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

    ಅನ್‌ಲಾಕ್ 3.0 ಪ್ರಕಟ: ಆ. 31ರವರೆಗೆ ಶಾಲೆ-ಕಾಲೇಜು, ಸಿನಿಮಾ ಹಾಲ್ ತೆರೆಯುವಂತಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts