More

    ಒಂದೇ ಕೃಷಿ ಬೆಳೆಗೆ ಅಂಟಿಕೊಳ್ಳಬೇಡಿ : ಪ್ರೊಎಸ್.ಅಯ್ಯಪ್ಪನ್ ಸಲಹೆ


    ಮೈಸೂರು:
    ದೇಶದಲ್ಲಿ ಬಿತ್ತನೆ ಬೀಜ ಬ್ಯಾಂಕ್ ಬಲಗೊಳಿಸಲು ಸಾವಯವ ಬೇಸಾಯ ಅನುಸರಿಸಬೇಕು ಎಂದು ಇಂಪಾಲದ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊಎಸ್.ಅಯ್ಯಪ್ಪನ್ ಹೇಳಿದರು.
    ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಹಾರ ವಿಜ್ಞಾನಿಗಳ ಮತ್ತು ತಂತ್ರಜ್ಞರ ಸಂಘದಿಂದ ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಸಿಎಫ್‌ಟಿಆರ್‌ಐ) ‘ಪೌಷ್ಟಿಕ ಆಹಾರ ಭದ್ರತೆಗೆ ಸುಸ್ಥಿರ ಹಾಗೂ ನಿರಂತರ ಆಹಾರ ಪೂರೈಕೆಯ ಮಾರ್ಗಗಳು’ ಕುರಿತು ಸೋಮವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.


    ಸಾವಯವ ಕೃಷಿಗೆ ಮೂಲ ಆಕರವೇ ಬಿತ್ತನೆ ಬೀಜವಾಗಿದೆ. ಆದರೀಗ ಬಿತ್ತನೆ ಬೀಜದ ಕುರಿತು ರೈತರು ಸ್ವಾವಲಂಬನೆ ಕೈಬಿಟ್ಟು ಪರಾ ವಲಂಬಿ ಆಗಿದ್ದಾರೆ. ಸಾವಯವ ಕೃಷಿ ಬಲವಾಗಬೇಕಾದರೆ ಬಿತ್ತನ ಬೀಜ ಕೋಡೀಕರಣದ ಬ್ಯಾಂಕ್‌ಗೆ ಉತ್ತೇಜನ ನೀಡಬೇಕು ಎಂದರು.
    ರೈತರು ಒಂದೇ ರೀತಿ ಕೃಷಿ ಬೆಳೆಗೆ ಅಂಟಿಕೊಳ್ಳಬಾರದು. ಸಿರಿಧಾನ್ಯ, ಎಣ್ಣೆಕಾಳು ತೋಟಗಾರಿಕಾ ಬೆಳೆಗಳತ್ತ ಆಸಕ್ತಿ ವಹಿಸಬೇಕು. ಜತೆಗೆ, ಕೃಷಿಯಲ್ಲಿ ಪ್ರಗತಿ ಸಾಧಿಸಲು ನ್ಯಾನೊ ರಸಗೊಬ್ಬರ, ಸ್ಮಾರ್ಟ್ ಫಾರ್ಮಿಂಗ್ ಸೇರಿದಂತೆ ನೂತನ ವಿಧಾನ ಮೈಗೂಡಿಸಿಕೊಳ್ಳಬೇಕು ಎಂದರು.


    ಕೃಷಿ ಹಾಗೂ ಅರಣ್ಯ ಭೂಮಿ ಪ್ರಮಾಣ ಕುಸಿಯುತ್ತಿದೆ. ಮಣ್ಣಿನ ಫಲವತ್ತತೆ ನಾಶವಾಗುತ್ತಿದೆ. ಇದರ ಪರಿಣಾಮವಾಗಿ ಕೃಷಿ ಇಳು ವ ರಿಯೂ ಕಡಿಮೆಯಾಗಿದೆ. ಪೌಷ್ಟಿಕಾಂಶಯುಕ್ತ ಆಹಾರ ಉತ್ಪಾದನೆ ಸಹ ತಗ್ಗಿದೆ. ಇದು ಹೊಸ ರೀತಿ ಕೃಷಿ ಸಮಸ್ಯೆಗೆ ಕಾರಣವಾಗಿದೆ. ಆದ್ದರಿಂದ ಇದರಿಂದ ಹೊರ ಬರಲು ನ್ಯಾನೊ, ಕೃತಕ ಬುದ್ಧಿಮತ್ತೆ, ಜೈವಿಕ ತಂತ್ರಜ್ಞಾನಗಳ ಲಾಭ ಪಡೆದುಕೊಳ್ಳಬೇಕಾಗಿದೆ ಎಂದರು.


    ಜಾಗತಿಕ ತಾಪಮಾನ ಏರಿಕೆಯಿಂದ ಕೃಷಿ ಕ್ಷೇತ್ರ ಅನೇಕ ಸವಾಲು ಎದುರಿಸುತ್ತಿದ್ದು, ಅವುಗಳ ಪರಿಹಾರಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಅಗತ್ಯವಾಗಿದೆ. ದೇಶದಲ್ಲಿ 1947ರ ಹೊತ್ತಿನಲ್ಲಿ 1.5 ಕೋಟಿ ಟನ್ ಆಹಾರ ಉತ್ಪಾದನೆಯಾಗುತ್ತಿತ್ತು. ಇದೀಗ 31 ಕೋಟಿ ಟನ್ ಆಹಾರ ಬೆಳೆಯನ್ನು ಉತ್ಪಾದಿಸಲಾಗುತ್ತಿದೆ. ಕೃಷಿ ದೇಶದ ಜೀವಾಳ. ಎಲ್ಲ ವಲಯಗಳ ಚಾಲಕ ಶಕ್ತಿಯಾದ ಕೃಷಿ ಕಡೆಗಣನೆ ಸರಿಯಲ್ಲ ಎಂದರು


    ಹಾಲಿನ ಉತ್ಪನ್ನಗಳಲ್ಲಿ ವಿಶ್ವದ ಶೇ.25ರಷ್ಟು ಪಾಲು ಭಾರತ ಹೊಂದಿದೆ. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದರೂ, ರೈತನ ಕೃಷಿ ಭೂಮಿ ಹಿಡುವಳಿ ತಲಾ ನಾಲ್ಕು ಎಕರೆ ಮಾತ್ರ ಇದೆ. ಜಾಗತಿಕ ತಾಪಮಾನದ ಬಾಧಿತ ರಾಷ್ಟ್ರಗಳಲ್ಲಿ ದೇಶವು 7ನೇ ಸ್ಥಾನದಲ್ಲಿದೆ. ಹಸಿವು ಸೂಚ್ಯಂಕದಲ್ಲಿ ಕೊನೆಯ ದೇಶಗಳ ಸಾಲಿನಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.


    ದೇಶದಲ್ಲಿ ಲಕ್ಷಕ್ಕೆ 255 ಜನರು ಮಾತ್ರ ಸಂಶೋಧಕರಿದ್ದಾರೆ. ಉಳಿದ ದೇಶಗಳಿಗೆ ಹೋಲಿಸಿದರೆ ಇದು ಕಡಿಮೆ. ಈಗಲೂ ದೇಶದ ಜನರು ಸಂಶೋಧನೆಗೆ ಮಹತ್ವ ನೀಡಿಲ್ಲ. ಇದರಿಂದಾಗಿ ಪರಿಣಾಮಾತ್ಮಕ ಸಂಶೋಧನೆ ಬೆಳೆಯುತ್ತಿಲ್ಲ. ಹಳೆಯದ್ದೇ ಪುನರಾವರ್ತನೆಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
    ಐಸಿಎಆರ್ ಕೇಂದ್ರೀಯ ಮೀನುಗಾರಿಕಾ ಶಿಕ್ಷಣ ಸಂಸ್ಥೆಯ ಕುಲಪತಿ ಡಾ.ಸಿ.ಎನ್.ರವಿಶಂಕರ್, ಡಿಎಫ್‌ಆರ್‌ಎಲ್‌ನ ಡಾ.ಭಾವಾ, ಆಹಾರ ವಿಜ್ಞಾನಿಗಳ ಮತ್ತು ತಂತ್ರಜ್ಞಾರ ಸಂಘದ ಅಧ್ಯಕ್ಷ ಡಾ.ಎನ್.ಭಾಸ್ಕರ್, ಪ್ರಧಾನ ಕಾರ್ಯದರ್ಶಿ ಡಾ.ನಂದಿನಿ ಪಿ.ಶೆಟ್ಟಿ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts