More

    ಕೇಂದ್ರ-ರೈತರ ಬಿಕ್ಕಟ್ಟು ಶಮನಕ್ಕೆ ಸುಪ್ರೀಂ ಮಧ್ಯಪ್ರವೇಶ; ಪ್ರಜಾಪ್ರಭುತ್ವದ ಸೋಲು ಎಂದ ರೈತ ಮುಖಂಡ

    ಶಿವಮೊಗ್ಗ: ಹೊಸ ಕೃಷಿ ಕಾಯ್ದೆ ಜಾರಿ ಕುರಿತು ಉಂಟಾಗಿರುವ ಬಿಕ್ಕಟ್ಟು ಶಮನಕ್ಕೆ ಸುಪ್ರೀಂಕೋರ್ಟ್ ಸ್ವತಃ ರಾಷ್ಟ್ರಮಟ್ಟದ ಸಮಿತಿ ರಚಿಸಿ ನ್ಯಾಯಕೊಡಿಸಲು ಮುಂದಾಗಿರುವುದು ರೈತರ ತಾತ್ವಿಕ ಹೋರಾಟಕ್ಕೆ ದೊರೆತ ಮೊದಲ ಹೆಜ್ಜೆ ಆದರೂ ಇದು ಪ್ರಜಾಪ್ರಭುತ್ವದ ಸೋಲು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ಕೆ.ಟಿ.ಗಂಗಾಧರ್ ಕಳವಳ ವ್ಯಕ್ತಪಡಿಸಿದರು.
    ಕೇಂದ್ರ ಸರ್ಕಾರ ಮತ್ತು ರೈತರ ನಡುವಿನ ಬಿಕ್ಕಟ್ಟು ಶಮನಗೊಳಿಸುವುದಾಗಿ ಸುಪ್ರೀಂಕೋರ್ಟ್ ಮುಂದಾಗಿರುವುದು ಪ್ರಜಾಪ್ರಭುತ್ವದಲ್ಲಿ ರಚಿತವಾಗಿರುವ ಸಂಸತ್ ಪ್ರಭುತ್ವಕ್ಕೆ ಆದತಂಹ ಹಿನ್ನಡೆಯಾಗಿದೆ. ಈ ಸೋಲಿನ ಹೊಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಹೊರಬೇಕಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
    ರೈತರ ಸಮಸ್ಯೆಗಳನ್ನು ಅರಿತ ನ್ಯಾಯಾಧೀಶರು ಸಮಿತಿ ರಚನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಜನರಿಂದ ಆಯ್ಕೆಯಾದ ಸಂಸತ್ ರೈತರ ಸಮಸ್ಯೆಗಳನ್ನು ಅರಿತುಕೊಳ್ಳಲು ವಿಫಲವಾಗಿದೆ. ಜನಪ್ರತಿನಿಧಿಗಳಿಂದ ಆಯ್ಕೆಯಾದ ಪ್ರಧಾನಿ ಮೋದಿ ಅವರು ಮಾಡಬೇಕಾದ ಕೆಲಸವನ್ನು ಅರಿತ ಸುಪ್ರೀಂಕೋಟ್ ಕ್ರಮ ಕೈಗೊಳ್ಳುವಂತೆ ಮಾಡಿರುವುದು ಕೇಂದ್ರ ಸರ್ಕಾರದ ನಡೆ ತಲೆತಗ್ಗಿಸುವಂತಾಗಿದೆ ಎಂದರು.
    ಈಗಲಾದರೂ ಪ್ರಧಾನಿ ಚಳುವಳಿ ನಡೆಸುತ್ತಿರುವ ರೈತರನ್ನು ಕರೆದು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿ ಮಾಡಿದ ಅವರು, ಈ ಸಂಬಂಧ ಡಿ.21ರಂದು ಎನ್.ಡಿ.ಸುಂದರೇಶ್ ನೆನಪು-ಸ್ಮರಣೆ ಅಂಗವಾಗಿ ಸಂಯುಕ್ತ ಸಂಘಟನೆ ಒಕ್ಕೂಟವನ್ನು ಬೆಂಬಲಿಸಿ ಡಿಸಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆಚರಿಸಲಾಗುವುದು ಎಂದರು.
    ತಾಲೂಕು ಅಧ್ಯಕ್ಷ ಸಣ್ಣರಂಗಪ್ಪ, ಪ್ರಧಾನ ಕಾರ್ಯದರ್ಶಿ ಪಾಂಡುರಂಗಪ್ಪ, ಪರಮೇಶ್ವರಪ್ಪ, ಜಗದೀಶ್ ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts